ನವದೆಹಲಿ: ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ 2014ರಿಂದ 2019ರ ವೇಳೆಗೆ 284 ಡಾಲರ್ನಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ಬಜೆಟ್ ಮಂಡನ ವೇಳೆ ಈ ಮಾಹಿತಿ ನೀಡಿದ ಅವರು 2009 ರಿಂದ 2014ರವರೆಗೆ ಭಾರತದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯು 190 ಡಾಲರ್ಗಳಷ್ಟಿತ್ತು. ಅದು 2014ರಿಂದ 201919ರ ವೇಳೆಗೆ 284 ಡಾಲರ್ಗೆ ಏರಿಕೆಯಾಗಿದೆ ಮಾಹಿತಿ ನೀಡಿದರು.
2019ರ ಹಣಕಾಸು ವರ್ಷದ ಮಧ್ಯದ ಅವಧಿ ವೇಳೆಗೆ ವಿದೇಶಿ ಒಳಹರಿವು ಶೇ.15 ರಿಂದ ಶೇ.26 ಕ್ಕೆ ಏರಿಕೆಯಾಗಿದೆ. ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್, ಆಟೋಮೊಬೈಲ್, ವ್ಯಾಪಾರ, ದೂರಸಂಪರ್ಕ ಸೇವೆಗಳು ಒಳಹರಿವು ಹೆಚ್ಚಾಗಲು ಪ್ರಮುಖ ಅಂಶಗಳಾಗಿದ್ದವು ಎಂದು ಸೀತಾರಾಮನ್ ಹೇಳಿದ್ದಾರೆ.
ಈ ಹಿಂದಿನ ಆರ್ಥಿಕ ವರ್ಷದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಸಿಂಗಪುರ ದೇಶವು ಪ್ರಮುಖ ಸ್ಥಾನದಲ್ಲಿದ್ದು, 8 ಬಿಲಿಯನ್ ಯುಎಸ್ ಡಾಲರ್ನಷ್ಟು ಭಾರತದಲ್ಲಿ ಹೂಡಿಕೆ ಮಾಡಿತ್ತು. ವಿದೇಶಿ ಬಂಡವಾಳ ಎಂಬುದು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ದೇಶದ ಮೂಲ ಸೌಕರ್ಯವನ್ನು ವೃದ್ಧಿಪಡಿಸಲು ಇದು ಸಹಕಾರಿಯಾಗಿದೆ ಎಂದು ಸಚಿವರು ವಿವರಿಸಿದ್ದಾರೆ.