ETV Bharat / business

GST ನಷ್ಟ ಭರ್ತಿ: ಜಾರ್ಖಂಡ್​ ಬಿಟ್ಟು ಕೇಂದ್ರದ ಆಯ್ಕೆ 1 ಸ್ವೀಕರಿಸಿದ ಎಲ್ಲ ರಾಜ್ಯಗಳು - GST compensation states choose option 1

ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯ ಕೊರತೆ ನೀಗಿಸಲು ಛತ್ತೀಸ್‌ಗಢ ಆಯ್ಕೆ -1 ಅಂಗೀಕರಿಸಿದೆ. ಜಾರ್ಖಂಡ್​​ ಹೊರತುಪಡಿಸಿ ಎಲ್ಲ ರಾಜ್ಯಗಳು ಪರಿಹಾರಕ್ಕೆ ಕೇಂದ್ರ ಸೂಚಿಸಿದ ಸೂತ್ರಕ್ಕೆ ಸೇರಿಕೊಂಡಿವೆ.

GST
ಜಿಎಸ್​ಟಿ
author img

By

Published : Dec 3, 2020, 3:52 PM IST

Updated : Dec 3, 2020, 4:12 PM IST

ನವದೆಹಲಿ: ಕಾಂಗ್ರೆಸ್ ಆಡಳಿತ ಇರುವ ಛತ್ತೀಸ್​ಗಢ ರಾಜ್ಯ ಸರ್ಕಾರವು ಕೇಂದ್ರ ನೀಡಿದ ಸಾಲ ಪ್ರಸ್ತಾಪದ ಆಯ್ಕೆ 1 ಅಂಗೀಕರಿಸಿದ್ದು, ಜಿಎಸ್​​ಟಿ ಆದಾಯದ ಕೊರತೆ ಪೂರೈಕೆಗೆ ವಿಶೇಷ ವಿಂಡೋ ಮೂಲಕ 1,792 ಕೋಟಿ ರೂ. ಪಡೆಯಲಿದೆ.

ಜಿಎಸ್​ಟಿ ಅನುಷ್ಠಾನದಿಂದ ಉಂಟಾಗುವ ಆದಾಯದ ಕೊರತೆ ಪೂರೈಸಲು ಕೇಂದ್ರ ಸರ್ಕಾರದ ಆಯ್ಕೆ1ರ ಅನ್ವಯ ರಾಜ್ಯಗಳಿಗೆ ವಿಶೇಷ ಗವಾಕ್ಷಿ ಒದಗಿಸಲು ಆರ್‌ಬಿಐಯೊಂದಿಗೆ ಸಮಾಲೋಚಿಸಿ 97,000 ಕೋಟಿ ರೂ. ಸಮಂಜಸ ಬಡ್ಡಿ ದರದಲ್ಲಿ ಸಾಲವಾಗಿ ಒದಗಿಸುತ್ತದೆ. ಈ ಹಣವನ್ನು ಸೆಸ್ ಸಂಗ್ರಹದಿಂದ 5 ವರ್ಷಗಳ ನಂತರ ಮರು ಪಾವತಿಸಬಹುದು.

ಆಯ್ಕೆ-2ರ ಅನ್ವಯ ರಾಜ್ಯಗಳಿಗೆ ಈ ವರ್ಷದ 2,35,000 ಕೋಟಿ ರೂ. ಸಂಪೂರ್ಣ ಜಿಎಸ್​​ಟಿ ಪರಿಹಾರದ ಅಂತರವನ್ನು ರಾಜ್ಯಗಳು ಆರ್‌ಬಿಐನೊಂದಿಗೆ ಸಮಾಲೋಚಿಸಿ ಪೂರೈಸಬಹುದು.

'ಕೃಷಿ ಕಾಯ್ದೆ ರದ್ದು ಮಾಡದೇ, ಬೇರೆ ಯಾವ ನಿರ್ಧಾರ ಕೈಗೊಂಡರೂ ದೇಶಕ್ಕೆ ಮೋಸ'

ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗುವ ಆದಾಯ ಕೊರತೆ ನೀಗಿಸಲು ಛತ್ತೀಸ್‌ಗಢ ಆಯ್ಕೆ -1 ಅನ್ನು ಅಂಗೀಕರಿಸಿದೆ. ಜಾರ್ಖಂಡ್​​ ಹೊರತುಪಡಿಸಿ ಎಲ್ಲ ರಾಜ್ಯಗಳು ಪರಿಹಾರಕ್ಕೆ ಕೇಂದ್ರದ ಸೂಚಿಸಿದ ಸೂತ್ರಕ್ಕೆ ಸೇರಿಕೊಂಡಿವೆ. ಜಿಎಸ್​​ಟಿ ಆದಾಯದ ಕೊರತೆ ಪೂರೈಕೆಯ ಆಯ್ಕೆ -1 ಆಯ್ದುಕೊಂಡ ಛತ್ತೀಸ್‌ಗಢ ರಾಜ್ಯ ಸರ್ಕಾರಕ್ಕೆ (ಜಿಎಸ್‌ಡಿಪಿಯಲ್ಲಿ ಶೇ 0.50ರಷ್ಟು) ಹೆಚ್ಚುವರಿ ಸಾಲವಾಗಿ 1,792 ಕೋಟಿ ರೂ. ಪಡೆಯಲಿದೆ.

ಆಯ್ಕೆ -1 ಕ್ಕೆ ಒಲವು ತೋರಿದ ರಾಜ್ಯಗಳ ಸಂಖ್ಯೆ 27ಕ್ಕೆ ಏರಿದೆ. ಜಾರ್ಖಂಡ್ ಹೊರತುಪಡಿಸಿ ಎಲ್ಲ ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ -1ರ ಪರವಾಗಿ ನಿಂತಿವೆ. ವಿಶೇಷ ವಿಂಡೋವನ್ನು 2020ರ ಅಕ್ಟೋಬರ್ 23 ರಿಂದ ಕಾರ್ಯರೂಪಕ್ಕೆ ತರಲಾಗಿದ್ದು, ಸರ್ಕಾರವು ಈಗಾಗಲೇ ಐದು ಕಂತುಗಳಲ್ಲಿ ರಾಜ್ಯಗಳ ಪರವಾಗಿ 30,000 ಕೋಟಿ ರೂ. ಎರವಲು ಪಡೆದಿದೆ. ಆಯ್ಕೆ -1 ಅನ್ನು ಆಯ್ಕೆ ಮಾಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಿವೆ.

Last Updated : Dec 3, 2020, 4:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.