ನವದೆಹಲಿ: ದೇಶದ ಆರ್ಥಿಕತೆಯಲ್ಲಿ ಹಸಿರು ಚಿಗುರೆಲೆಗಳು ಗೋಚರಿಸುತ್ತಿವೆ. ಕೃಷಿ ಕ್ಷೇತ್ರವು ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹೆಚ್ಚಿನ ನೀತಿಗಳನ್ನು ತೆಗೆದುಕೊಳ್ಳಬೇಕಿದೆ. ವಿದ್ಯುತ್ ಮತ್ತು ಇಂಧನ ಬಳಕೆ, ಸರಕುಗಳ ಅಂತರ ಮತ್ತು ರಾಜ್ಯಗಳ ಹರಿವಿನ ಪಿಎಂಐ ದತ್ತಾಂಶ ಮತ್ತು ಚಿಲ್ಲರೆ ಹಣಕಾಸು ವಹಿವಾಟಿನಂತಹ ಸೂಚಕಗಳು ಆರ್ಥಿಕ ಚೇತರಿಕೆಯನ್ನು ಎತ್ತಿ ತೋರಿಸುತ್ತಿವೆ ಎಂದರು.
ಎಲ್ಲಾ ಆಯ್ಕೆಗಳು ಮುಕ್ತವಾಗಿವೆ. ಭವಿಷ್ಯದಲ್ಲಿ ಮಧ್ಯಸ್ಥಿಕೆ ಕಾರ್ಯಗಳು ನಡೆಯುತ್ತವೆ. ಆರ್ಥಿಕತೆಯ ಪುನರುಜ್ಜೀವನ ಖಚಿತಪಡಿಸಿಕೊಳ್ಳಲು ಸರ್ಕಾರವು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಉದ್ಯಮಕ್ಕೆ ಭರವಸೆ ನೀಡಿದರು.
-
#Agriculture driving rural economic revival: Finance Minister #NirmalaSitharaman (@nsitharaman) pic.twitter.com/jq0OLESTwe
— IANS Tweets (@ians_india) July 21, 2020 " class="align-text-top noRightClick twitterSection" data="
">#Agriculture driving rural economic revival: Finance Minister #NirmalaSitharaman (@nsitharaman) pic.twitter.com/jq0OLESTwe
— IANS Tweets (@ians_india) July 21, 2020#Agriculture driving rural economic revival: Finance Minister #NirmalaSitharaman (@nsitharaman) pic.twitter.com/jq0OLESTwe
— IANS Tweets (@ians_india) July 21, 2020
ಕೃಷಿ ಕ್ಷೇತ್ರವು ಬೆಳವಣಿಗೆಯನ್ನು ಪ್ರೇರೇಪಿಸುತ್ತಿದೆ. ಒಟ್ಟಾರೆ ಜಿಡಿಪಿಯಲ್ಲಿ ಶೇ 10ರಷ್ಟು ಉತ್ತೇಜಕ ಪ್ಯಾಕೇಜ್ ಅನ್ನು ಸರ್ಕಾರ ಘೋಷಿಸಿದೆ. ಇದು ಆರ್ಥಿಕ ಪುನರುಜ್ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ರಫ್ತು, ಆಮದು ಚಟುವಟಿಕೆಗಳಿಗೆ ಆತ್ಮನಿರ್ಭರ ಭಾರತ ಬಾಗಿಲು ಮುಚ್ಚುವುದಿಲ್ಲ ಎಂದು ಇಂಡಿಯಾ ಐಡಿಯಾಸ್ ಶೃಂಗಸಭೆಯಲ್ಲಿ ಹೇಳಿದರು.