ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 24ರಂದು ಭಾರತಕ್ಕೆ ಆಗಮಿಸಲಿದ್ದು, ಈ ವೇಳೆ ಅವರನ್ನು ಸ್ವಾಗತಿಸಲು ಟೆಕ್ ಕಂಪನಿ ಬಾಬಲ್ ಎಐ ಇಂಡಿಕ್ ಕೀಬೋರ್ಡ್‌ನಲ್ಲಿ ವಿಶೇಷ ಸರಣಿಯ ಜಿಫ್ಸ್ (ಜಿಐಎಫ್) ಮತ್ತು ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದೆ.
ಡೊನಾಲ್ಡ್ ಟ್ರಂಪ್ ಅವರು ಕುರ್ತಾ- ಪೈಜಾಮಾ ಧರಿಸಿರುವ, ನಮಸ್ತೆಯೊಂದಿಗೆ ಶುಭಾಶಯ ಕೋರುವ, ಪಂಜಾಬಿ ಉಡುಪಿನಲ್ಲಿ ಭಲ್ಲೆ ಭಲ್ಲೆ ಡ್ಯಾನ್ಸ್ ಪ್ರದರ್ಶನದ ಮತ್ತು ಭಾರತೀಯರೊಂದಿಗೆ ಸೆಲ್ಫಿ ತೆಗೆದುಕೊಳ್ಳುವಂತಹ ಹೊಸ ಶೈಲಿಯ ಸ್ಟಿಕ್ಕರ್‌ಗಳು ಮತ್ತು ಜಿಐಎಫ್‌ಗಳು ನೋಡುಗರಲ್ಲಿ ನಗೆ ತರಿಸುತ್ತವೆ.
ಟ್ರಂಪ್ ಅವರಿಗೆ ಸಂಬಂಧಿಸಿರುವ ಜಿಐಎಫ್ ಮತ್ತು ಸ್ಟಿಕ್ಕರ್‌ಗಳ ಹೊಸ ಸೆಟ್ಗಳು ಆನ್‌ಲೈನ್ ಸಂಭಾಷಣೆಗಳಿಗೆ ಸಾಕಷ್ಟು ಮೆರಗು ನೀಡಲಿವೆ. ಈ ಸ್ಟಿಕ್ಕರ್‌ಗಳನ್ನು ದೇಸಿಯ ವ್ಯಂಗ್ಯಚಿತ್ರ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಬಾಬಲ್ ಎಐ ಸ್ಥಾಪಕ/ ಸಿಇಒ ಅಂಕಿತ್ ಪ್ರಸಾದ್ ತಿಳಿಸಿದ್ದಾರೆ.