ಗುಂಜುಂ: ಹಾಲಿನ ಪ್ಲಾಸ್ಟಿಕ್ ಚೀಲದ ಭೀತಿಯನ್ನು ನಿವಾರಿಸುವ ಉದ್ದೇಶದಿಂದ ಒಡಿಶಾದ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳೊಂದಿಗೆ ಕೈಜೋಡಿಸಿ ಎಟಿಎಂಗಳಲ್ಲಿ ಹಾಲು ಮಾರಾಟವನ್ನು ಪರಿಚಯಿಸಿದೆ.
ಹಾಲಿನ ಗ್ರಾಹಕರು ಮನೆಯಿಂದ ಪಾತ್ರೆಗಳನ್ನು ತಂದು ಎಟಿಎಂ ಮಷಿನ್ನಲ್ಲಿ ಹಣಹಾಕಿ ಹಾಲು ಪಡೆಯ ಬಹುದಾಗಿದೆ. ಇದು ಪ್ಲಾಸ್ಟಿಕ್ ಚೀಲದ ಅಗತ್ಯತೆಯನ್ನು ನಿವಾರಿಸಿದೆ.
ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿನ ಹಾಲಿನ ಮಾರಾಟಕ್ಕೆ ಕೊನೆಯಾಡಿ ಎಟಿಎಂ ಘಟಕಗಳ ಮೂಲಕ ಮಾರಾಟ ಮಾಡಲಾಗುತ್ತೆ. ಪರಿಸರ ಮತ್ತು ಗ್ರಾಹಕ ಸ್ನೇಹಿ ಯೋಜನೆಗೆ ಗ್ರೇಟರ್ ಗಂಜಾಂ ಗಜಪತಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮತ್ತು ಟಾಟಾ ಸ್ಟೀಲ್ ಸಹಯೋಗದೊಂದಿಗೆ ಜಾರಿಗೆ ಬಂದಿದ್ದರೂ ಜಿಲ್ಲಾಧಿಕಾರಿ ಅಮೃತ ಕುಲಂಗೆ ಅವರು ಪ್ರಮುಖ ರೂವಾರಿ ಆಗಿದ್ದಾರೆ.
ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಅನುಷ್ಠಾನ ಜಾರಿಗೆ ತರುವ ಸಮಯದಲ್ಲಿ ತಜ್ಞರು ಮತ್ತು ಜನರು ಪ್ಲಾಸ್ಟಿಕ್ ಹಾಲಿನ ಚೀಲಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದಕ್ಕೆ ಪರ್ಯಾಯವಾಗಿ ರೂಪುಗೊಂಡಿದ್ದೇ ಹಾಲಿನ ಎಟಿಎಂ ಮಷಿನ್.
500ನ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ ಹೊಂದಿರುವ ಪ್ರತಿ ಎಟಿಎಂಗಳಲ್ಲಿ ಹಾಲು ಪೂರೈಸಲು 7,200 ಡೈರಿ ರೈತರೊಂದಿಗೆ ಸಹಕಾರಿ ಸಂಘಗಳು ಒಪ್ಪಂದ ಮಾಡಿಕೊಂಡಿವೆ. ಗ್ರಾಹಕರು ಕನಿಷ್ಠ 250 ಮಿ.ಲೀ ನಿಂದ ಖರೀಸಿಬಹುದಾಗಿದೆ. ಒಂದು ಲೀಟರ್ ಹಾಲಗೆ 40 ರೂ. ಹಾಗೂ ಕನಿಷ್ಠ 250 ಮಿ.ಲೀಗೆ 10 ರೂ. ನಿಗದಿಪಡಿಸಲಾಗಿದೆ.
ಟಾಟಾ ಸಮೂಹವು ತನ್ನ ಸಿಎಸ್‌ಆರ್ ನಿಧಿಯಡಿ 6 ಲಕ್ಷ ರೂ. ಹಣ ಒದಗಿಸಿದ್ದು, ಇದರಿಂದ ಜಿಲ್ಲೆಯ ಬೆರ್ಹಾಂಪುರದ ಗೇಟ್ ಬಜಾರ್ ಬಳಿ ತಿಂಗಳ ಹಿಂದೆ ಪಾಶ್ಚರೀಕರಿಸಿದ ಹಾಲಿನ ಎಟಿಎಂ ಸ್ಥಾಪಿಸಲಾಗಿದೆ. ನಿತ್ಯ 250 ಲೀಟರ್ ಪಾಶ್ಚರೀಕರಿಸಿದ ಹಾಲು ವಿತರಣೆ ಆಗುತ್ತಿದೆ.