ETV Bharat / business

ನಿರ್ಬಂಧಿತ ತುರ್ತು ಕೋವಿಡ್ ಚಿಕಿತ್ಸೆಗೆ ಝೈಡಸ್ ಕ್ಯಾಡಿಲಾ ಔಷಧಿಗೆ ಡಿಜಿಸಿಐ ಅನುಮೋದನೆ - ಝೈಡಸ್ ಆಂಟಿವೈರಲ್ ವಿರಾಫಿನ್

ಭಾರತದಾದ್ಯಂತ 20-25 ಕೇಂದ್ರಗಳಲ್ಲಿ ನಡೆಸಿದ ಪ್ರಯೋಗದಲ್ಲಿ ವಿರಾಫಿನ್ ಪೂರಕ ಆಮ್ಲಜನಕದ ಅಗತ್ಯವನ್ನು ಕಡಿಮೆ ತೋರಿಸಿದೆ. ಇದು ಉಸಿರಾಟದ ತೊಂದರೆ ಮತ್ತು ವೈಫಲ್ಯವನ್ನು ನಿಯಂತ್ರಿಸಲು ಸಮರ್ಥವಾಗಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ..

Zydus Cadila
Zydus Cadila
author img

By

Published : Apr 23, 2021, 8:21 PM IST

Updated : Apr 23, 2021, 8:27 PM IST

ನವದೆಹಲಿ : ವಯಸ್ಕರಲ್ಲಿ ಮಾಡಿರೇಟ್ ಕೋವಿಡ್​-19 ಸೋಂಕಿಗೆ ಚಿಕಿತ್ಸೆ ನೀಡುವಲ್ಲಿ ‘ವಿರಾಫಿನ್’, ಪೆಗೈಲೇಟೆಡ್ ಇಂಟರ್​ಫೆರಾನ್ ಆಲ್ಫಾ -2ಬಿ (ಪೆಗಿಫ್ಎನ್) ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ನಿರ್ಬಂಧಿತ ತುರ್ತು ಬಳಕೆ ಅನುಮೋದನೆ ನೀಡಿದೆ ಎಂದು ಝೈಡಸ್ ಕ್ಯಾಡಿಲಾ ತಿಳಿಸಿದೆ.

ವಿರಾಫಿನ್​ನ ಉಪಯೋಗ ಏನು?

ಆಂಟಿವೈರಲ್ ವಿರಾಫಿನ್‌ನ ಸಿಂಗಲ್​ ಡೋಸ್ ಸಬ್​ಕ್ಯುಟೇನಿಯಸ್ ರೋಗಿಗಳಿಗೆ ಚಿಕಿತ್ಸೆಯನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ.

ಕೋವಿಡ್​ ಪೀಡಿತರಿಗೆ ವಿರಾಫಿನ್ ಔಷಧಿ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ತೊಂದರೆಗಳನ್ನು ತಪ್ಪಿಸುತ್ತದೆ. ಆಸ್ಪತ್ರೆ ಹಾಗೂ ಸಾಂಸ್ಥಿಕವಾಗಿ ಬಳಸಲು ವೈದ್ಯಕೀಯ ತಜ್ಞರ ಪ್ರಿಸ್ಕ್ರಿಪ್ಷನ್‌ ವಿರಾಫಿನ್‌ಗೆ ಅಗತ್ಯವಾಗಿದೆ.

ಭಾರತದಾದ್ಯಂತ 20-25 ಕೇಂದ್ರಗಳಲ್ಲಿ ನಡೆಸಿದ ಪ್ರಯೋಗದಲ್ಲಿ ವಿರಾಫಿನ್ ಪೂರಕ ಆಮ್ಲಜನಕದ ಅಗತ್ಯವನ್ನು ಕಡಿಮೆ ತೋರಿಸಿದೆ. ಇದು ಉಸಿರಾಟದ ತೊಂದರೆ ಮತ್ತು ವೈಫಲ್ಯವನ್ನು ನಿಯಂತ್ರಿಸಲು ಸಮರ್ಥವಾಗಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಕೋವಿಡ್​-19 ಚಿಕಿತ್ಸೆಯಲ್ಲಿ ಪ್ರಮುಖ ಸವಾಲುಗಳಲ್ಲಿ ಉಸಿರಾಟ ಸಮಸ್ಯೆ ಮುಖ್ಯವಾಗಿದೆ.

ಈ ಕುರಿತು ಮಾತನಾಡಿದ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರ್ವಿಲ್ ಪಟೇಲ್, ನಾವು ಚಿಕಿತ್ಸೆ ನೀಡಲು ಸಮರ್ಥರಾಗಿದ್ದೇವೆ. ಈ ಔಷಧಿ ವೈರಲ್ ಲೋಡ್ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಉತ್ತಮ ರೋಗ ನಿರ್ವಹಣೆಗೆ ಸಹಾಯ ಮಾಡುತ್ತದೆ. ಕೋವಿಡ್​-19 ವಿರುದ್ಧದ ಈ ಯುದ್ಧದಲ್ಲಿ ನಾವು ಸೋಂಕಿತರಿಗೆ ನಿರ್ಣಾಯಕ ಚಿಕಿತ್ಸೆ ಒದಗಿಸುತ್ತೇವೆ ಎಂದಿದ್ದಾರೆ.

ಝೈಡಸ್ ಕ್ಯಾಡಿಲಾ ಶುಕ್ರವಾರ ಅಮೆರಿಕ ಆರೋಗ್ಯ ನಿಯಂತ್ರಕದಿಂದ ಆಂಟಿ-ಆರ್ಹೆತ್ಮಮಿಕ್ ಔಷಧ ಪ್ರೊಪಾಫೆನೋನ್ ಹೈಡ್ರೋಕ್ಲೋರೈಡ್ ಮಾತ್ರೆಗಳನ್ನು ಮಾರುಕಟ್ಟೆಗೆ ತರಲು ಅಂತಿಮ ಅನುಮೋದನೆ ಪಡೆದಿದೆ ಎಂದಿದೆ.

ಪ್ರೊಪಾಫೆನೋನ್ ಆಂಟಿ-ಆರ್ಹೆತ್ಮಮಿಕ್ ಔಷಧ ಎಂದು ಕರೆಯಲಾಗುತ್ತದೆ. ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗುವ ಹೃದಯದಲ್ಲಿನ ಕೆಲವು ವಿದ್ಯುತ್ ಸಂಕೇತಗಳ ಚಟುವಟಿಕೆ ನಿರ್ಬಂಧಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 225 ಎಂಜಿ, 325 ಎಂಜಿ ಮತ್ತು 425 ಎಂಜಿ ಸಾಮರ್ಥ್ಯದಲ್ಲಿ ಪ್ರಾಪಾಫೆನೋನ್ ಹೈಡ್ರೋಕ್ಲೋರೈಡ್ ಮಾತ್ರೆಗಳಿವೆ.

Last Updated : Apr 23, 2021, 8:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.