ಮುಂಬೈ: ಭಾರತವು ಅತಿದೊಡ್ಡ ಲಸಿಕೆ ಕಾರ್ಯಕ್ರಮ ಹೊರತರಲು ತಯಾರಾಗುತ್ತಿದ್ದಂತೆ, ಬಿಲಿಯನೇರ್ ಮುಖೇಶ್ ಅಂಬಾನಿ, 'ನಮ್ಮ ತಂಡವೊಂದು ತಂತ್ರಜ್ಞಾನ ಸಾಧನಗಳನ್ನು ಒದಗಿಸಲು ಮತ್ತು ಕೋವಿಡ್-19 ವಿರುದ್ಧ ಸಾಮೂಹಿಕ ಇನಾಕ್ಯುಲೇಷನ್* ಕಾರ್ಯಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ' ಎಂದು ಹೇಳಿದರು.
ಫೇಸ್‌ಬುಕ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಂಬಾನಿ, ಸರ್ಕಾರದ ಡಿಜಿಟಲ್ ಅಭಿಯಾನವು ಸಾಂಕ್ರಾಮಿಕ ಸಮಯದಲ್ಲಿ ದೇಶಕ್ಕೆ ಸಾಕಷ್ಟು ನೆರವಾಯಿತು. ಈಗ ಅತಿದೊಡ್ಡ ವ್ಯಾಕ್ಸಿನೇಷನ್ ಕಾರ್ಯಕ್ರಮಗಳಿಗೆ ಸಹಾಯ ಮಾಡಲಿದೆ. ಉತ್ತಮ ಡಿಜಿಟಲ್ ಮತ್ತು ಇಂಟರ್ನೆಟ್ ಪ್ರವೇಶವು ಜನರಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ಮಾಡಿಕೊಟ್ಟಿತು. ಇದರಿಂದ ವ್ಯವಹಾರಗಳು ಯಾವುದೇ ಅಡೆತಡೆಯಿಲ್ಲದೇ ಸಾಗಿದವು ಎಂದರು.
ಕೆಲವೊಮ್ಮೆ ನಾನು ಆಶ್ಚರ್ಯ ಪಡುತ್ತೇನೆ, ಸಾಂಕ್ರಾಮಿಕ ರೋಗವು ಕೇವಲ ನಾಲ್ಕು ಅಥವಾ ಐದು ವರ್ಷಗಳ ಹಿಂದೆಯೇ ಭಾರತವನ್ನು ಅಪ್ಪಳಿಸಿದ್ದರೆ ಹೇಗಿರುತ್ತಿತ್ತು! ನಮ್ಮಲ್ಲಿ ಈಗ ಇರುವ ಸಂಪರ್ಕ ಸಾಧನಗಳು ಆಗ ಇಷ್ಟೊಂದು ಮಟ್ಟದಲ್ಲಿ ಉತ್ತಮವಾಗಿ ಇರಲಿಲ್ಲ. ಸಾಂಕ್ರಾಮಿಕ ಸಮಯದಲ್ಲಿ 20 ಕೋಟಿ ಅಗತ್ಯವಿರುವ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಇದೇ ಡಿಜಿಟಲ್ ನೆರವಾಯಿತು. ಈಗ ನಾವು 2021ರ ಮೊದಲಾರ್ಧದಲ್ಲಿ ಅತಿದೊಡ್ಡ ಲಸಿಕೆ ಕಾರ್ಯಕ್ರಮಗಳಲ್ಲಿ ಒಂದನ್ನು ಹೊರತರಲು ಸಿದ್ಧರಾಗಿದ್ದೇವೆ. ಆರೋಗ್ಯ ಸೇವೆಗಳನ್ನು ತಲುಪಿಸಲು ತಂತ್ರಜ್ಞಾನವು ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ರಫ್ತು ಪ್ರಮಾಣ ಶೇ 8.74ರಷ್ಟು ಕಡಿತ: ವ್ಯಾಪಾರ ಕೊರತೆ 9.87 ಬಿಲಿಯನ್ ಡಾಲರ್ಗೆ ಇಳಿಕೆ
ತಂತ್ರಜ್ಞಾನ ಬಳಸಿಕೊಂಡು ಮುಂಬರುವ ತ್ರೈಮಾಸಿಕಗಳಲ್ಲಿ ವ್ಯಾಕ್ಸಿನೇಷನ್ಗೆ ತಂತ್ರಜ್ಞಾನ ಸಾಧನಗಳನ್ನು ಒದಗಿಸುತ್ತೇವೆ ಎಂಬುದನ್ನು ಖಚಿತಪಡಿಸಲು ನಾವು ಎಲ್ಲ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾವೆಲ್ಲರೂ ಮನೆಯಿಂದ ಕೆಲಸ ಮಾಡುತ್ತೇವೆ ಎಂಬುದನ್ನು ನಾವು ಊಹಿಸಿರಲಿಲ್ಲ. ನೆಟ್‌ವರ್ಕ್ ದಟ್ಟಣೆಯ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ. ನಮ್ಮಲ್ಲಿ ಯಾರೂ ನೆಟ್ವರ್ಕ್ನಿಂದ ಹೊರನಡೆದಿಲ್ಲ. ಇದರಿಂದಾಗಿ ಜಿಯೋದಲ್ಲಿ ಶೇ 99ರಷ್ಟು ಲಭ್ಯತೆ ಕಾಯ್ದುಕೊಳ್ಳಲು ಸಾಧ್ಯವಾಯಿತು. ಇದರಿಂದ ಭಾರತೀಯರು ಮನೆಯಿಂದ ಕೆಲಸ ಮಾಡಬಹುದು, ಮನೆಯಿಂದ ಶಾಪಿಂಗ್ ಮಾಡಬಹುದು , ಮನೆಯಿಂದ ಅಧ್ಯಯನ ಮಾಡಿ ವಿಶ್ವದ ಇತರ ಭಾಗಗಳೊಂದಿಗೆ ಸಂಪರ್ಕದಲ್ಲಿರಿ ಎಂದು ಹೇಳಿದರು.
*ಇನಾಕ್ಯುಲೇಷನ್ ಎನ್ನುವುದು ವಿವಿಧ ಸಾಂಕ್ರಾಮಿಕ ರೋಗಗಳ ವಿರುದ್ಧ ಕೃತಕ ರೋಗನಿರೋಧಕ ಶಕ್ತಿ ಉಂಟುಮಾಡುವ ವಿಧಾನಗಳ ಒಂದು ಸಮೂಹವಾಗಿದೆ.