ETV Bharat / business

ಪ್ರಾದೇಶಿಕ ತಲಾ ಜಿಡಿಪಿ: ಬಾಂಗ್ಲಾ, ನೇಪಾಳ, ಭೂತಾನ್​ಗಿಂತ ಭಾರತದ್ದು ಕಳಪೆ ಬೆಳವಣಿಗೆ! - ಭಾರತದ ತಲಾ ಆದಾಯ ಜಿಡಿಪಿ

ತಲಾ ಜಿಡಿಪಿ ಪರಿಭಾಷೆಯಲ್ಲಿ ಕೆಲವು ವರ್ಷಗಳ ಹಿಂದೆ ಭಾರತವು ಬಾಂಗ್ಲಾದೇಶಕ್ಕಿಂತ ಗಮನಾರ್ಹವಾಗಿ ಮೇಲಿತ್ತು. ಆದರೆ ದೇಶದ ವೇಗವಾಗಿ ಏರುತ್ತಿರುವ ರಫ್ತುಗಳಿಂದಾಗಿ ಈ ಅಂತರ ಗಣನೀಯವಾಗಿ ಹಿನ್ನಡೆಯಾಗಿದೆ. ಇದಲ್ಲದೆ ಮಧ್ಯದ ಅವಧಿಯಲ್ಲಿ ಭಾರತದ ಉಳಿತಾಯ ಮತ್ತು ಹೂಡಿಕೆಗಳ ಉತ್ಸಾಹ ಕಂಡುಬರದಿದ್ದರೂ ಬಾಂಗ್ಲಾದೇಶದಲ್ಲಿ ಈ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

Economy
ಆರ್ಥಿಕತೆ
author img

By

Published : Oct 14, 2020, 11:31 AM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದ ಜಿಡಿಪಿ ಆಘಾತದ ನೆರಳಿನಲ್ಲಿರುವ ಭಾರತ, ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತ್ತೀಚಿನ ವಿಶ್ವ ಆರ್ಥಿಕ ಔಟ್‌ಲುಕ್‌ ವರದಿಯು ಕೆಲವು ಗಂಭೀರವಾದ ಸುದ್ದಿಗಳು ದೇಶಿ ಆರ್ಥಿಕತೆ ಬಗ್ಗೆ ಉಲ್ಲೇಖಿಸಿದೆ.

ಐಎಂಎಫ್ ವರದಿಯ ಪ್ರಕಾರ, ಲಾಕ್‌ಡೌನ್ ಪ್ರಭಾವದ ಪರಿಣಾಮವಾಗಿ ಭಾರತವು 2020ರಲ್ಲಿ ತಲಾ ಒಟ್ಟು ದೇಶೀಯ ಉತ್ಪನ್ನದಲ್ಲಿ ಬಾಂಗ್ಲಾದೇಶಕ್ಕಿಂತ ಕೆಳಗಿಳಿಯಲಿದೆ ಎಂದು ಹೇಳಿದೆ.

ಐಎಂಎಫ್ ಭಾರತದ ತಲಾ ಜಿಡಿಪಿ (ಡಾಲರ್ ಪರಿಭಾಷೆಯಲ್ಲಿ, ಪ್ರಸ್ತುತ ಬೆಲೆ) 2020ರಲ್ಲಿ 1,877 ಡಾಲರ್​ಗೆ ಇಳಿದಿದೆ. ಇದು ಶೇ 10.3ರಷ್ಟು ಕುಸಿದಿದೆ. ಬಾಂಗ್ಲಾದೇಶಕ್ಕೆ ಸಂಬಂಧಿಸಿದಂತೆ ಇದೇ ಅಂಕಿ ಅಂಶವು 1,888 ಡಾಲರ್​​ಗೆ ಏರಿಕೆಯಾಗಿದ್ದು, ಅದು ಶೇ 4ರಷ್ಟು ಏರಿಕೆ ದಾಖಲಿಸಿದೆ.

ತಲಾ ಜಿಡಿಪಿ ಪರಿಭಾಷೆಯಲ್ಲಿ ಕೆಲವು ವರ್ಷಗಳ ಹಿಂದೆ ಭಾರತವು ಬಾಂಗ್ಲಾದೇಶಕ್ಕಿಂತ ಗಮನಾರ್ಹವಾಗಿ ಮೇಲಿತ್ತು. ಆದರೆ ದೇಶದ ವೇಗವಾಗಿ ಏರುತ್ತಿರುವ ರಫ್ತುಗಳಿಂದಾಗಿ ಈ ಅಂತರ ಗಣನೀಯವಾಗಿ ಹಿನ್ನಡೆಯಾಗಿದೆ. ಇದಲ್ಲದೆ ಮಧ್ಯದ ಅವಧಿಯಲ್ಲಿ ಭಾರತದ ಉಳಿತಾಯ ಮತ್ತು ಹೂಡಿಕೆಗಳ ಉತ್ಸಾಹ ಕಂಡುಬರದಿದ್ದರೂ ಬಾಂಗ್ಲಾದೇಶದಲ್ಲಿ ಈ ಸಂಖ್ಯೆ ಗಣನೀಯ ಏರಿಕೆ ಕಂಡಿದೆ.

ಐಎಂಎಫ್‌ನ ಮುನ್ಸೂಚನೆ ಮುಟ್ಟಿದರೆ, ಪ್ರಾದೇಶಿಕ ಜಿಡಿಪಿ ಸ್ವೀಪ್‌ಗಳಲ್ಲಿ ಭಾರತವು ಪಾಕಿಸ್ತಾನ ಮತ್ತು ನೇಪಾಳಕ್ಕಿಂತ ಸ್ವಲ್ಪ ಮುಂದಿದೆ. ಇದರರ್ಥ ದಕ್ಷಿಣ ಏಷ್ಯಾದ ಭೂತಾನ್, ಶ್ರೀಲಂಕಾ, ಮಾಲ್ಡೀವ್ಸ್ ಹಾಗೂ ಸಹಜವಾಗಿ ಬಾಂಗ್ಲಾದೇಶ ಭಾರತಕ್ಕಿಂತ ಮುಂದಿದೆ.

ಭಾರತದ ನಿರೀಕ್ಷಿತ ಕುಸಿತಕ್ಕೆ ಹೋಲಿಸಿದರೆ ನೇಪಾಳ ಮತ್ತು ಭೂತಾನ್ ಆರ್ಥಿಕತೆಗಳು ಈ ವರ್ಷ ಬೆಳೆಯುವ ನಿರೀಕ್ಷೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.