ETV Bharat / business

ಮೋದಿ 2.0 ಸರ್ಕಾರದ 2ನೇ ಬಜೆಟ್​​​​​​ ಸಿದ್ಧತಾ ತಂಡಕ್ಕೆ ಹಿರಿಯ ಅಧಿಕಾರಿಗಳ ಕೊರತೆ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ 2020-2021ರ ಬಜೆಟ್​​ ಸಿದ್ಧತಾ ತಂಡಕ್ಕೆ ಉನ್ನತ ಅಧಿಕಾರಿಗಳ ಅಭಾವ ಎದುರಾಗಿದೆ. ಆರ್ಥಿಕ ಬೆಳವಣಿಗೆಯ ಹಿಂಜರಿತದ ಮರ್ಧಯೆಯೂ ವಿತ್ತೀಯ ಶಿಸ್ತಿನ ಆಯವ್ಯಯ ಮಂಡಿಸುವ ಜವಾಬ್ದಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿದೆ. ಇಂತಹ ಸಂದಿಗ್ಧತೆಯಲ್ಲಿ ಹಣಕಾಸು ಸಚಿವಾಲಯದ ಬಜೆಟ್ ತಯಾರಿಕಾ ತಂಡಕ್ಕೆ ಪೂರ್ಣ ಪ್ರಮಾಣದ ಖರ್ಚು ಕಾರ್ಯದರ್ಶಿ ಸೇರಿದಂತೆ ಇತರೆ ಇಬ್ಬರು ಉನ್ನತ ಅಧಿಕಾರಿಗಳ ಕೊರತೆ ಕಂಡುಬಂದಿದೆ.

Budget Preparation
ಬಜೆಟ್​ ಸಿದ್ಧತೆ
author img

By

Published : Dec 9, 2019, 10:51 AM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ 2020-2021ರ ಬಜೆಟ್​​ ಸಿದ್ಧತಾ ತಂಡಕ್ಕೆ ಉನ್ನತ ಅಧಿಕಾರಿಗಳ ಅಭಾವ ಎದುರಾಗಿದೆ.

ಆರ್ಥಿಕ ಬೆಳವಣಿಗೆಯ ಹಿಂಜರಿತದ ಮರ್ಧಯೆಯೂ ವಿತ್ತೀಯ ಶಿಸ್ತಿನ ಆಯವ್ಯಯ ಮಂಡಿಸುವ ಜವಾಬ್ದಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲಿದೆ. ಇಂತಹ ಸಂದಿಗ್ಧತೆಯಲ್ಲಿ ಹಣಕಾಸು ಸಚಿವಾಲಯದ ಬಜೆಟ್ ತಯಾರಿಕಾ ತಂಡಕ್ಕೆ ಪೂರ್ಣ ಪ್ರಮಾಣದ ಖರ್ಚು ಕಾರ್ಯದರ್ಶಿ ಸೇರಿದಂತೆ ಇತರೆ ಇಬ್ಬರು ಉನ್ನತ ಅಧಿಕಾರಿಗಳ ಕೊರತೆ ಕಂಡುಬಂದಿದೆ.

ಖರ್ಚು ಕಾರ್ಯದರ್ಶಿ ಹುದ್ದೆಯ ಜೊತೆಗೆ ಇಡೀ ಬಜೆಟ್ ತಯಾರಿಕೆ ಪ್ರಕ್ರಿಯೆಯಲ್ಲಿ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬರಾದ ಜಂಟಿ ಕಾರ್ಯದರ್ಶಿ (ಬಜೆಟ್) ಹುದ್ದೆಯೂ ಸುಮಾರು ಮೂರು ತಿಂಗಳಿಂದ ಖಾಲಿಯಾಗಿದೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರಾಗಿರುವ ಜಿ.ಸಿ.ಮುರ್ಮು ಜಂಟಿ ಕಾರ್ಯದರ್ಶಿ (ಬಜೆಟ್) ಹುದ್ದೆಯಲ್ಲಿ ಇದ್ದರು. ಮುರ್ಮು ಅವರು ಅಕ್ಟೋಬರ್ 29ರಂದು ಖರ್ಚು ಕಾರ್ಯದರ್ಶಿ ಹುದ್ದೆಯನ್ನು ತ್ಯಜಿಸಿದ್ದರು. ಬಳಿಕ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾದ ಅಟಾನು ಚಕ್ರವರ್ತಿಗೆ ಹೆಚ್ಚುವರಿಯಾಗಿ ಜಂಟಿ ಕಾರ್ಯದರ್ಶಿ ಹುದ್ದೆ ಸಹ ನೀಡಲಾಯಿತು.

2020ರ ಫೆಬ್ರವರಿ 1ರಂದು 2020-21ರ ಪೂರ್ಣ ಪ್ರಮಾಣದ ಬಜೆಟ್​​ ಮಂಡನೆಯಾಗಬಹುದು. ಆರ್ಥಿಕತೆ ಬೆಳವಣಿಗೆ ಆರು ವರ್ಷಗಳ ಕನಿಷ್ಠಕ್ಕೆ ತಲುಪಿದ್ದು, ಇದನ್ನು ರಚನಾತ್ಮಕ ಸುಧಾರಣೆಗಳ ಮೂಲಕ ಹೊರತರಲಾಗುವುದೇ ಎಂಬ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.