ನವದೆಹಲಿ: 2021-22ರ ಕೇಂದ್ರ ಬಜೆಟ್ ಅನ್ನು ಪ್ರಗತಿಪರ ಎಂದು ಕರೆದ ಬಿಹಾರ ಉಪಮುಖ್ಯಮಂತ್ರಿ ರೇಣು ದೇವಿ, ಬಜೆಟ್ ನಂತರ ದೇಶವು ಮತ್ತಷ್ಟು ಪ್ರಗತಿ ಸಾಧಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಊಹಿಸಿದಂತೆ ದೇಶವನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಹೇಳಿದರು.
ಕಾರ್ಮಿಕರಿಂದ ಹಿಡಿದು ಮೇಲ್ವರ್ಗದವರೆಗಿನ ಸಮಾಜದ ಎಲ್ಲಾ ವರ್ಗದವರು ಬಜೆಟ್‌ನಿಂದ ಪ್ರಯೋಜನ ಪಡೆಯುತ್ತಾರೆ. ಈ ಬಜೆಟ್ ಆರ್ಥಿಕತೆಯನ್ನು ಬಲಪಡಿಸಲು ನೆರವಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಇದು ಎಲ್ಲ ವಿಭಾಗಗಳ ಆಕಾಂಕ್ಷೆಗಳನ್ನು ಈಡೇರಿಸುವ ಅಂತರ್ಗತ ಬಜೆಟ್. ಸರ್ವತೋಮುಖ ಕಲ್ಯಾಣ ಮತ್ತು ಸರ್ವಾಂಗೀಣ ಕಲ್ಯಾಣಕ್ಕಾಗಿ ಮೀಸಲಿಟ್ಟ ಬಜೆಟ್‌ಗಾಗಿ ಪ್ರಧಾನಿ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು. ರೈತರ ಆದಾಯವನ್ನು ದ್ವಿಗುಣಗೊಳಿಸಲು ಬಜೆಟ್ ಹಾದಿ ಮಾಡಿಕೊಡುತ್ತದೆ ಎಂದರು.
ಇದನ್ನೂ ಓದಿ: ನಿರ್ಮಲಾ ಮಂಡಿಸಿದ ಬಜೆಟ್ ಆರ್ಥಿಕತೆಗೆ ತೋಳ್ಬಲ: ಆದ್ರೆ, ಸಾಲದ ಪ್ರಮಾಣ ಶೇ 90ಕ್ಕೆ ಜಿಗಿಯುತ್ತೆ- S&P
ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಈ ಹಣಕಾಸು ವರ್ಷದ ಆರಂಭದಿಂದ ಮುಂಬರುವ 5 ವರ್ಷಗಳವರೆಗೆ 1.97 ಲಕ್ಷ ಕೋಟಿ ರೂ. ಯೋಜನೆಗಳನ್ನು ಘೋಷಿಸಲಾಗಿದೆ. ಕೊರೊನಾ ಲಸಿಕೆಗಾಗಿ 35 ಸಾವಿರ ಕೋಟಿ ರೂ. ನಿಧಿ ಘೋಷಿಸಲಾಗಿದೆ. ಕೊರೊನಾ ಮುಕ್ತ ಭಾರತಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದರು.