ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದ ತನ್ನ ಆದಾಯವನ್ನು ಹೊರಡಿಸಿದ್ದು, ಈ ವರ್ಷದ ಅಂತ್ಯದ ವೇಳೆಗೆ 30,000 ಫ್ರಶರ್ಸ್ (ಹೊಸಬರು) ನೇಮಸಿಕೊಳ್ಳುವುದಾಗಿ ಹೇಳಿದೆ.
ತಂತ್ರಜ್ಞಾನವು ಹೊಸದಾಗಿ ರೂಪುಗೊಳ್ಳುವ ಅಥವಾ ಬೇಡಿಕೆಯ ಉತ್ತಮವಾಗಿದ್ದಾಗ ಉತ್ತಮಗೊಳಿಸುವುದಿಲ್ಲ. ಆದರೆ, ಈಗ ನಾವು ಬದಲಾಗಿದ್ದೇವೆ. ಈಗಷ್ಟೇ ಪದವಿ ಮುಗಿಸಿ ಹೊರಬರುವ ಯುವಕರನ್ನು ತರಬೇತಿ ನೀಡಿ ಟಿಸಿಎಸ್ಗೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಸಿಇಒ ಮತ್ತು ಎಂಡಿ ರಾಜೇ ಶ್ ಗೋಪಿನಾಥನ್ ತಿಳಿಸಿದ್ದಾರೆ.
ಕಳೆದ ತ್ರೈಮಾಸಿಕದಲ್ಲಿ ಯೋಜಿತವಾಗಿ 30,000 ಹೊಸ ಪದವೀಧರರಲ್ಲಿ ಶೇ 40ರಷ್ಟು ಯುವಕರನ್ನು ಟಿಸಿಎಸ್ ನೇಮಕಗೊಂಡಿದೆ. ಇದು ವೆಚ್ಚವನ್ನು ಕಡಿಮೆ ಮಾಡುವ ಯೋಜನೆಯ ಒಂದು ಭಾಗವಾಗಿದೆ ಎಂದರು.
ಈ ತ್ರೈಮಾಸಿಕದಲ್ಲಿ 14,097 ನೌಕರರನ್ನು ಮತ್ತೆ ನೇಮಿಸಕೊಳ್ಳಲಿದ್ದೇವೆ. ಕಂಪನಿಯ ಇದುವರಿಗಿನ ತ್ರೈಮಾಸಿಕದಲ್ಲಿ ಈ ಪರಿ ನೇಮಕಾತಿ ಮಾಡಿಕೊಂಡಿರಲಿಲ್ಲ ಎಂದರು.