ETV Bharat / business

ಲಾಕ್​ಡೌನ್: ಸರಕುಗಳ ವಿತರಣೆಯಲ್ಲಿ ಸಮಸ್ಯೆಯಾದ್ರೆ ಈ ನಂ.ಗೆ ತಿಳಿಸಿ, ಇಲ್ಲವೇ e-mail​ ಮಾಡಿ

ಯಾವುದೇ ಉತ್ಪಾದನೆ, ಸಾಗಣೆದಾರರು, ವಿತರಕರು, ಸಗಟು ವ್ಯಾಪಾರಿ ಅಥವಾ ಇ-ಕಾಮರ್ಸ್ ಕಂಪನಿಗಳು ಸರಕು ಸಾಗಣೆ ಮತ್ತು ವಿತರಣೆಯಲ್ಲಿ ಅಥವಾ ಸಂಪನ್ಮೂಲಗಳ ಕ್ರೋಢೀಕರಣದಲ್ಲಿ ತಳಮಟ್ಟದ ತೊಂದರೆಗಳನ್ನು ಎದುರಿಸುತ್ತಿದ್ದರೆ ಅದ ಬಗ್ಗೆ ಡಿಪಿಐಐಟಿಗೆ ತಿಳಿಸಬಹುದಾಗಿದೆ.

author img

By

Published : Mar 26, 2020, 4:01 PM IST

Lockdown
ಲಾಕ್​ಡೌನ್

ನವದೆಹಲಿ: ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಕೊರೊನಾ ವೈರಸ್ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಸಾಗಣೆ ಮತ್ತು ವಿತರಣೆಯ ನೈಜ ಸ್ಥಿತಿಯ ಮೇಲ್ವಿಚಾರಣೆಗೆ ನಿಯಂತ್ರಣ ಕೊಠಡಿಯನ್ನು ತೆರೆದಿದೆ.

ದೇಶಾದ್ಯಂತ ವಿಧಿಸಿರುವ ಲಾಕ್​ಡೌನ್​ನಿಂದಾಗಿ ನಾಗರಿಕರು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾರ್ಚ್ 25ರಿಂದ ಏಪ್ರಿಲ್ 14ರವರೆಗಿನ ಲಾಕ್ ಡೌನ್ ಅವಧಿಯಲ್ಲಿ ಮಧ್ಯಸ್ಥಗಾರನಾಗಿ ಇದು ಕಾರ್ಯ ನಿರ್ವಹಿಸಲಿದೆ.

ಯಾವುದೇ ಉತ್ಪಾದನೆ, ಸಾಗಣೆದಾರರು, ವಿತರಕರು, ಸಗಟು ವ್ಯಾಪಾರಿ ಅಥವಾ ಇ-ಕಾಮರ್ಸ್ ಕಂಪನಿಗಳು ಸರಕು ಸಾಗಣೆ ಮತ್ತು ವಿತರಣೆಯಲ್ಲಿ ಅಥವಾ ಸಂಪನ್ಮೂಲಗಳ ಕ್ರೋಢೀಕರಣದಲ್ಲಿ ತಳಮಟ್ಟದ ತೊಂದರೆಗಳನ್ನು ಎದುರಿಸುತ್ತಿದ್ದರೆ, ಅವುಗಳ ಬಗ್ಗೆ ಡಿಪಿಐಐಟಿಗೆ ತಿಳಿಸಬಹುದು ಎಂದು ಡಿಪಿಐಐಟಿ ಹೇಳಿದೆ.

ಕುಂದುಕೊರತೆಗಳನ್ನು "controlroom-dpiit@gov.in"ಗೆ ಇ-ಮೇಲ್ ಮಾಡಬಹುದು ಅಥವಾ ದೂರವಾಣಿ ಮೂಲಕ ತಿಳಿಸಬಯಸುವವರು 011-23062487ಗೆ ಕರೆ ಮಾಡಬಹುದು. ಬೆಳಗ್ಗೆ 8ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸುತ್ತದೆ.

ಈ ನಿಯಂತ್ರಣ ಕೊಠಡಿಯ ಮೂಲಕ ವಿವಿಧ ಪಾಲುದಾರರು ವರದಿ ಮಾಡಿದ ಸಮಸ್ಯೆಗಳನ್ನು ಸಂಬಂಧಪಟ್ಟ ರಾಜ್ಯ ಸರ್ಕಾರ, ಜಿಲ್ಲೆ, ಪೊಲೀಸ್ ಅಧಿಕಾರಿಗಳು ಮತ್ತು ಇತರ ಏಜೆನ್ಸಿಗಳೊಂದಿಗೆ ಪರಿಹರಿಸಲಾಗುವುದು.

ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಕಂಪನಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿರುವಾಗ ವಿವಿಧ ರಾಜ್ಯಗಳಲ್ಲಿ ಡೆಲಿವರಿ ಹುಡುಗರ ಮೇಲೆ ಹಲ್ಲೆಯಂತಹ ಘಟನೆಗಳ ನಡಯುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು. ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ದೇಶದಲ್ಲಿ ಅಗತ್ಯ ವಸ್ತುಗಳ ಸುಗಮ ಪೂರೈಕೆ ಕುರಿತು ಡಿಪಿಐಐಟಿ, ವ್ಯಾಪಾರಿಗಳು ಮತ್ತು ಇ-ಕಾಮರ್ಸ್ ಸಂಸ್ಥೆಗಳೊಂದಿಗೆ ಬುಧವಾರ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.