ETV Bharat / business

ಪ್ರತಿಕ್ರಿಯಾತ್ಮಕ ಬಜೆಟ್‌ ಆದರೆ, ಆರ್ಥಿಕ ಹಿಂಜರಿಕೆಯನ್ನು ಕ್ಷಿಪ್ರವಾಗಿ ಹಿಮ್ಮೆಟ್ಟಿಸದು

ಆರ್ಥಿಕ ಹಿಂಜರಿಕೆ ಪರಿಸ್ಥಿತಿಯನ್ನು ಎದುರಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಬಜೆಟ್​​ನಲ್ಲಿ ಆಯ್ದುಕೊಂಡಿರುವ ಎರಡು ದಾರಿಗಳಾದ ಬಳಕೆ ಮತ್ತು ಹೂಡಿಕೆ ಹೆಚ್ಚಳಗಳು ಗಮನಾರ್ಹ ಅಂಶಗಳಾಗಿವೆ.

A responsible Budget but it will not quickly reverse the slowdown
ಬಜೆಟ್‌ -2020
author img

By

Published : Feb 8, 2020, 3:11 PM IST

ಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ ಎಂಬುದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಒಪ್ಪಿಕೊಳ್ಳಬೇಕಿತ್ತು. ಅನಂತರವಷ್ಟೇ, ಅದರಿಂದ ಪಾರಾಗಲು ಯಾವ ಯೋಜನೆಗಳನ್ನು ತಾವು ಹಾಕಿಕೊಂಡಿದ್ದೇವೆ ಎಂಬುದನ್ನು ವಿವರಿಸಬೇಕಿತ್ತು.

ನಾವೀಗ ಎದುರಿಸುತ್ತಿರುವ ಆರ್ಥಿಕ ಹಿಂಜರಿಕೆ ಪರಿಸ್ಥಿತಿಯನ್ನು ಎದುರಿಸಲು ಇರುವುದು ಎರಡೇ ದಾರಿಗಳು. ಒಂದು, ಬಳಕೆಯ ಮೂಲಕ ಮತ್ತು ಇನ್ನೊಂದು, ಹೂಡಿಕೆಯ ಮೂಲಕ. ನನ್ನ ದೃಷ್ಟಿಕೋನದಲ್ಲಿ ಈ ಸಲದ ಮುಂಗಡಪತ್ರ ಎರಡನೇ ದಾರಿಯನ್ನು ಆಯ್ದುಕೊಂಡಿದ್ದು, ಅದು ಸರಿಯಾದ ಆಯ್ಕೆ ಎನಿಸಿದೆ.

ಮೊದಲನೆಯ ದಾರಿಯಾದ ಬಳಕೆ ವಿಧಾನದಲ್ಲಿ, ಹಣವನ್ನು ಬ್ಯಾಂಕ್‌ಗಳ ಮೂಲಕ ನೇರವಾಗಿ ಜನರ ಕೈಗೆ ತಲುಪಿಸಲಾಗುತ್ತದೆ. ಆಗ ಜನ ಹಣವನ್ನು ಬಳಸುತ್ತಾರೆ, ಸರಕುಗಳು ಬಳಕೆಯಾಗುತ್ತವೆ ಹಾಗೂ ಇದರಿಂದ ಬೇಡಿಕೆ ಹೆಚ್ಚಿ ಕಾರ್ಖಾನೆಗಳು ಕೆಲಸ ಮಾಡತೊಡಗುತ್ತವೆ. ಇದರಿಂದ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಅದರಿಂದ ಹಣ ಖರ್ಚು ಮಾಡುವುದು ಮತ್ತಷ್ಟು ಹೆಚ್ಚುತ್ತದೆ. ಈ ಅನುಕೂಲಕರ ವೃತ್ತದ ಮೂಲಕ ಆರ್ಥಿಕತೆಯ ಪ್ರಗತಿ ಪುನರ್‌ಸ್ಥಾಪನೆಯಾಗುತ್ತದೆ.

ಎರಡನೆಯದು ಹೂಡಿಕೆ ವಿಧಾನವಾಗಿದ್ದು, ಇದರಿಂದ ಕೆಲಸಗಳು ಸೃಷ್ಟಿಯಾಗುತ್ತವೆ. ಕೆಲಸಗಳಿಂದ ಜನರ ಕೈಗೆ ಹಣ ಸಿಗುತ್ತದೆ, ಅವರು ಅದನ್ನು ಖರ್ಚು ಮಾಡುತ್ತಾರೆ ಮತ್ತು ಸರಕುಗಳನ್ನು ಬಳಸುತ್ತಾರೆ. ಇದರಿಂದ ಕಾರ್ಖಾನೆಗಳು ನಡೆಯತೊಡಗಿ, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಮತ್ತದೇ ಅನುಕೂಲಕರ ವೃತ್ತದ ಮೂಲಕ ಆರ್ಥಿಕತೆಯ ಪ್ರಗತಿ ಪುನರ್‌ಸ್ಥಾಪನೆಯಾಗುತ್ತದೆ.

ನಾನು ಎರಡನೇ ವಿಧಾನವನ್ನು ಆಯ್ಕೆ ಮಾಡಲು ಬಯಸುತ್ತೇನೆ. ಏಕೆಂದರೆ, ಅದು ಹೆಚ್ಚು ಆಸ್ತಿಗಳನ್ನು ಸೃಷ್ಟಿಸುತ್ತದೆ. ಈ ಸಲದ ಮುಂಗಡಪತ್ರವು ರಸ್ತೆಗಳು, ಜಲಮಾರ್ಗಗಳು, ಕುಡಿಯುವ ನೀರಿನ ಕೊಳವೆ ಮಾರ್ಗಗಳು, ಮನೆಗಳ ನಿರ್ಮಾಣ, ಆಸ್ಪತ್ರೆಗಳು - ಹೀಗೆ ಒಟ್ಟು ರೂ.103 ಲಕ್ಷ ಕೋಟಿ ಹೂಡಿಕೆಯನ್ನು ಮೂಲಸೌಕರ್ಯ ಅಭಿವೃದ್ಧಿಗೆ ವ್ಯಯಿಸುವ ಭರವಸೆ ನೀಡಿದೆ.

ವ್ಯರ್ಥವಾದ ಅವಕಾಶ:

ಆರ್ಥಿಕತೆಯು ಸಂಕಷ್ಟದಲ್ಲಿದೆ ಎಂದು ನೇರವಾಗಿ ಒಪ್ಪಿಕೊಳ್ಳುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತಮಗೆ ತಾವೇ ಒಳಿತು ಮಾಡಿಕೊಳ್ಳಬಹುದಿತ್ತು. ಅನಂತರ, ಸಂಕಷ್ಟ ಪರಿಸ್ಥಿತಿಯನ್ನು ನಿಭಾಯಿಸಲು ತಾವು ಯಾವ ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂಬುದನ್ನು ವಿವರಿಸಬಹುದಿತ್ತು. ಉತ್ತಮ ಕೆಲಸಗಳನ್ನು ಸೃಷ್ಟಿಸುವಂತಹ ಹಲವಾರು ಉಪಕ್ರಮಗಳಿಗೆ ಅವರು ಮುಂಗಡಪತ್ರದಲ್ಲಿ ನೆರವು ಘೋಷಿಸಿದ್ದಾರೆ. ಆದರೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಈ ಉಪಕ್ರಮಗಳು ಸೃಷ್ಟಿಸಬಹುದಾಗಿದ್ದ ಕೆಲಸಗಳ ಪ್ರಮಾಣ ಕುರಿತ ಅಂದಾಜು ಲೆಕ್ಕವನ್ನು ಮಂಡಿಸಿದ್ದರೂ ಸಾಕು, ಅದು ನಮ್ಮ ಉತ್ಸಾಹವನ್ನು ಹೆಚ್ಚಿಸಬಹುದಿತ್ತು.

ಸುಧಾರಣೆಗಳ ಘೋಷಣೆಗೆ ಮುಂಗಡಪತ್ರ ಮಂಡನೆ ಸಂದರ್ಭವೊಂದೇ ಅಲ್ಲದಿದ್ದರೂ, ದೊಡ್ಡ ಅವಕಾಶವೊಂದನ್ನು ಸೀತಾರಾಮನ್‌ ಅವರು ವ್ಯರ್ಥ ಮಾಡಿಕೊಂಡಿದ್ದಾರೆ. ಯಾವಾಗ ಸಂಕಷ್ಟಕರ ಪರಿಸ್ಥಿತಿ ಇರುತ್ತದೋ, ಆಗಲೇ ಸುಧಾರಣೆಗಳು ಕಾರ್ಯಾರಂಭ ಮಾಡುವುದು ಹಾಗೂ ಅವು ತರುವ ಕಿರು ಅವಧಿಯ ನೋವನ್ನು ಸಾರ್ವಜನಿಕರು ಸಹಿಸಿಕೊಳ್ಳಬಲ್ಲರು. ಉದಾಹರಣೆಗೆ, ಉತ್ಪಾದನೆಯನ್ನು ನಾಟಕೀಯವಾಗಿ ಹೆಚ್ಚಿಸಬಲ್ಲಂತಹ ಪ್ರಮುಖ ಕೃಷಿ ಸುಧಾರಣೆಯ ಕುರಿತು ವಿತ್ತ ಸಚಿವೆ ನಮ್ಮ ಗಮನ ಸೆಳೆದಿದ್ದಾರೆ. ರೈತರ ಭೂಮಿಯನ್ನು ದೀರ್ಘಾವಧಿ ಗುತ್ತಿಗೆಗೆ ನೀಡುವ ಒಪ್ಪಂದ ಕೃಷಿ ವಿಷಯ ಅದು. ಕೇಂದ್ರ ಸರಕಾರ ಕೆಲ ಸಮಯದಿಂದ ಈ ಕುರಿತು ಪ್ರಚಾರ ಮಾಡುತ್ತಲೇ ಬಂದಿದ್ದರೂ, ರಾಜ್ಯಗಳು ಪ್ರತಿಕ್ರಿಯಿಸಲು ನಿಧಾನಿಸಿವೆ. ತನ್ನ ಈ ಮಹತ್ವದ ಸುಧಾರಣೆಯನ್ನು ವಾಸ್ತವವಾಗಿ ಪ್ರಾರಂಭಿಸುವ ಕುರಿತು ಕೇಂದ್ರ ಸರಕಾರ ನೀಡಲು ಉದ್ದೇಶಿಸಿದ್ದ ಸಿಹಿ-ಕಹಿ ಕಾರ್ಯವಿಧಾನದ ಕುರಿತು ನಾವೆಲ್ಲ ನಿರೀಕ್ಷಿಸುತ್ತಿದ್ದೆವು. ಒಂದು ವೇಳೆ ವಿತ್ತ ಸಚಿವೆಯು, ಬಿಜೆಪಿ ನಂಬಿಕೆ ಹೊಂದಿರುವ ಭೂಮಿ ಮತ್ತು ಕೆಲಸದಂತಹ ಎಲ್ಲರಿಗೂ ಗೊತ್ತಿರುವ ಇನ್ನಷ್ಟು ಸುಧಾರಣೆಗಳ ಕುರಿತು ಘೋಷಣೆ ಮಾಡಿದ್ದರೆ, ಅದು ಬಹುಶಃ ಇಡೀ ದೇಶವನ್ನು ಇನ್ನಷ್ಟು ಉತ್ಸುಕವಾಗಿ ಮಾಡಬಹುದಿತ್ತು.

ನನ್ನ ಅತಿ ದೊಡ್ಡ ನಿರಾಸೆ

ಮುಂಗಡಪತ್ರ ನನ್ನಲ್ಲಿ ತಂದ ಅತಿ ದೊಡ್ಡ ನಿರಾಸೆ ಎಂದರೆ ಕೇಂದ್ರ ರಕ್ಷಿಸುತ್ತಿರುವ ಪರ್ಯಾಯ ಆಮದು ಎಂಬ ಸುಳ್ಳು ಹಾಗೂ ವಿಫಲ ವಿಚಾರವನ್ನು ಅದು ಹಿಂಪಡೆಯದೇ ಇದ್ದುದು. ರಫ್ತು ಪ್ರಧಾನ ಮುಂಗಡಪತ್ರದ ಕುರಿತು ಆರ್ಥಿಕ ಸಮೀಕ್ಷೆ ಬಹು ದೊಡ್ಡ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಜಾಗತಿಕ ಮೌಲ್ಯ ಸರಣಿಯಲ್ಲಿ ಭಾರತವೂ ಸೇರಿಕೊಳ್ಳುವುದರ ಮಹತ್ವ ಕುರಿತು ಅದು ಮನವೊಲಿಸುವ ರೀತಿ ವಾದಿಸಿತ್ತು. ಅಷ್ಟೇ ಅಲ್ಲ, ʼಮೇಕ್‌ ಇನ್‌ ಇಂಡಿಯಾ; ಘೋಷಣೆಯನ್ನು ʼಅಸೆಂಬಲ್‌ ಇನ್‌ ಇಂಡಿಯಾʼ (ವಾಸ್ತವವಾಗಿ, ಜಗತ್ತಿಗಾಗಿ ಭಾರತದಲ್ಲಿ ನಿರ್ಮಿಸಿ ಎಂದು) ಎಂದು ಬದಲಾಯಿಸಲೂ ಅದು ಸಲಹೆ ನೀಡಿತ್ತು. ಚೀನಾದ ಸಮಸ್ಯೆಗಳ ಹಿನ್ನೆಲೆಯಲ್ಲಿ, ಜಾಗತಿಕ ಸರಣಿಗಳನ್ನು ಮರುಜೋಡಿಸಲಾಗುತ್ತಿರುವ ಈ ಸಂದರ್ಭದಲ್ಲಿ, ಇಂಥದೊಂದು ತಳ್ಳುವಿಕೆಗೆ ಇದು ಸೂಕ್ತ ಸಮಯವಾಗಿತ್ತು. ಈ ಸಲದ ಮುಂಗಡಪತ್ರದಲ್ಲಿ ಆಮದು ಸುಂಕವನ್ನು ತಗ್ಗಿಸುವ ನಿರೀಕ್ಷೆ ಮಾಡಲಾಗಿರುವುದಾದರೂ, ಹಲವು ವಸ್ತುಗಳಿಗೆ ಸಂಬಂಧಿಸಿದಂತೆ ಅದನ್ನು ಹೆಚ್ಚಿಸಲಾಗಿದೆ. ನೆನಪಿಡಿ, ದೇಸಿ ಮಾರುಕಟ್ಟೆಯನ್ನು ನೆಚ್ಚಿಕೊಂಡು ಯಾವೊಂದು ದೇಶವೂ ಶ್ರೀಮಂತವಾದ ಉದಾಹರಣೆ ಇತಿಹಾಸದಲ್ಲಿ ಎಲ್ಲಿಯೂ ಇಲ್ಲ. ಈ ಸರಕಾರದ ಅತಿ ದೊಡ್ಡ ಆರ್ಥಿಕ ವೈಫಲ್ಯವೆಂದರೆ ಆಮದು ನೀತಿ. ಉದ್ಯೋಗ ಸೃಷ್ಟಿಯಲ್ಲಿ ಸಾಧನೆ ಕಳಪೆಯಾಗುವಲ್ಲಿ ಇದರ ಪಾಲೂ ಇದೆ. ವಿಯೆಟ್ನಾಮ್‌ನಂತಹ ದೇಶಕ್ಕೆ ಹೋಲಿಸಿದಲ್ಲಿ, ಕಳೆದ ಏಳು ವರ್ಷಗಳಿಂದ ಭಾರತದ ರಫ್ತು ನಿಂತಲ್ಲೇ ನಿಂತಿದ್ದರೆ, ಇದೇ ಅವಧಿಯಲ್ಲಿ ಆ ದೇಶದ ರಫ್ತು ಪ್ರಮಾಣ ಶೇಕಡಾ 300ರಷ್ಟು ಏರಿಕೆಯಾಗಿದೆ.

ಆದರೂ, ಇದು ವಾಸ್ತವಿಕ ಮುಂಗಡಪತ್ರ

2020ರ ಮುಂಗಡಪತ್ರವು ತಕ್ಷಣದ ಪರಿಹಾರಕ್ಕೆ ನೆರವಾಗಲಿಕ್ಕಿಲ್ಲ. ಅದಾಗ್ಯೂ, ಇದು ಜಾಣತನದ ಹಾಗೂ ವಾಸ್ತವಿಕ ಮುಂಗಡಪತ್ರವಾಗಿದೆ. ದೊಡ್ಡ ಪ್ರಮಾಣದ ಸಂಚಲನ ಸೃಷ್ಟಿಸುವಂತ ಆರ್ಥಿಕ ಅಂಶಗಳು ಇದರಲ್ಲಿ ಕಂಡು ಬಂದಿಲ್ಲ. ಆದರೆ, ಸಮಸ್ಯೆಗಳನ್ನು ಎದುರಿಸುವುದರಿಂದ ಹಣಕಾಸು ಸಚಿವರು ಸೂಕ್ಷ್ಮವಾಗಿ ತಪ್ಪಿಸಿಕೊಂಡಿದ್ದಾರೆ. ಏಕೆಂದರೆ, 2008ರ ಜಾಗತಿಕ ಆರ್ಥಿಕ ಸಂಕಷ್ಟದ ಸಮಯದಲ್ಲಿ ಕೈಗೊಂಡಿದ್ದ ಕೆಲ ಉತ್ತೇಜಕ ಸಾಹಸ ಕ್ರಮಗಳು ಆನಂತರದಲ್ಲಿ ಕುತ್ತು ತರುವಂತಹ ಪರಿಣಾಮಗಳಿಗೆ ಕಾರಣವಾಗಿದ್ದವು. ಒಟ್ಟಾರೆ ಹೇಳುವುದಾದರೆ, ವೆಚ್ಚವನ್ನು ಹತೋಟಿಯಲ್ಲಿಡುವ ಹಾಗೂ ರಾಷ್ಟ್ರೀಯ ಒಟ್ಟು ಉತ್ಪಾದನೆ (ಜಿಡಿಪಿ) ಪ್ರಮಾಣಕ್ಕೆ ಹೋಲಿಸಿದಲ್ಲಿ ಸಾಧಾರಣ ಶೇಕಡಾ 10ರಷ್ಟು ವೆಚ್ಚ ಹೆಚ್ಚಳಕ್ಕೆ ಮಾತ್ರ ಅವಕಾಶ ಕಲ್ಪಿಸುವ ಮೂಲಕ ವಿತ್ತ ಸಚಿವರು ಜಾಣ ನಡೆ ಪ್ರದರ್ಶಿಸಿದ್ದಾರೆ.

ಮುಗಿಸುವುದಕ್ಕೂ ಮುನ್ನ, ಮುಂಗಡಪತ್ರದಲ್ಲಿರುವ ಕೆಲವು ಉಪಯುಕ್ತ ಮಾಹಿತಿಯನ್ನು ನಿಮ್ಮ ಗಮನಕ್ಕೆ ತರುತ್ತೇನೆ. ನನಗೆ ವೈಯುಕ್ತಿಕವಾಗಿ ಇಷ್ಟವಾದವುಗಳೆಂದರೆ, 1) ಒಳಚರಂಡಿಗಳನ್ನು ವ್ಯಕ್ತಿಗಳಿಂದ ಸ್ವಚ್ಛಗೊಳಿಸದಿರುವ ಕುರಿತ ಬದ್ಧತೆ 2) ಕಂಪನಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ, ವಾಣಿಜ್ಯ ವಲಯದಲ್ಲಿ ಈ ಸರಕಾರದ ಕುರಿತು ಅಪನಂಬಿಕೆಗೆ ಕಾರಣವಾಗಿದ್ದ ಹಲವಾರು ನಾಗರಿಕ ಅಪರಾಧಗಳನ್ನು ಅಪರಾಧ ಪಟ್ಟಿಯಿಂದ ಹೊರಗಿಡುವುದು; ಹಾಗೂ 3) ತೆರಿಗೆದಾರರಿಗೆ ಕಿರುಕುಳ ನೀಡದಿರುವ ಕುರಿತು ಸರಕಾರವನ್ನು ಕಾನೂನಾತ್ಮಕವಾಗಿ ಬದ್ಧಗೊಳಿಸುವ ತೆರಿಗೆದಾರನ ಸನ್ನದು. ಒಂದು ವೇಳೆ ಮೋದಿ ಸರಕಾರ ಇವನ್ನೂ ಸಾಧಿಸಬಲ್ಲುದಾದರೆ, ಅದು ಸಣ್ಣ ಗೆಲುವೇನಲ್ಲ.

- ಗುರುಚರಣದಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.