ಮುಂಬೈ: ಕೊರೊನಾ ವೈರಸ್ನ ಲಾಕ್ಡೌನ್ ಸಂಕಷ್ಟ ಕಾಲದಲ್ಲಿ ವಲಸೆ ಕಾರ್ಮಿಕರಿಗೆ ನೆರವಾದ ನಟ ಸೋನು ಸೂದ್ ಅವರಿಗೆ ತೆಲಂಗಾಣದ ಸಿದ್ದಿಪೇಟೆಯಲ್ಲಿ ದೇವಾಲಯ ನಿರ್ಮಿಸಲಾಗಿದೆ. ಇದರ ಬೆನ್ನಲ್ಲೇ ರಸ್ತೆ ಅಪಘಾತದಲ್ಲಿ ಮೃತಪಟ್ಟ ಫುಡ್ ಎಲಿವರ್ ಬಾಯ್ ಕುಟುಂಬಸ್ಥರ ನೆರವಿಗೆ ಧಾವಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ 19 ವರ್ಷದ ಜೊಮ್ಯಾಟೊ ಆಹಾರ ಡೆಲಿವರಿ ಬಾಯ್ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಿದ್ದಾರೆ. ಡೆಲಿವರಿ ಬಾಯ್ ಸತೀಶ್ ಪರಸ್ನಾಥ್ ಗುಪ್ತಾ ಅವರು ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು ಬದುಕಿ ಉಳಿಯಲಿಲ್ಲ.
ರಿಯಲ್ ಹೀರೋ ಸೋನು ಸೂದ್ಗಾಗಿ ಗುಡಿ ಕಟ್ಟಿದ ತೆಲಂಗಾಣ ಜನತೆ...!
ಈ ಘಟನೆ ತಿಳಿದ ಬಳಿಕ ಮೃತ ಯುವಕನ ಕುಟುಂಬಕ್ಕೆ ಸಹಾಯ ಮಾಡಲು ಸೋನು ಸೂದ್ ಮುಂದಾಗಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಸಂಕಷ್ಟದಲ್ಲಿದ್ದ ಅನೇಕ ವಲಸೆ ಕಾರ್ಮಿಕರಿಗೆ ಮನೆಗೆ ಮರಳಲು ಸಹಾಯ ಮಾಡಿದ್ದರು. ಸೂದ್ ಮತ್ತು ಆತನ ತಂಡವು ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಲು ಟೋಲ್-ಫ್ರೀ ಸಂಖ್ಯೆ ಮತ್ತು ವಾಟ್ಸ್ಆ್ಯಪ್ ಸಹಾಯವಾಣಿ ತೆರೆದಿದೆ. ಬಸ್ಸು, ರೈಲು ಮತ್ತು ಚಾರ್ಟರ್ಡ್ ವಿಮಾನಗಳು ಮೂಲಕ ವಲಸಿಗರನ್ನು ಮನೆಗೆ ತಲುಪಿಸಲು ನೆರವಾದರು.