ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಡೇ ದೇಶ್ ಕಾ ಆಮ್ ನಾಗರಿಕ್ (ಉಡಾನ್) ಯೋಜನೆ ಅಡಿಯಲ್ಲಿ ಪ್ರಾದೇಶಿಕ ಸಂಪರ್ಕ ಮಾರ್ಗಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ.
ಪ್ರಸ್ತುತ ಇರುವ ಉಡಾನ್ ಕಾರ್ಯಾಚರಣೆಯಲ್ಲಿ ಹೊಸದಾಗಿ 12 ಮಾರ್ಗಗಳನ್ನು ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಇದುವರೆಗೂ ಮಂಜೂರಾದ ಒಟ್ಟು 706 ಮಾರ್ಗಗಳಲ್ಲಿ ಉಡಾನ್ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಒಟ್ಟು ಮಾರ್ಗಗಳ ಸಂಖ್ಯೆ 186ಕ್ಕೆ ಏರಿಕೆಯಾಗಿದೆ. ಇದರಲ್ಲಿ 8 ಮಾರ್ಗಗಳು ಪ್ರವಾಸಿ ಪ್ರದೇಶಗಳಿಗೆ ಸೇರಿವೆ. ದುರ್ಗಾಪುರ ವಿಮಾನ ನಿಲ್ದಾಣವು ಈ ಯೋಜನೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 40ನೇ ವಿಮಾನ ನಿಲ್ದಾಣವಾಗಿದೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.