ನವದೆಹಲಿ: ದೇಶದ ಬ್ಯಾಂಕ್ಗಳ ಆರ್ಥಿಕ ಆರೋಗ್ಯ ಸುಧಾರಣೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳಿಂದಾಗಿ ಸಾರ್ವಜನಿಕ ವಲಯದ ಬ್ಯಾಂಕ್ಗಳ (ಪಿಎಸ್‌ಬಿ) ಅನುತ್ಪಾದಕ ಆಸ್ತಿ (ಎನ್‌ಪಿಎ) 2019ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 7.27 ಲಕ್ಷ ಕೋಟಿ ರೂ.ಗೆ ಇಳಿದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸುಧಾರಣೆ, ಆಡಳಿತ, ಅಧೀನ ನಿರ್ವಹಣೆ, ಮಾನಿಟರಿಂಗ್ ಮತ್ತು ವಸೂಲಾತಿಗಾಗಿ ಕೇಂದ್ರ ಸರ್ಕಾರವು ಪಿಎಸ್‌ಬಿಗಳಲ್ಲಿ ಸಮಗ್ರ ಬದಲಾವಣೆ ಕ್ರಮಗಳನ್ನು ಜಾರಿಗೆ ತಂದಿತ್ತು. ಬ್ಯಾಂಕಿಂಗ್‌ನ ಎಲ್ಲ ಅಂಶಗಳಲ್ಲೂ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲಾಗಿದೆ. ಇವುಗಳ ಪರಿಣಾಮವಾಗಿ ಎನ್‌ಪಿಎ ಮೊತ್ತ ಕಡಿಮೆಯಾಗಿದೆ ಎಂದು ಸೀತಾರಾಮನ್ ಅವರು ಲೋಕಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದಾರೆ.
ಪಿಎಸ್‌ಬಿಗಳ ಕೆಟ್ಟ ಸಾಲ 2019ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 7.27 ಲಕ್ಷ ಕೋಟಿ ರೂ.ಗಳಷ್ಟಾಗಿದೆ. 2018ರ ಮಾರ್ಚ್ ಅಂತ್ಯದ ವೇಳೆಗೆ ಇದು 8.96 ಲಕ್ಷ ಕೋಟಿ ರೂ.ನಷ್ಟಿತ್ತು ಎಂದು ಹೇಳಿದರು.
ಈ ಒಂದೂವರೆ ವರ್ಷದ ಅವಧಿಯಲ್ಲಿ 2.03 ಲಕ್ಷ ಕೋಟಿ ರೂ. ಎನ್‌ಪಿಎ ಇಳಿಕೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 18 ಪಿಎಸ್‌ಬಿಗಳು ಲಾಭಾಂಶ ಮಾಡಿಕೊಂಡಿರವ ಬಗ್ಗೆ ವರದಿ ಮಾಡಿವೆ. ಏಳೂವರೆ ವರ್ಷಗಳಲ್ಲಿ ಅತಿ ಹೆಚ್ಚು ನಿಬಂಧನೆ ವ್ಯಾಪ್ತಿಯ ಅನುಪಾತವಿದೆ ಎಂದು ತಿಳಿಸಿದರು.