ನವದೆಹಲಿ: ದೂರಸಂಪರ್ಕ ಸೇವೆಗಳನ್ನು ನಿರ್ವಹಿಸಲು ಅಗತ್ಯವಾದ ನಿರ್ಣಾಯಕ ವೆಚ್ಚಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ತುರ್ತು ಆಧಾರದ ಮೇಲೆ ಬಾಕಿ ಇರುವ 1,500 ಕೋಟಿ ರೂ. ನೀಡುವಂತೆ ಬಿಎಸ್ಎನ್ಎಲ್ಗೆ ಟೆಲಿಕಾಂ ಆಪರೇಟರ್ ಸಂಸ್ಥೆ ಬೇಡಿಕೆ ಇಟ್ಟಿದೆ.
ಪಾವತಿಯಾಗದ ಹಣದಿಂದ ಈಗಾಗಲೇ ದೇಶದ ವಿವಿಧ ಪ್ರದೇಶಗಳಲ್ಲಿ ಮೊಬೈಲ್ ಸೇವೆ ಸ್ಥಗಿತಗೊಂಡಿದೆ ಎಂದು ತಿಳಿಸಿದೆ.
ಇಂಡಸ್ಟ್ರಿ ಬಾಡಿ ಟವರ್ ಮತ್ತು ಇನ್ಫ್ರಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಷನ್ (ತೈಪಾ) ಆಶ್ರಯದಲ್ಲಿ ಎಂಟು ಮೂಲಸೌಕರ್ಯ ಸಂಸ್ಥೆಗಳ ಗ್ರೂಪ್, ಬಿಎಸ್ಎನ್ಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಿ.ಕೆ. ಪುರ್ವಾರ್ ಅವರಿಗೆ ಪತ್ರ ಬರೆದಿದೆ. ಟೆಲಿಕಾಂ ಪಿಎಸ್ಯು ನೆಟ್‌ವರ್ಕ್ ನಿರ್ವಹಿಸಲು ಸಂಗ್ರಹಣೆ ಸೇರಿದಂತೆ ಇತರ ಸೇವೆಗಳಲ್ಲಿ ಅಡೆಚಣೆಯಾಗಿದೆ ಎಂದು ಹೇಳಿದೆ.
ಬಾಕಿ ಉಳಿದಿರುವ 1,500 ಕೋಟಿ ರೂ. ಈಗ ಅತ್ಯಗತ್ಯವಾಗಿ ಬೇಕಿದೆ. ಸಿಎಂಡಿ, ಬಿಎಸ್ಎನ್ಎಲ್ನಿಂದ ತುರ್ತು ಹಸ್ತಕ್ಷೇಪ ಮತ್ತು ಬೆಂಬಲವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ತೈಪಾ ಡೈರೆಕ್ಟರ್ ಜನರಲ್ ಟಿ.ಆರ್ ದುವಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟೆಲಿಕಾಂ ಮೂಲಸೌಕರ್ಯ ಕಂಪನಿಗಳು ಈಗಾಗಲೇ ಹಣಕಾಸಿನ ತೊಂದರೆಗಳನ್ನು ಎದುರಿಸುತ್ತಿವೆ. ನಡೆಯುತ್ತಿರುವ ಲಾಕ್‌ಡೌನ್ ಸಂದರ್ಭದಲ್ಲಿ ನೆಟ್‌ವರ್ಕ್ ಸೇವೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಕಷ್ಟು ಶ್ರಮಿಸುತ್ತಿವೆ ಎಂದು ಹೇಳಿದರು.
ಸಿಂಧೂ ಟವರ್ಸ್ ಲಿಮಿಟೆಡ್, ಎಟಿಸಿ ಟೆಲಿಕಾಂ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಭಾರತಿ ಇನ್ಫ್ರಾಟೆಲ್ ಲಿಮಿಟೆಡ್, ಟವರ್ ವಿಷನ್ ಲಿಮಿಟೆಡ್, ಸ್ಟರ್ಲೈಟ್ ಟೆಕ್ನಾಲಜೀಸ್ ಲಿಮಿಟೆಡ್, ಸ್ಪೇಸ್ ಟೆಲಿಂಕ್ ಲಿಮಿಟೆಡ್, ಅಪ್ಲೈಡ್ ಸೋಲಾರ್ ಟೆಕ್ನಾಲಜೀಸ್ ಮತ್ತು ಕಾಸ್ಲೈಟ್ ಇಂಡಿಯಾ ಲಿಮಿಟೆಡ್ ಪರವಾಗಿ ತೈಪಾ ತುರ್ತಾಗಿ ಸ್ಪಂದಿಸುವಂತೆ ಕೋರಿದ್ದಾರೆ.
ಬಿಎಸ್‌ಎನ್‌ಎಲ್ ಒಟ್ಟು ಬಾಕಿಯಲ್ಲಿ ಮೊಬೈಲ್ ಟವರ್ ಎಟಿಸಿ ಸಂಸ್ಥೆ 606.4 ಕೋಟಿ ರೂ. ಬ್ರಾಡ್‌ಬ್ಯಾಂಡ್ ತಂತ್ರಜ್ಞಾನ ಸಂಸ್ಥೆ ಸ್ಟರ್ಲೈಟ್ ಟೆಕ್ನಾಲಜೀಸ್‌ಗೆ 488 ಕೋಟಿ ರೂ., ಸಿಂಧೂ ಟವರ್ಸ್‌ಗೆ 127 ಕೋಟಿ ರೂ., ಟವರ್ ವಿಷನ್‌ಗೆ 118.2 ಕೋಟಿ ಮತ್ತು ಭಾರ್ತಿ ಇನ್ಫ್ರಾಟೆಲ್ಗೆ 100 ಕೋಟಿ ರೂ. ಪಾವತಿಸಬೇಕಿದೆ.