ನವದೆಹಲಿ: ಪಿಎಸ್ಯು ತೈಲ ಸಂಸ್ಕರಣಾ ಮತ್ತು ಚಿಲ್ಲರೆ ವ್ಯಾಪಾರ ಯೂನಿಟ್ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (ಬಿಪಿಸಿಎಲ್) ಖಾಸಗೀಕರಣದ ಬಳಿಕ ಅಡುಗೆ ಅನಿಲ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳಿಗೆ ಸಬ್ಸಿಡಿ ಪಡೆಯುವುದನ್ನು ಮುಂದುವರಿಸಬಹುದು ಎಂದು ಸಂಭಾವ್ಯ ಹೂಡಿಕೆದಾರರಿಗೆ ಸರ್ಕಾರ ಸ್ಪಷ್ಟಪಡಿಸಿದೆ.
ಹೂಡಿಕೆಯ ಭಾಗವಾಗಿ ಖಾಸಗೀಕರಣಗೊಂಡ ಕಂಪನಿಯ ನಿರ್ವಹಣೆಯ ಬದಲಾವಣೆ ನಂತರ ಪ್ರಸ್ತುತ ವ್ಯವಸ್ಥೆ ಬದಲಾಯಿಸಲು ಆಗುವುದಿಲ್ಲ ಎಂಬುದು ತಿಳಿದುಬಂದಿದೆ.
ಕಂಪನಿಯ ಸರ್ಕಾರದ ಪಾಲು ಮಾರಿದ ಬಳಿಕ ಹೊಸ ಮಾಲೀಕರು ಸಬ್ಸಿಡಿ ಭರಿಸುತ್ತಾರೆಯೇ ಎಂದು ಬಿಪಿಸಿಎಲ್‌ಗೆ ಹಲವು ಸಂಭಾವ್ಯ ಬಿಡ್ದಾರರು ತಮ್ಮ ಪ್ರಶ್ನೆಯಲ್ಲಿ ಅಡುಗೆ ಅನಿಲದ ಸಬ್ಸಿಡಿ ವಿಷಯ ಎತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೈಲ ಕಂಪನಿಗಳು ಸಬ್ಸಿಡಿ ಮೊತ್ತ ಪಾವತಿಸುವ ಮತ್ತು ಸರ್ಕಾರವು ಅಂತಹ ಪಾವತಿಗಳಿಗೆ ಮರುಪಾವತಿಯ ಪ್ರಸ್ತುತ ವ್ಯವಸ್ಥೆ ಯಥಾವತ್ತಾಗಿ ಮುಂದುವರಿಯುತ್ತದೆ ಎಂದು ಸರ್ಕಾರದ ಮುಖ್ಯಸ್ಥರು ಸ್ಪಷ್ಟಪಡಿಸಿದರು.
ಖಾಸಗಿ ತೈಲ ಕಂಪನಿಗಳಾದ ರಿಲಯನ್ಸ್, ನಾಯರಾ ಎನರ್ಜಿ ಅಡುಗೆ ಅನಿಲಕ್ಕೆ ಸರ್ಕಾರದಿಂದ ಯಾವುದೇ ಸಬ್ಸಿಡಿ ಬೆಂಬಲ ಪಡೆಯುವುದಿಲ್ಲ. ಹೀಗಾಗಿ ಈ ಕಂಪನಿಗಳು ದೇಶಿಯ ಎಲ್‌ಪಿಜಿ ಸಿಲಿಂಡರ್‌ಗಳನ್ನು ಮಾರಾಟ ಮಾಡಿದರೆ, ಅದಕ್ಕೆ ಮಾರುಕಟ್ಟೆ ದರದಲ್ಲಿ ಬೆಲೆ ನಿಗದಿಪಡಿಸಲಾಗುತ್ತದೆ.
ಬಿಪಿಸಿಎಲ್‌ನಲ್ಲಿ 8 ಕೋಟಿಗೂ ಅಧಿಕ ಚಂದಾದಾರರ ಸ್ಥಿತಿ ಬದಲಾಯಿಸಲು ಸರ್ಕಾರ ಬಯಸಿದೆ. ಅವರೆಲ್ಲ ಖಾಸಗೀಕರಣದ ಬಳಿಕ ಸಬ್ಸಿಡಿ ಪಡೆಯುತ್ತಾರೆ. ಆದರೆ ಅಂತಹ ಸಬ್ಸಿಡಿಯನ್ನು ಮೊದಲು ಕಂಪನಿಯು ಪಾವತಿಸಬೇಕಾಗಿರುವುದರಿಂದ, ಬಿಪಿಸಿಎಲ್‌ಗೆ ಬಿಡ್ಡಿಂಗ್ ನಿಯತಾಂಕಗಳನ್ನು ಮಾಡಬೇಕಾಗುತ್ತದೆ ಎಂದು ಬಿಪಿಸಿಎಲ್‌ನ ಸಂಭಾವ್ಯ ಬಿಡ್ದಾರರಲ್ಲಿ ಒಬ್ಬರು ಹೇಳಿದ್ದಾರೆ.