ETV Bharat / business

ತೆರಿಗೆದಾರರು, ವಸತಿ ಖರೀದಿದಾರರಿಗೆ ದೀಪಾವಳಿ ಕೊಡುಗೆ: ಮನೆ ಖರೀದಿ ಈಗ ಇನ್ನಷ್ಟು ಅಗ್ಗ!

ಆದಾಯ ತೆರಿಗೆ ಪರಿಹಾರವು ಮೊದಲ ಬಾರಿಯ ಖರೀದಿದಾರರಿಗೆ ಮಾತ್ರ 2021ರ ಜೂನ್ 30ರವರೆಗೆ ಲಭ್ಯವಿರುತ್ತದೆ. 2 ಕೋಟಿ ರೂ. ವರೆಗಿನ ವಸತಿ ಯೂನಿಟ್​ಗಳಿಗೆ ಪ್ರಾಥಮಿಕ ಮಾರಾಟಕ್ಕೆ ದರ ಮತ್ತು ಒಪ್ಪಂದದ ಮೌಲ್ಯದ ನಡುವಿನ ವ್ಯತ್ಯಾಸವನ್ನು ದ್ವಿಗುಣಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

homebuyers
ಮನೆ ಖರೀದಿ
author img

By

Published : Nov 12, 2020, 3:58 PM IST

ನವದೆಹಲಿ: ಆರ್ಥಿಕ ಪ್ರಗತಿ ಹೆಚ್ಚಿಸುವ ಆತ್ಮನಿರ್ಭರ ಭಾರತನ 3.0 ಉತ್ತೇಜಕ ಪ್ಯಾಕೇಜ್​​ನ​ ಭಾಗವಾಗಿ, ವಸತಿ ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಿಸುಲು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಡೆವಲಪರ್‌ ಮತ್ತು ಮನೆ ಖರೀದಿದಾರರಿಗೆ ಆದಾಯ ತೆರಿಗೆ ಪರಿಹಾರ ಘೋಷಿಸಿದ್ದಾರೆ.

ಯೋಜನೆಯ ಆಶ್ರಯದಲ್ಲಿ ಇಂಜಿನಿಯರ್​ ಮತ್ತು ಮನೆ ಖರೀದಿದಾರರಿಗೆ 2 ಕೋಟಿ ರೂ. ವರೆಗಿನ ವಸತಿಗಳಿಗೆ ತೆರಿಗೆ ಪರಿಹಾರ ನೀಡಲಾಗುತ್ತಿದೆ.

ಸರ್ಕಾರದ ಈ ಕ್ರಮವು ಮನೆಗಳನ್ನು ಖರೀದಿಸಲು ಜನರನ್ನು ಪ್ರೋತ್ಸಾಹಿಸುತ್ತದೆ ಮತ್ತು ಹೆಚ್ಚುವರಿ ಉಳಿಕೆ ತಗ್ಗಿಸುತ್ತದೆ. ಆದಾಯ ತೆರಿಗೆ ಪರಿಹಾರವು ಮೊದಲ ಬಾರಿಯ ಖರೀದಿದಾರರಿಗೆ ಮಾತ್ರ 2021ರ ಜೂನ್ 30ರವರೆಗೆ ಲಭ್ಯವಿರುತ್ತದೆ. 2 ಕೋಟಿ ರೂ. ವರೆಗಿನ ವಸತಿ ಯೂನಿಟ್​ಗಳಿಗೆ ಪ್ರಾಥಮಿಕ ಮಾರಾಟಕ್ಕೆ ದರ ಮತ್ತು ಒಪ್ಪಂದದ ಮೌಲ್ಯದ ನಡುವಿನ ವ್ಯತ್ಯಾಸ ದ್ವಿಗುಣಗೊಳಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.

2 ಕೋಟಿ ರೂ. ವರೆಗಿನ ಮೌಲ್ಯದ ವಸತಿ ಯೂನಿಟ್​​ಗಳ ಪ್ರಾಥಮಿಕ ಮಾರಾಟಕ್ಕೆ ಇದು ಅನ್ವಯವಾಗುತ್ತದೆ. ವಸತಿ ಖರೀದಿ ಬಯಸುವ ಮಧ್ಯಮ ವರ್ಗಕ್ಕೆ ಇದು ಸಹಾಯ ಮಾಡುತ್ತದೆ. ಆದಾಯ ತೆರಿಗೆ ಕಾಯ್ದೆಗೆ ಅಗತ್ಯವಾದ ತಿದ್ದುಪಡಿ ಸರಿಯಾದ ಸಮಯದಲ್ಲಿ ಮಾಡಲಾಗುವುದು ಎಂದರು.

ವಸತಿ ವಲಯದ ವೃತ್ತಿಯ ದರ ಮತ್ತು ಒಪ್ಪಂದದ ದರದ ನಡುವಿನ ವ್ಯತ್ಯಾಸ ಈಗ ಶೇ 10ರಷ್ಟರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ. ಈ ಕ್ರಮವು ಮನೆಗಳನ್ನು ಖರೀದಿಸುವ ಮಧ್ಯಮ ವರ್ಗದವರಿಗೆ ನೆರವಾಗುತ್ತದೆ ಎಂದು ಸರ್ಕಾರ ಹೇಳಿದೆ.

ಒಟ್ಟು ಯೋಜನಾ ವೆಚ್ಚದ ಶೇ 10-15ರಷ್ಟಿದ್ದ ನಿರ್ಮಾಣ ಚಟುವಟಿಕೆಗಳಿಗೆ ಬ್ಯಾಂಕ್ ಖಾತರಿಗಳನ್ನು ಈಗ ಒಟ್ಟಾರೆ ಯೋಜನಾ ಮೌಲ್ಯದ ಕೇವಲ ಶೇ 3ಕ್ಕೆ ಇಳಿಸಲಾಗುತ್ತದೆ. ಇದು ಕಂಪನಿಗಳಿಗೆ ಹೆಚ್ಚುವರಿ ದ್ರವ್ಯತೆಯ ಲಭ್ಯತೆ ಖಾತರಿಪಡಿಸುತ್ತದೆ. ಇದರ ಪರಿಣಾಮವಾಗಿ ಗುತ್ತಿಗೆದಾರರ ಮೇಲಿನ ಹೊರೆ ಕೂಡ ಕಡಿಮೆ ಆಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.