ETV Bharat / business

2ನೇ ತ್ರೈಮಾಸಿಕದಲ್ಲಿ ಉತ್ಪಾದನೆ ಹೆಚ್ಚಳ, ಕೃಷಿ ಕ್ಷೇತ್ರ 'ಪ್ರಜ್ವಲಿಸುತ್ತಿದೆ': ಎನ್‌ಎಸ್‌ಒ ವರದಿ - ದ್ವಿತೀಯ ತ್ರೈಮಾಸಿಕ ಜಿಡಿಪಿ ಅಂಕಿಅಂಶ

ಎನ್‌ಎಸ್‌ಒ ಬಿಡುಗಡೆ ಮಾಡಿದ ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕ ಜಿಡಿಪಿ ಅಂಕಿ- ಅಂಶಗಳ ಪ್ರಕಾರ, ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಕ್ಷೇತ್ರವು ವರ್ಷಕ್ಕೆ ಶೇ 3.4 ರಷ್ಟು ಏರಿಕೆಯಾಗಿದೆ, ಆದರೆ ಉತ್ಪಾದನಾ ವಿಭಾಗವು ಶೇ 0.6 ನಷ್ಟು ಅಲ್ಪ ಬೆಳವಣಿಗೆ ಸಾಧಿಸಿದೆ.

Agriculture still a bright spot, manufacturing rebounds
2ನೇ ತ್ರೈಮಾಸಿಕದಲ್ಲಿ ಉತ್ಪಾದನೆ ಹೆಚ್ಚಳ
author img

By

Published : Nov 28, 2020, 1:42 PM IST

ನವದೆಹಲಿ: ಜುಲೈ - ಸೆಪ್ಟೆಂಬರ್ 2020 ರ ಅವಧಿಯಲ್ಲಿ ಒಟ್ಟಾರೆ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ 7.5 ರಷ್ಟು ಕುಸಿದಿದ್ದರೂ ಭಾರತದ ಭಾರತೀಯ ಕೃಷಿ ಕ್ಷೇತ್ರವು ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲೂ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುತ್ತಿದೆ.

  • ರಾಷ್ಟ್ರೀಯ ಅಂಕಿ - ಅಂಶಗಳ ಕಚೇರಿ (ಎನ್‌ಎಸ್‌ಒ) ಶುಕ್ರವಾರ ಬಿಡುಗಡೆ ಮಾಡಿದ ತ್ರೈಮಾಸಿಕ ಮಾಹಿತಿಯ ಪ್ರಕಾರ, ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಕ್ಷೇತ್ರವು ದ್ವಿತೀಯ ತ್ರೈಮಾಸಿಕದ ಅವಧಿಯಲ್ಲಿ ಶೇ 3.4 ರಷ್ಟು ಏರಿಕೆಯಾಗಿದೆ - ಇದು ಪ್ರಥಮ ತ್ರೈಮಾಸಿಕದಲ್ಲಿ ಕೂಡ ಅದೇ ವೇಗದಲ್ಲಿ ಬೆಳವಣಿಗೆ ಕಂಡಿತ್ತು.
  • ಎರಡನೇ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯದಲ್ಲಿ ತೀಕ್ಷ್ಣವಾದ ಚೇತರಿಕೆ ಕಂಡು ಬಂದಿದೆ. ಹೀಗಾಗಿ ಮೊದಲೇ ತ್ರೈಮಾಸಿಕ ಶೇ - 39.3ರಷ್ಟಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ರಲ್ಲಿ ಶೇ 0.6 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.
  • ಈ ವಾರದ ಆರಂಭದಲ್ಲಿ ಸಿಎಮ್ಐಇ (Centre for Monitoring Indian Economy)ಹಂಚಿಕೊಂಡ ಮಾಹಿತಿಯ ಪ್ರಕಾರ, ಪಟ್ಟಿಮಾಡಿದ ಉತ್ಪಾದನಾ ಸಂಸ್ಥೆಗಳು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲೆಯ ಲಾಭವನ್ನು ಗಳಿಸಿದ್ದರಿಂದ ಉತ್ಪಾದನಾ ಕ್ಷೇತ್ರದಲ್ಲಿ ಚೇತರಿಕೆ ನಿರೀಕ್ಷಿಸಲಾಗಿದೆ ಎಂದು ಅದು ತಿಳಿಸಿದೆ.
  • ಕಾರ್ಮಿಕರ ಕೊರತೆ ಮತ್ತು ಪೂರೈಕೆಗೆ ಎದುರಾದ ಅಡೆತಡೆಗಳಂತಹ ಪ್ರಮುಖ ವಿಷಯಗಳು ಉತ್ಪಾದನೆಯಲ್ಲಿ ಬೆಳವಣಿಗೆಯ ದರವನ್ನು ಕಡಿಮೆ ಮಾಡಲು ಕಾರಣವಾಗಿವೆ.
  • ಭಾರತದ ಕಾಮಗಾರಿ, ನಿರ್ಮಾಣ ಕ್ಷೇತ್ರವು ಎರಡನೇ ತ್ರೈಮಾಸಿಕದಲ್ಲಿ ಸ್ವಲ್ಪ ಕಡಿಮೆ ಇದೆ. ಪ್ರಥಮ ತ್ರೈಮಾಸಿಕದ ಅವಧಿಯಲ್ಲಿ ಈ ವಲಯವು ಪಾತಾಳಕ್ಕೆ ಕುಸಿದಿತ್ತು. ಮತ್ತು ಕೊರೊನಾ ಹಿನ್ನೆಲೆ ಹೆಚ್ಚಿನ ಕಾರ್ಮಿಕರು ನಗರಗಳನ್ನು ಬಿಟ್ಟು ಓಡಿಹೋದ ನಂತರ ನಿರ್ಮಾಣ ಕಾರ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ಶೇ -50.3 ನಷ್ಟು ಅತೀ ಕಡಿಮೆ ಕೆಟ್ಟ ದರದಲ್ಲಿ ಬೆಳವಣಿಗೆ ಕಂಡು ಬಂತು. ಆದಾಗ್ಯೂ, ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಈ ವಲಯವು ದ್ವಿತೀಯ ತ್ರೈಮಾಸಿಕದಲ್ಲಿ ಅಂತರವನ್ನು -8.6 ರಷ್ಟು ಬೆಳವಣಿಗೆಯೊಂದಿಗೆ ಕೊನೆಗೊಂಡಿದೆ.
  • ವ್ಯಾಪಾರ, ಹೋಟೆಲ್ ಮತ್ತು ಸಾರಿಗೆ ಮತ್ತು ಸಂವಹನ ಕ್ಷೇತ್ರಗಳು ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದ ಅವಧಿಯಲ್ಲಿ ಕೋವಿಡ್ -19 ಲಾಕ್‌ಡೌನ್ ಕ್ರಮಗಳ ಪರಿಣಾಮ ಎರಡನೇ ಅತಿದೊಡ್ಡ ಆಘಾತ ನೀಡಿದ್ದು, ಇವುಗಳ ಬೆಳವಣಿಗೆಯ ದರವು -15.6 ನಷ್ಟು ಹೆಚ್ಚು ಋಣಾತ್ಮಕವಾಗಿ ಉಳಿದಿದ್ದರಿಂದ ಎರಡನೇ ತ್ರೈಮಾಸಿಕದಲ್ಲಿ ಇದೇ ಕಡಿಮೆ ಬೆಳವಣಿಗೆ ಮುಂದುವರಿಸಿದೆ. ಆದರೆ, ಕೆಲವು ಪ್ರಮುಖ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳ ಕುಸಿತದ ನಂತರ ಟೂರಿಸಂ ವಲಯ ಪುನರಾರಂಭಿಸಿದ್ದರಿಂದ ಪ್ರಥಮ ತ್ರೈಮಾಸಿಕದಲ್ಲಿ ಕಂಡು ಬಂದ - 47ರಷ್ಟು ಬೆಳವಣಿಗೆಗಿಂತ ಇದು ಇನ್ನೂ ಉತ್ತಮ ಎನ್ನಲಾಗಿದೆ.
  • ಆದರೆ, ಆಶ್ಚರ್ಯವೆಂದರೆ, ಆರ್ಥಿಕತೆಯ ಪ್ರಮುಖ ವಿಭಾಗಗಳಾದ ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವೆಗಳು’ ಮತ್ತು ‘ಸಾರ್ವಜನಿಕ ಆಡಳಿತ, ರಕ್ಷಣಾ ಮತ್ತು ಇತರ ಸೇವೆಗಳು ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಕುಸಿತ ಕಂಡಿದ್ದಕ್ಕಿಂತ ಅತೀ ವೇಗವಾಗಿ ದ್ವಿತೀಯ ತ್ರೈಮಾಸಿಕದ ಅವಧಿಯಲ್ಲಿ ಕುಸಿತಕಂಡಿವೆ ಎಂದು ಎನ್‌ಎಸ್‌ಒ ಹೇಳಿದೆ.
  • ಹಣಕಾಸು ಮತ್ತು ರಿಯಲ್ ಎಸ್ಟೇಟ್ ವಲಯವು ಒಟ್ಟಾರೆಯಾಗಿ ದ್ವಿತೀಯ ತ್ರೈಮಾಸಿಕದ ಅವಧಿಯಲ್ಲಿ -8.1 ರಷ್ಟಿದ್ದರೆ, ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಶೇ -5.3 ರಷ್ಟಿತ್ತು. ಅಂತೆಯೇ, ಮೊದಲ ತ್ರೈಮಾಸಿಕದ -10.3% ಕ್ಕೆ ಹೋಲಿಸಿದರೆ ಸ್ಥಗಿತಗೊಂಡ ಸರ್ಕಾರದ ವೆಚ್ಚ, ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ವಿಭಾಗವು ದ್ವಿತೀಯ ತ್ರೈಮಾಸಿಕದಲ್ಲಿ -12.2% ರಷ್ಟು ಸಂಕುಚಿತಗೊಂಡಿದೆ.

ಒಟ್ಟಾರೆಯಾಗಿ ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಕೃಷಿ ಕ್ಷೇತ್ರ ಮಾತ್ರ ಅಭಿವೃದ್ಧಿ ಗಳಿಸಿರುವುದು ಕಂಡು ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.