ನವದೆಹಲಿ: ದೇಶಿ ಮಾರುಕಟ್ಟೆಯ ಬಿಎಸ್ಇ ಮತ್ತು ರಾಷ್ಟ್ರೀಯ ಷೇರು ವಿನಿಮಯದಿಂದ ಡಿ - ಲಿಸ್ಟಿಂಗ್ ಮಾಡಲು ಮಂಡಳಿ ಅನುಮೋದನೆ ನೀಡಿದೆ ಎಂದು ವೇದಾಂತ ಲಿಮಿಟೆಡ್ ಸೋಮವಾರ ತಿಳಿಸಿದೆ.
ಕಂಪನಿಯ ನಿರ್ದೇಶಕರ ಮಂಡಳಿಯ (ಬೋರ್ಡ್) ಸಭೆಯು ಸೋಮವಾರ ನಡೆಯಿತು. ಈ ವೇಳೆ, ಡಿ - ಲಿಸ್ಟಿಂಗ್ ಪ್ರಸ್ತಾವ ಪರಿಗಣಿಸಿ ಅದಕ್ಕೆ ಅನುಮೋದನೆ ನೀಡಿ ವಿವಿಧ ಅಂಶಗಳನ್ನು ಚರ್ಚಿಸಲಾಯಿತು ಎಂದು ವೇದಾಂತ ಲಿಮಿಟೆಡ್ ಬಿಎಸ್ಇಗೆ ಅರ್ಜಿಯಲ್ಲಿ ತಿಳಿಸಿದೆ.
ಅಂಚೆ ಮತಪತ್ರ ಮತ್ತು ಇ - ಮತದಾನದ ವಿಶೇಷ ನಿರ್ಣಯದ ಮೂಲಕ ಡಿ - ಲಿಸ್ಟಿಂಗ್ ಪ್ರಸ್ತಾಪಕ್ಕೆ ಷೇರುದಾರರ ಅನುಮೋದನೆ ಪಡೆಯಲು ಕಂಪನಿಗೆ ಅನುಮೋದನೆ ನೀಡಲಾಗಿದೆ ಮತ್ತು ಅಂಚೆ ಮತಪತ್ರ ಪ್ರಕಟಣೆಯ ಕರಡು ಮತ್ತು ಅದರ ವಿವರಣಾತ್ಮಕ ಹೇಳಿಕೆ ಸಹ ಅನುಮೋದಿಸಲಾಗಿದೆ ಎಂದು ಹೇಳಿದೆ.
ಕಳೆದ ವಾರವಷ್ಟೇ ಸಂಸ್ಥೆಯ ಮುಖ್ಯಸ್ಥ ಅಗರ್ವಾಲ್ ಸಾರ್ವಜನಿಕರ ಬಳಿ ಇರುವ ವೇದಾಂತ ಲಿಮಿಟೆಡ್ನ ಷೇರುಗಳನ್ನು ಖರೀದಿಸುವ ಮೂಲಕ ಸಂಸ್ಥೆಯನ್ನು ಖಾಸಗಿಯಾಗಿ ತೆಗೆದುಕೊಂಡ ನಿರ್ಣಯವನ್ನು ಪ್ರಕಟಿಸಿದ್ದರು.