ETV Bharat / business

ಕೊರೊನಾ ಆದಾಯ ನಷ್ಟಕ್ಕೆ 14 ರಾಜ್ಯಗಳಿಗೆ ಕೇಂದ್ರದ 6,195 ಕೋಟಿ ರೂ. ಫಂಡ್​: ಕರ್ನಾಟಕಕ್ಕೆ ಸಿಗದ ಅನುದಾನ! - ಹಣಕಾಸು ಆಯೋಗದ ಅನುದಾನ ನೀತಿ

15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ ಕೊರೊನಾ ಸಾಂಕ್ರಾಮಿಕ ಪ್ರೇರೇಪಿತ ಆದಾಯ ಕೊರತೆ ಅನುದಾನದ 8ನೇ ಸಮ ಮಾಸಿಕ ಕಂತಿನಡಿ 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

Pm Modi
ಮೋದಿ
author img

By

Published : Nov 10, 2020, 6:20 PM IST

ನವದೆಹಲಿ: ನೆರೆ ಪರಿಹಾರ ಸೇರಿದಂತೆ ಇತರೆ ವಿಚಾರಗಳಲ್ಲಿ ಕರ್ನಾಟಕವನ್ನು ಕಡೆಗಣಿಸಿಕೊಂಡು ಬರುತ್ತಿರುವ ಕೇಂದ್ರದ ಮಲತಾಯಿ ಧೋರಣೆ ಮತ್ತೆ ಮುಂದುವರಿದಿದೆ. ಕೊರೊನಾ ಮತ್ತು ಲಾಕ್​ಡೌನ್​ನಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದಂತೆ ಕಂಡು ಬರುತ್ತಿದೆ.

15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ ಕೊರೊನಾ ಸಾಂಕ್ರಾಮಿಕ ಪ್ರೇರೇಪಿತ ಆದಾಯ ಕೊರತೆ ಅನುದಾನದ 8ನೇ ಸಮ ಮಾಸಿಕ ಕಂತಿನಡಿ 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಒಟ್ಟು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ರಿಲೀಸ್​​ ಆಗಿದ್ದು, 15ನೇ ಹಣಕಾಸು ಸಚಿವಾಲಯ ಈ ಕುರಿತು ಶಿಫಾರಸು ಮಾಡಿತ್ತು. ಆದರೆ ಕರ್ನಾಟಕಕ್ಕೆ ಯಾವುದೇ ಅನುದಾನ ಸಿಕ್ಕಿಲ್ಲ.

  • Based on the 15th Finance Commission interim recommendations, the Govt has released Rs 6,195.08 crore to 14 states on account of the eighth equated monthly installment of Post Devolution Revenue Deficit Grant. Details of the release: pic.twitter.com/VHUPZj06sT

    — NSitharamanOffice (@nsitharamanoffc) November 10, 2020 " class="align-text-top noRightClick twitterSection" data=" ">

ಆಂಧ್ರಪ್ರದೇಶ, ಅಸ್ಸೋಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳಗಳು ಅನುದಾನ ಪಡೆದಿರುವ 14 ರಾಜ್ಯಗಳಾಗಿವೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಇದೇ ರೀತಿಯ ಅನುದಾನ ಬಿಡುಗಡೆ ಮಾಡಲಾಗಿತ್ತು.

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಅಡೆತಡೆಗಳಿಂದಾಗಿ ಕೇಂದ್ರ ಮತ್ತು ರಾಜ್ಯಗಳು ಆದಾಯದ ಕೊರತೆಯೊಂದಿಗೆ ಹೋರಾಡುತ್ತಿವೆ. ರಾಜ್ಯಗಳಿಗೆ ಕೇಂದ್ರದ ನೆರವು ನೀಡುವ ಕುರಿತು ನಿರಂತರ ಚರ್ಚೆ ನಡೆಯುತ್ತಿವೆ. ಜಿಎಸ್​ಟಿ ಪರಿಹಾರ ಸೆಸ್​ನ ಕೊರತೆಯು ಇತ್ತೀಚಿನ ತಿಂಗಳಲ್ಲಿ ಹೆಚ್ಚು ಗಮನ ಸೆಳೆಯಿತು. ಜಿಎಸ್​ಟಿ ಪರಿಹಾರ ಸೆಸ್ ಕೊರತೆ ಪೂರೈಸಲು ಹಣಕಾಸು ಸಚಿವಾಲಯವು ಇತ್ತೀಚೆಗೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ವಿಂಡೋ ಅಡಿಯಲ್ಲಿ 6,000 ಕೋಟಿ ರೂ. ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.