ನವದೆಹಲಿ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 3 ಲಕ್ಷ ಕೋಟಿ ರೂಪಾಯಿಯ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ಇಸಿಎಲ್‌ಜಿಎಸ್) ಅಡಿಯಲ್ಲಿ ಎಂಎಸ್‌ಎಂಇ ವಲಯದ 4 ಲಕ್ಷಕ್ಕೂ ಅಧಿಕ ಖಾತೆಗಳಿಗೆ ಸಾಲ ಮಂಜೂರು ಮಾಡಲಾಗಿದೆ.
ಅಂತಾರಾಷ್ಟ್ರೀಯ ಎಂಎಸ್‌ಎಂಇ ದಿನದಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಸಿ ಎಸ್ ಶೆಟ್ಟಿ ಅವರು ಎಂಎಸ್‌ಎಂಇ ಗ್ರಾಹಕ ಮತ್ತು ನೌಕರರ ಸಮ್ಮೇಳನ ಉದ್ದೇಶಿಸಿ ವಿಡಿಯೋದಲ್ಲಿ ಮಾತನಾಡಿ, ಈವರೆಗೂ ಮಂಜೂರಾದ ಸಾಲದ ಬಗ್ಗೆ ಮಾಹಿತಿ ನೀಡಿದರು. ಎಸ್‌ಎಂಇ ಉತ್ಪನ್ನಗಳನ್ನು ಗ್ರಾಹಕರಿಗೆ ಜಾಗೃತಿ ಹೆಚ್ಚಿಸಲು ಮತ್ತು ಅವರ ವ್ಯವಹಾರಕ್ಕೆ ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಲಾಗಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರಮಟ್ಟದಲ್ಲಿ ಈವರೆಗೆ 4 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ತುರ್ತು ಕ್ರೆಡಿಟ್ ಲೈನ್ ಸೌಲಭ್ಯದಡಿಯಲ್ಲಿ ಬ್ಯಾಂಕ್ ಸಾಲ ಮಂಜೂರು ಮಾಡಿದೆ. ಜೂನ್ 1ರಂದು ಪ್ರಾರಂಭಿಸಲಾದ ಈ ಯೋಜನೆಯಡಿ ಅರ್ಹ ಎಂಎಸ್‌ಎಂಇ ಗ್ರಾಹಕರಿಗೆ ಸುಮಾರು 20,000 ಕೋಟಿ ರೂ. ಸಾಲ ವಿತರಣೆ ಆಗಿದೆ ಎಂದು ಬ್ಯಾಂಕ್ನ ಹಿರಿಯ ಅಧಿಕಾರಿ ತಿಳಿಸಿದರು.
ಯೋಜನೆ ಘೋಷಿಸಿದ ದಿನಾಂಕದಿಂದ ಅಕ್ಟೋಬರ್ 31ರವರೆಗೆ ಅಥವಾ ಈ ಯೋಜನೆಯಡಿ 3 ಲಕ್ಷ ಕೋಟಿ ರೂ. ಮಂಜೂರು ಆಗುವವರೆಗೆ ಯಾವುದು ಶ್ಯೂರಿಟಿ ಇಲ್ಲದೆ ಜಿಇಸಿಎಲ್ ಸೌಲಭ್ಯದಡಿ ಸಾಲ ನೀಡಲಾಗುತ್ತದೆ.