ನವದೆಹಲಿ: ಹಿರಿಯ ಕೈಗಾರಿಕೋದ್ಯಮಿ, ಗೋದ್ರೆಜ್ ಗ್ರೂಪ್ ಅಧ್ಯಕ್ಷ ಆದಿ ಗೋದ್ರೆಜ್ ಮುಂದಿನ ತಿಂಗಳು ಗೋದ್ರೆಜ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (GCPL) ಮಂಡಳಿಯಿಂದ ಕೆಳಗಿಳಿಯಲಿದ್ದಾರೆ. ಸೆಪ್ಟೆಂಬರ್ 30ರಿಂದ ಜಾರಿಗೆ ಬರುವಂತೆ ಮಂಡಳಿಯಿಂದ ಕೆಳಗಿಳಿದ ನಂತರ, ಎಫ್‌ಎಂಸಿಜಿ ಸಂಸ್ಥೆಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಇಂದು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಂಸ್ಥೆ ತಿಳಿಸಿದೆ.
79 ವರ್ಷ ವಯಸ್ಸಿನ ಕೈಗಾರಿಕೋದ್ಯಮಿ 17 ವರ್ಷಗಳ ಕಾಲ ಕಂಪನಿಯನ್ನು ಮುನ್ನಡೆಸಿದ ನಂತರ 2017ರಲ್ಲಿ ಅವರ ಕಿರಿಯ ಪುತ್ರಿ ನಿಸಾಬ್ ಗೋದ್ರೆಜ್‌ಗೆ ಜಿಸಿಪಿಎಲ್‌ನ ಜವಾಬ್ದಾರಿಯನ್ನು ಹಸ್ತಾಂತರಿಸಿದ್ದರು. ನಿಸಾಬ್ ಗೋದ್ರೆಜ್ 11,000 ಕೋಟಿ ರೂಪಾಯಿಗಳ ಸಮೂಹ ಸಂಸ್ಥೆಯ ಅಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: Vodafone- ideaಗೆ ಶಾಕ್; ಎನ್‌ಇಡಿ, ಎನ್‌ಇಸಿ ಸ್ಥಾನದಿಂದ ಕೆಳಗಿಳಿದ ಕುಮಾರ್ ಮಂಗಳಂ ಬಿರ್ಲಾ
ಗೋದ್ರೆಜ್ ಗ್ರಾಹಕ ಉತ್ಪನ್ನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಮಾರ್ಗದರ್ಶನವನ್ನು ಮುಂದುವರಿಸುವಂತೆ ಹೇಳಿರುವ ಮಂಡಳಿಗೆ ನಾನು ಕೃತಜ್ಞನಾಗಿದ್ದೇನೆ. ನಮ್ಮ ತಂಡದ ಸದಸ್ಯರೆಲ್ಲರಿಗೂ ಗೋದ್ರೆಜ್ ಬಗ್ಗೆ ಇರುವ ಉತ್ಸಾಹ ಮತ್ತು ನಾವೆಲ್ಲರೂ ಹೆಮ್ಮೆಪಡುವಂತೆ ಕಂಪನಿಯನ್ನು ನಿರ್ಮಿಸಲು ಸಹಾಯ ಮಾಡಿದ್ದಾರೆ. ನಮ್ಮ ಗ್ರಾಹಕರಿಗೆ, ವ್ಯಾಪಾರ ಪಾಲುದಾರರು, ಷೇರುದಾರರು, ಹೂಡಿಕೆದಾರರು ಮತ್ತು ಸಮುದಾಯಗಳು ವರ್ಷಗಳಿಂದ ನಮ್ಮೊಂದಿಗೆ ಇದ್ದಾರೆ. ಆದಿ ಗೋದ್ರೆಜ್ ಕಂಪನಿಯ ಅಡಿಪಾಯ ಬಹಳ ಪ್ರಬಲವಾಗಿದೆ. ನಮ್ಮ ಎಲ್ಲಾ ಪಾಲುದಾರರಿಗೆ ಇನ್ನಷ್ಟು ಸಮರ್ಥನೀಯ, ದೀರ್ಘಕಾಲೀನ ಮೌಲ್ಯವನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಆದಿ ಗೋದ್ರೆಜ್ ಹೇಳಿದ್ದಾರೆ.