ETV Bharat / business

ಕೇಂದ್ರ ಬಜೆಟ್​: ₹ 4,000 ಆಮದು ಸುಂಕ ತಗ್ಗಿಸಿ, ಮೊಬೈಲ್​ ಉದ್ಯಮದ ಆಶೋತ್ತರ ಈಡೇರಿಸುತ್ತಾರಾ ಸೀತಾರಾಮನ್​?

ಕಂದಾಯ ಇಲಾಖೆಗೆ ನೀಡಿದ ಪ್ರಾತಿನಿಧ್ಯದಲ್ಲಿ ಆಮದು ಸುಂಕದಲ್ಲಿ ಶೇ 20ರಷ್ಟು ಕಡಿತ ಅಥವಾ ಪ್ರತಿ ಮೊಬೈಲ್‌ಗೆ 4,000 ರೂ. ಇಳಿಕೆ ಈ ಎರಡಲ್ಲಿ ಯಾವುದರೂ ಒಂದನ್ನು ಅನುಷ್ಠಾನಕ್ಕೆ ತರುವಂತೆ ಐಸಿಇಎ ಆಗ್ರಹಿಸಿದೆ. ಪಿಎಲ್ಐ ಯೋಜನೆಯ ಹಿಂಭಾಗದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲು ಬಲಿಷ್ಠವಾದ ದೇಶೀಯ ಉತ್ಪಾದನೆ ಮತ್ತು ಉದ್ಯಮ ಸಿದ್ಧತೆಯ ದೃಷ್ಟಿಯಿಂದ ಇದನ್ನು ಪರಿಗಣಿಸುವಂತೆ ಮನವರಿಕೆ ಮಾಡಿದೆ.

mobile phones
ಮೊಬೈಲ್​ ಫೋನ್
author img

By

Published : Jan 1, 2021, 12:50 PM IST

ನವದೆಹಲಿ: ಮುಂಬರಲಿರುವ ಬಜೆಟ್​ನಲ್ಲಿ​ ಬೂದು ಮಾರುಕಟ್ಟೆಯ ಛಾಯೆ ನಿಗ್ರಹಿಸಲು ಮೊಬೈಲ್ ಫೋನ್‌ಗಳ ಆಮದು ಸುಂಕ ಕಡಿಮೆ ಮಾಡುವಂತೆ ಭಾರತದ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ​​(ಐಸಿಇಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಇತ್ತೀಚೆಗೆ ಕಂದಾಯ ಇಲಾಖೆಗೆ ನೀಡಿದ ಪ್ರಾತಿನಿಧ್ಯದಲ್ಲಿ ಆಮದು ಸುಂಕದಲ್ಲಿ ಶೇ 20ರಷ್ಟು ಕಡಿತ ಅಥವಾ ಪ್ರತಿ ಮೊಬೈಲ್‌ಗೆ 4,000 ರೂ. ಇಳಿಕೆ ಈ ಎರಡಲ್ಲಿ ಯಾವುದರೂ ಒಂದನ್ನು ಅನುಷ್ಠಾನಕ್ಕೆ ತರುವಂತೆ ಐಸಿಇಎ ಆಗ್ರಹಿಸಿದೆ. ಪಿಎಲ್ಐ ಯೋಜನೆಯ ಹಿಂಭಾಗದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲು ಬಲಿಷ್ಠವಾದ ದೇಶೀಯ ಉತ್ಪಾದನೆ ಮತ್ತು ಉದ್ಯಮ ಸಿದ್ಧತೆಯ ದೃಷ್ಟಿಯಿಂದ ಇದನ್ನು ಪರಿಗಣಿಸುವಂತೆ ಮನವರಿಕೆ ಮಾಡಿದೆ.

ಭಾರತವು ಹಲವು ದೇಶಗಳಿಗೆ ಲಕ್ಷಾಂತರ ಫೋನ್‌ಗಳನ್ನು ರಫ್ತು ಮಾಡುತ್ತಿರುವ ಸಮಯದಲ್ಲಿ, ಹೆಚ್ಚಿನ ಆಮದು ಸುಂಕದ ಗೋಡೆ ಕಟ್ಟುವುದು ಅರ್ಥವಿಲ್ಲದ ತರ್ಕವಾಗಿದೆ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ಅಂದಾಜಿನ ಪ್ರಕಾರ, ಭಾರತವು 2018-19ರಲ್ಲಿ 3.8 ಶತಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್‌ ರಫ್ತು ಮಾಡಿದೆ. ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಫೋನ್ ರಫ್ತುದಾರರಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಆತ್ಮನಿರ್ಭರ ಭಾರತದ ನಿಮಿತ್ತ ಇತ್ತೀಚೆಗೆ ಘೋಷಿಸಲಾದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಉತ್ತಮ ಫಲಿತಾಂಶ ನೀಡುತ್ತಿದೆ.
ಇದನ್ನೂ ಓದಿ: ಫೋರ್ಡ್- ಮಹೀಂದ್ರಾ ಜಂಟಿ ಸಹಭಾಗಿತ್ವ ಒಪ್ಪಂದಕ್ಕೆ ಇತಿಶ್ರೀ!

ಉತ್ಪಾದನಾ - ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್ಐ) ಅನ್ನು ಏಪ್ರಿಲ್ 2020ರಲ್ಲಿ ಪ್ರಾರಂಭಿಸಲಾಯಿತು. ಈಗ ಹಲವು ದೊಡ್ಡ ಕಂಪನಿಗಳು ಈ ಯೋಜನೆಗೆ ಸೇರಿಕೊಂಡಿವೆ. ಮುಂಬರುವ 5 ವರ್ಷಗಳಲ್ಲಿ 10.50 ಲಕ್ಷ ಕೋಟಿ ರೂ. ಮೌಲ್ಯದ ಫೋನ್ ತಯಾರಿಸಲು ಯೋಜಿಸಲಾಗಿದೆ. 9 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಐಟಿ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.

ಪಿಎಲ್‌ಐ ಯೋಜನೆಯಡಿ ಸ್ಯಾಮ್‌ಸಂಗ್ ಮತ್ತು ಐಫೋನ್ ತಯಾರಕ ಆ್ಯಪಲ್‌ನ ಗುತ್ತಿಗೆ ತಯಾರಕರಾದ ಫಾಕ್ಸ್‌ಕಾನ್ ಹೊನ್ ಹೈ, ವಿಸ್ಟ್ರಾನ್ ಮತ್ತು ಪೆಗಟ್ರಾನ್ ಕಂಪನಿಗಳು ಹೊಸ ಘಟಕ ತೆರೆಯಲು ಮತ್ತು ಭಾರತದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ತಮ್ಮ ಸಾಮರ್ಥ್ಯ ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದವು.

ಗ್ರೇ ಮಾರುಕಟ್ಟೆ ಕಳವಳ

ಹೈ-ಎಂಡ್ ಫೋನ್‌ಗಳು ದೇಶದ ಒಟ್ಟು ಮೊಬೈಲ್ ಫೋನ್ ಮಾರಾಟದಲ್ಲಿ ಶೇ 5ಕ್ಕಿಂತ ಕಡಿಮೆ ಇದೆ. ಹೆಚ್ಚಿನ ಆಮದು ಸುಂಕಗಳು ಬೂದು ಮಾರುಕಟ್ಟೆಯ ಅಣಬೆಗೆ ಕಾರಣವಾಗಿವೆ. ಹೈ-ಎಂಡ್ ಐಫೋನ್ ಮಾದರಿಯು ಭಾರತದಲ್ಲಿನ ಬೆಲೆಗೆ ಹೋಲಿಸಿದರೆ ದುಬೈನಲ್ಲಿ ಸುಮಾರು 40,000 ರೂ.ಗೆ ಗ್ರಾಹಕರಿಗೆ ಸಿಗುತ್ತವೆ. ಬೆಲೆಯ ದೃಷ್ಟಿಕೋನದಿಂದ ಇದೊಂದು ದೊಡ್ಡ ವ್ಯತ್ಯಾಸವಾಗಿದೆ.

ವೈರಸ್ ನಂತರದ ಯುಗದಲ್ಲಿ ಬೂದು ಮಾರುಕಟ್ಟೆಯನ್ನು ನಿಗ್ರಹಸಬೇಕಿದೆ. ಚೇತರಿಕೆ ಮತ್ತು ಪೂರೈಕೆ ಸರಪಳಿ ಮರುಕಳಿಸಿದಂತೆ ಮೊಬೈಲ್ ಹ್ಯಾಂಡ್‌ಸೆಟ್ ಉದ್ಯಮದ ಸ್ಪರ್ಧಾತ್ಮಕತೆ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಸೈಬರ್ ಮೀಡಿಯಾ ರಿಸರ್ಚ್‌ನ ಹೆಡ್-ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್​ನ ಪ್ರಭು ರಾಮ್ ಹೇಳಿದರು.

ಸಂಪೂರ್ಣ ತಯಾರಿಸಿದ ಫೋನ್‌ಗಳ ಕಸ್ಟಮ್ಸ್ ಸುಂಕವು 2018-19ರ ಬಜೆಟ್‌ನಲ್ಲಿ ಶೇ 15 ರಿಂದ 20ಕ್ಕೆ ಏರಿದೆ. ಆಮದು ನಿರುತ್ಸಾಹಗೊಳಿಸಲು ಮತ್ತು ಮೇಕ್​ ಇನ್​ ಇಂಡಿಯಾ ಪ್ರೋತ್ಸಾಹಿಸಲು 2019-20ರ ಬಜೆಟ್‌ನಲ್ಲಿ ಹೆಚ್ಚುವರಿ ಶೇ10ರಷ್ಟು ಸೇವಾ ಕಲ್ಯಾಣ ಸೆಸ್ ಅನ್ನು ಮತ್ತೆ ವಿಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.