ನವದೆಹಲಿ: ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ (ಸಿಎಂಐಇ) ಸಮೀಕ್ಷಾ ವರದಿ ಪ್ರಕಾರ, ಮೇ 10ರವರೆಗೆ ದೇಶದ ನಿರುದ್ಯೋಗ ದರವು ಶೇ. 3ರಷ್ಟು ಇಳಿದು ಶೇ. 23.97ಕ್ಕೆ ತಲುಪಿದೆ.
ಅಲ್ಪ ಏರಿಕೆಗೆ ಮುಖ್ಯ ಕಾರಣ ಕೃಷಿ ಚಟುವಟಿಕೆಗಳ ಹೆಚ್ಚಳ ಮತ್ತು ದೇಶದ ಕೆಲ ಭಾಗಗಳಲ್ಲಿ ಕ್ರಮೇಣ ವ್ಯವಹಾರ ಪುನರಾರಂಭ. ಇದಕ್ಕೂ ಮೊದಲ ವರದಿಯಲ್ಲಿ 2020ರ ಮೇ 3ರವರೆಗೆ ನಿರುದ್ಯೋಗ ದರವು ಶೇ. 27.1ಕ್ಕೆ ಏರಿಕೆ ಆಗಿತ್ತು.
ಸಿಎಂಐಇಯ ಸಾಪ್ತಾಹಿಕ ವರದಿಯ ಪ್ರಕಾರ, ಮೇ 10ಕ್ಕೆ ಕೊನೆಗೊಳ್ಳುವ ವಾರದ ನಿರುದ್ಯೋಗ ದರವು ಶೇ. 27.1ರಿಂದ ಶೇ. 23.97ಕ್ಕೆ ಏರಿದೆ. ಸರ್ಕಾರದ ಕಾರ್ಮಿಕ ಬೆಳವಣಿಗೆಯ ದರವು 36.2 ಪ್ರತಿಶತದಿಂದ 37.6 ಪ್ರತಿಶತಕ್ಕೆ ತಲುಪಿದೆ. ಕೆಲವು ಕೈಗಾರಿಕೆಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದ್ದು, ಅದೇ ಸಮಯದಲ್ಲಿ ಉದ್ಯೋಗದ ಪ್ರಮಾಣವು 26.4 ಪ್ರತಿಶತದಿಂದ 28.6ಕ್ಕೆ ಏರಿದೆ.
ವರದಿಯ ಪ್ರಕಾರ, ಏಪ್ರಿಲ್‌ನಲ್ಲಿ 2.7 ಕೋಟಿಗೂ ಹೆಚ್ಚು ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 2019-20ರಲ್ಲಿ 20-24 ವರ್ಷ ವಯಸ್ಸಿನ ಕಾರ್ಮಿಕರ ಸಂಖ್ಯೆ 3.42 ಕೋಟಿಗಳಷ್ಟಿತ್ತು. 2020ರ ಏಪ್ರಿಲ್‌ನಲ್ಲಿ 2.09 ಕೋಟಿಗೆ ಇಳಿದಿದೆ. ಅದೇ ಸಮಯದಲ್ಲಿ 25-29ನೇ ವಯಸ್ಸಿನವರ ಪ್ರಮಾಣದಲ್ಲಿ 1.4 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ.
ನಗರ ನಿರುದ್ಯೋಗವು ಶೇ. 27.83ಕ್ಕೆ ಇಳಿದಿದೆ. ಇದು ರಾಷ್ಟ್ರೀಯ ನಿರುದ್ಯೋಗ ದರಕ್ಕಿಂತ ಶೇ. 23.91ರಷ್ಟಿದೆ. ಗ್ರಾಮೀಣ ನಿರುದ್ಯೋಗ ದರವು ಶೇ. 22.35ರಷ್ಟಿದೆ. ಮೇ 3ಕ್ಕೆ ಕೊನೆಗೊಂಡ ವಾರದಲ್ಲಿ ನಗರ ನಿರುದ್ಯೋಗ ದರವು ಶೇ. 29.22ರಷ್ಟಿತ್ತು.