ETV Bharat / business

ವಾಹನ ಮಾಲೀಕರಿಗೆ ಬಿಗ್ ರಿಲೀಫ್ ಕೊಟ್ಟ ಟಾಟಾ ಮೋಟಾರ್ಸ್​..! - ಟಾಟಾ ಮೋಟಾರ್ಸ್ ವಾಹನಗಳ ಖಾತರಿ ಅವಧಿ ಮುಂದೂಡಿಕೆ

ಕೋವಿಡ್​-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್, ವಿಶ್ವದಾದ್ಯಂತ ಇರುವ ತನ್ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಸೇವಾ ಖಾತರಿಯನ್ನು ವಿಸ್ತರಿಸಿದೆ. ಲಾಕ್‌ಡೌನ್ ಅವಧಿಯಲ್ಲಿ ನಿಗದಿಪಡಿಸಿದ್ದ ಉಚಿತ ಸೇವೆಗಳಿಗೆ ಎರಡು ತಿಂಗಳ ವಿಸ್ತರಣೆಯನ್ನು ಒದಗಿಸುತ್ತಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

Tata Motors
ಟಾಟಾ ಮೋಟಾರ್ಸ್
author img

By

Published : Apr 21, 2020, 6:22 PM IST

ನವದೆಹಲಿ: ಲಾಕ್‌ಡೌನ್ ಅವಧಿಯಲ್ಲಿ ವಾಯ್ದೆ ಮುಗಿಯುತ್ತಿರುವ ತನ್ನ ಎಲ್ಲಾ ವಾಣಿಜ್ಯ ವಾಹನಗಳ ಖಾತರಿ ಸಮಯವನ್ನು (ವಾರಂಟಿ) ಎರಡು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.

ಕೋವಿಡ್​-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್, ವಿಶ್ವದಾದ್ಯಂತ ಇರುವ ತನ್ನ ವಾಣಿಜ್ಯ ವಾಹನಗಳ ಗ್ರಾಹಕರಿಗೆ ಸೇವಾ ಖಾತರಿಯನ್ನು ವಿಸ್ತರಿಸಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ಹೇಳಿದೆ.

ವಾಣಿಜ್ಯ ವಾಹನ ಗ್ರಾಹಕರಿಗೆ ಸೇವಾ ವಿಸ್ತರಣೆಯ ಭಾಗವಾಗಿ ಟಾಟಾ ಮೋಟಾರ್ಸ್, ಈ ಹಿಂದೆ ಲಾಕ್‌ಡೌನ್ ಅವಧಿಯಲ್ಲಿ ನಿಗದಿಪಡಿಸಿದ್ದ ಉಚಿತ ಸೇವೆಗಳಿಗೆ ಎರಡು ತಿಂಗಳ ವಿಸ್ತರಣೆಯನ್ನು ಒದಗಿಸುತ್ತಿದೆ ಎಂದಿದೆ.

ಇದಲ್ಲದೆ ಲಾಕ್‌ಡೌನ್ ವೇಳೆಯಲ್ಲಿ ಅವಧಿ ಮುಗಿದ ಎಲ್ಲರಿಗೂ 'ಟಾಟಾ ಸುರಕ್ಷಾ' ವಾರ್ಷಿಕ ನಿರ್ವಹಣಾ ಒಪ್ಪಂದವನ್ನು ಸಹ ವಿಸ್ತರಿಸಿದೆ. ಎಎಂಸಿ ಸೇವೆಯನ್ನು ಪಡೆಯಲು ಗ್ರಾಹಕರಿಗೆ ಒಂದು ತಿಂಗಳ ವಿಸ್ತರಣೆಯನ್ನು ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.