ನವದೆಹಲಿ: ಚೀನಾ ವಿರೋಧಿ ಮನೋಭಾವ ಸಾಮಾಜಿಕ ಮಾಧ್ಯಮಕ್ಕೆ ಸೀಮಿತವಾಗಿದೆ ಎಂಬ ಪ್ರತಿಪಾದನೆಯ ನಡುವೆ ಚೀನೀ ಮೂಲದ ಶಿಯೋಮಿ ತನ್ನ ಸ್ಟೋರ್ ಬ್ರಾಂಡಿಂಗ್ ಅನ್ನು ಮರೆಮಾಚಲು ಮುಂದಾಗಿದೆ ಎಂಬುದು ತಿಳಿಬಂದಿದೆ.
ಭಾರತ-ಚೀನಾ ಮಧ್ಯೆ ನಡೆಯುತ್ತಿರುವ ಗಡಿ ಸಂಬಂಧಿತ ಉದ್ವಿಗ್ನತೆಯಿಂದ ಶಿಯೋಮಿ ತನ್ನ ಮಾರುಕಟ್ಟೆಗೆ ಧಕ್ಕೆ ಆಗಬಹುದು ಎಂಬ ಭೀತಿಯಲ್ಲಿದೆ. ಹೀಗಾಗಿ, ತನ್ನ ಸ್ಟೋರ್ ಬ್ರಾಂಡಿಂಗ್ ಅನ್ನು ಮೇಡ್ ಇನ್ ಇಂಡಿಯಾ ಮೂಲಕ ಕವರ್ ಮಾಡಿ ಬಿಳಿ ಲೋಗೋದಡಿ ಆರಂಭಿಸಿದೆ ಎಂದು ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ (ಎಐಎಂಆರ್‌ಎ) ತಿಳಿಸಿದೆ.
ನೈಜ ವಾಸ್ತವಂಶವನ್ನು ತಮ್ಮ ಗಮನಕ್ಕೆ ತರುವಂತೆ ಸಂಘಟನೆಯು ಎಲ್ಲಾ ಚೀನೀ ಮೊಬೈಲ್ ಬ್ರಾಂಡ್‌ಗಳಿಗೆ ಪತ್ರ ಕಳುಹಿಸಿದ ಬಳಿಕ ಶಿಯೋಮಿ ಈ ಕ್ರಮ ಕೈಗೊಂಡಿದೆ.
ಜೂನ್ 15ರಂದು ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ), ಗಡಿ ಸಂಘರ್ಷದಲ್ಲಿ 20 ಭಾರತೀಯ ಸೈನಿಕರನ್ನು ಹತ್ಯೆ ಮಾಡಿತ್ತು. ಈ ನಂತರ ದೇಶದಲ್ಲಿ ಚೀನಾ ವಿರೋಧಿ ಭಾವನೆ ತಾರಕಕ್ಕೇರಿದೆ.
ಮಿ (ಶಿಯೋಮಿ) ತನ್ನ ಉತ್ಪನ್ನಗಳಿಗೆ 'ಮೇಡ್ ಇನ್ ಇಂಡಿಯಾ' ಲೇಬಲ್ಗಳನ್ನು ಬಿಳಿ ಬಣ್ಣದಲ್ಲಿ ಹಾಕಲು ಪ್ರಾರಂಭಿಸಿದೆ" ಎಂದು ಎಐಎಂಆರ್‌ಎ ರಾಷ್ಟ್ರೀಯ ಅಧ್ಯಕ್ಷ ಅರವಿಂದರ್ ಖುರಾನಾ ಐಎಎನ್‌ಎಸ್‌ಗೆ ತಿಳಿಸಿದರು.
ಈ ಶಿಯೋಮಿ ಅವರನ್ನು ಸಂಪರ್ಕಿಸಿದಾಗ, ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.