ನವದೆಹಲಿ: ಫೆಬ್ರವರಿ ಮಾಸಿಕದಲ್ಲಿ ಟಾಟಾ ಮೋಟಾರ್ಸ್ ಮಾರಾಟದಲ್ಲಿ ಶೇ 51.07ರಷ್ಟು ಹೆಚ್ಚಳವಾಗಿ 61,365 ಯುನಿಟ್‌ಗಳಿಗೆ ಏರಿಕೆ ಆಗಿದೆ.
ಕಳೆದ ವರ್ಷ ಇದೇ ತಿಂಗಳಲ್ಲಿ ಟಾಟಾ ಒಟ್ಟು 40,619 ಯುನಿಟ್‌ಗಳನ್ನು ಮಾರಾಟ ಮಾಡಿತ್ತು.
ದೇಶದಲ್ಲಿ 38,002 ಯುನಿಟ್‌ಗಳಿಗೆ ಹೋಲಿಸಿದರೆ ಒಟ್ಟು ದೇಶೀಯ ಮಾರಾಟವು ಶೇ 54ರಷ್ಟು ಏರಿಕೆ ಕಂಡು 58,473 ಯೂನಿಟ್ಗೆ ತಲುಪಿದೆ ಎಂದು ಟಾಟಾ ಮೋಟಾರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಶೀಲನೆಯ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು ಎರಡು ಪಟ್ಟು ಏರಿಕೆಯಾಗಿ 27,225ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 12,430 ಯುನಿಟ್‌ಗಳಷ್ಟಿತ್ತು.
ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ 21ರಷ್ಟು ಹೆಚ್ಚಳವಾಗಿ 33,966 ಯುನಿಟ್‌ಗಳಿಗೆ ತಲುಪಿದ್ದು, ಇದು ಹಿಂದಿನ ವರ್ಷದ 28,071 ಯುನಿಟ್‌ಗಳಷ್ಟಿತ್ತು.
ಇದನ್ನೂ ಓದಿ: ಮಾರುತಿ ಸುಜುಕಿ ಶೈನಿಂಗ್: ಕಾರು ಮಾರಾಟದಲ್ಲಿ ಶೇ 11.8 ರಷ್ಟು ಜಿಗಿತ!