ETV Bharat / business

'ವೊಡಾಫೋನ್​ ಭಾರತದಲ್ಲಿ ಮತ್ತೆ ಮೈಕೊಡವಿ ಎದ್ದೇಳಲಿದೆ'

ವೊಡಾಫೋನ್ ಸಿಇಒ ನಿಕ್​ ರೀಡ್ ಅವರು ಶುಕ್ರವಾರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು. ಮಾರುಕಟ್ಟೆಯಲ್ಲಿ ತೆವಳುತ್ತಾ ಸಾಗುತ್ತಿರುವ ವೊಡಾಫೋನ್- ಐಡಿಯಾ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

Vodafone
ವೊಡಾಫೋನ್
author img

By

Published : Mar 6, 2020, 10:29 PM IST

ನವದೆಹಲಿ: ವೊಡಾಫೋನ್ ಗ್ಲೋಬಲ್ ಸಿಇಒ ನಿಕ್ ರೀಡ್ ಅವರ ಕಂಪನಿಯು ಭಾರತದಲ್ಲಿ ನವೀನ ಮತ್ತು ಉತ್ತಮ ಆರಂಭ ಪಡೆಯಲು ಬಯಸಿದೆ ಎಂದು ಮೂಲಗಳಿಗೆ ತಿಳಿಸಿವೆ.

ರೀಡ್ ಅವರು ಶುಕ್ರವಾರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದರು. ಮಾರುಕಟ್ಟೆಯಲ್ಲಿ ತೆವಳುತ್ತಾ ಸಾಗುತ್ತಿರುವ ವೊಡಾಫೋನ್- ಐಡಿಯಾ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಟೆಲಿಕಾಂ ಕ್ಷೇತ್ರದಲ್ಲಿ ಸರ್ಕಾರವು ಏಕಸ್ವಾಮ್ಯ ನೀತಿ ವಿರೋಧಿಸುತ್ತದೆ. ವೊಡಾಫೋನ್- ಐಡಿಯಾ ಉಳಿದುಕೊಂಡು ಭಾರತದಲ್ಲಿ ಹೂಡಿಕೆ ಮಾಡಬೇಕೆಂದು ಪ್ರಸಾದ್ ತಮ್ಮ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತದ ಬೆಳೆಯುತ್ತಿರುವ ಆರ್ಥಿಕ ಪ್ರಭಾವ ಮತ್ತು ವಿದೇಶಿ ಹೂಡಿಕೆದಾರರಿಗೆ ಅದರ ಆಕರ್ಷಣೆ. ಟೆಲಿಕಾಂ ಮಾರುಕಟ್ಟೆಯ ಅಗಾಧ ವಿಸ್ತಾರವನ್ನು ರೀಡ್​ ಅವರ ಗಮನಕ್ಕೆ ಸಚಿವರು ತಂದಿದ್ದಾರೆ ಎನ್ನಲಾಗುತ್ತಿದೆ.

ಕಂಪನಿಯು ಭಾರತದಲ್ಲಿ 30 ಕೋಟಿ ಗ್ರಾಹಕರನ್ನು ಹೊಂದಿದೆ. ಟೆಲಿಕಾಂ ಮಾರುಕಟ್ಟೆಯು ದೊಡ್ಡ ಅವಕಾಶಗಳನ್ನು ಹೊಂದಿದೆ. ಭಾರತವು ನ್ಯಾಯಯುತ ಸ್ಪರ್ಧೆಯನ್ನು ಬಯಸುತ್ತದೆ ಎಂದು ಸಚಿವರು ವೊಡಾಫೋನ್ ಸಿಇಒಗೆ ತಿಳಿಸಿದ್ದಾರೆ.

ಎಜಿಆರ್ ಸಮಸ್ಯೆಯನ್ನು ಕಂಪನಿಯು ಬಹಳ ಹಿಂದೆಯೇ ಪರಿಹರಿಸಬೇಕಾಗಿತ್ತು ಎಂದು ರೀಡ್ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.