ETV Bharat / business

ಹಬ್ಬಕ್ಕೆ SBI ಬಂಪರ್​ ಆಫರ್​.. ಕಾರ್ ಲೋನ್ ಗ್ರಾಹಕರಿಗೆ ಶೇ 100 ರಷ್ಟು ಪ್ರೋಸೆಸಿಂಗ್ ಶುಲ್ಕ ಮನ್ನಾ - ಹಬ್ಬಕ್ಕೆ SBI ಬಂಪರ್​ ಆಫರ್

YONO ಆ್ಯಪ್ ಮೂಲಕ ಕಾರು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಸಾಲದಾತನು 25 ಬೇಸಿಸ್ ಪಾಯಿಂಟ್‌ಗಳ (bps) ವಿಶೇಷ ಬಡ್ಡಿ ರಿಯಾಯಿತಿಯನ್ನು ಸಹ ನೀಡುತ್ತಿದೆ. YONO ಬಳಕೆದಾರರು ವರ್ಷಕ್ಕೆ ಶೇ 7.5 ರ ಬಡ್ಡಿ ದರದಲ್ಲಿ ಕಾರು ಸಾಲಗಳನ್ನು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಹಬ್ಬಕ್ಕೆ SBI ಬಂಪರ್​ ಆಫರ್
ಹಬ್ಬಕ್ಕೆ SBI ಬಂಪರ್​ ಆಫರ್
author img

By

Published : Aug 16, 2021, 2:03 PM IST

ಮುಂಬೈ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಬ್ಬದ ಸೀಸನ್​ಗೂ ಮುನ್ನ ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ಘೋಷಿಸಿದೆ.

ಬ್ಯಾಂಕ್ ಎಲ್ಲಾ ಚಾನಲ್‌ಗಳಲ್ಲಿ ತನ್ನ ಕಾರ್ ಲೋನ್ ಗ್ರಾಹಕರಿಗೆ ಶೇ 100 ರಷ್ಟು ಪ್ರೋಸೆಸಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಗ್ರಾಹಕರು ತಮ್ಮ ಕಾರ್ ಲೋನ್‌ಗಳಿಗಾಗಿ ಶೇ. 90 ರಷ್ಟು ಆನ್-ರೋಡ್ ಫೈನಾನ್ಸಿಂಗ್ ಸೌಲಭ್ಯವನ್ನು ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

YONO ಆ್ಯಪ್ ಮೂಲಕ ಕಾರು ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಗ್ರಾಹಕರಿಗೆ ಸಾಲದಾತನು 25 ಬೇಸಿಸ್ ಪಾಯಿಂಟ್‌ಗಳ (bps) ವಿಶೇಷ ಬಡ್ಡಿ ರಿಯಾಯಿತಿಯನ್ನು ಸಹ ನೀಡುತ್ತಿದೆ. YONO ಬಳಕೆದಾರರು ವರ್ಷಕ್ಕೆ ಶೇ 7.5 ರ ಬಡ್ಡಿ ದರದಲ್ಲಿ ಕಾರು ಸಾಲಗಳನ್ನು ಪಡೆಯಬಹುದು ಎಂದು ಹೇಳಿದೆ.

ಚಿನ್ನದ ಸಾಲ ಪಡೆಯುವ ಗ್ರಾಹಕರಿಗೆ ಬ್ಯಾಂಕ್ ಬಡ್ಡಿದರದಲ್ಲಿ 75 bps ಕಡಿತವನ್ನು ನೀಡುತ್ತಿದೆ. ಅವರು ಬ್ಯಾಂಕಿನ ಎಲ್ಲಾ ಚಾನಲ್‌ಗಳಿಂದ ಪ್ರತಿ ವರ್ಷಕ್ಕೆ ಶೇ 7.5 ರಷ್ಟು ಚಿನ್ನದ ಸಾಲವನ್ನು ಪಡೆಯಬಹುದು. ಇದಲ್ಲದೆ, ಇದು YONO ಆ್ಯಪ್ ಮೂಲಕ ಚಿನ್ನದ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಎಲ್ಲಾ ಗ್ರಾಹಕರಿಗೆ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದೆ.

ವೈಯಕ್ತಿಕ ಮತ್ತು ಪಿಂಚಣಿ ಸಾಲದ ಗ್ರಾಹಕರಿಗೆ, ಸಾಲದಾತನು ಎಲ್ಲಾ ಚಾನಲ್‌ಗಳಲ್ಲಿ ಪ್ರಕ್ರಿಯೆ ಶುಲ್ಕದಲ್ಲಿ 100 ಪ್ರತಿಶತ ಮನ್ನಾವನ್ನು ಘೋಷಿಸಿದ್ದಾರೆ. ಕೋವಿಡ್ ಯೋಧರಿಗೆ ಅಂದರೆ, ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ, 50 bps ವಿಶೇಷ ಬಡ್ಡಿ ರಿಯಾಯಿತಿ ಘೋಷಿಸಲಾಗಿದೆ. ಕಾರು ಮತ್ತು ಚಿನ್ನದ ಸಾಲದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಈ ಕೊಡುಗೆ ಶೀಘ್ರದಲ್ಲೇ ಲಭ್ಯವಿರುತ್ತದೆ ಎಂದು ಅದು ಹೇಳಿದೆ.

75 ವರ್ಷಗಳ ಸ್ವಾತಂತ್ರ್ಯದ ಅಂಗವಾಗಿ ತನ್ನ ಠೇವಣಿದಾರರಿಗೆ 'ಪ್ಲಾಟಿನಂ ಟರ್ಮ್ ಡಿಪಾಸಿಟ್ಸ್' ಕೊಡುಗೆಯನ್ನು ಪರಿಚಯಿಸುವುದಾಗಿ ಸಾಲದಾತರು ಹೇಳಿದ್ದಾರೆ. ಆಫರ್ ಅಡಿಯಲ್ಲಿ, ಗ್ರಾಹಕರು 75 ದಿನಗಳು, 75 ವಾರಗಳು ಮತ್ತು 75 ತಿಂಗಳ ಅವಧಿಯ ಠೇವಣಿಗಳ ಮೇಲೆ 15 bps ವರೆಗಿನ ಹೆಚ್ಚುವರಿ ಬಡ್ಡಿ ಪ್ರಯೋಜನಗಳನ್ನು ಆಗಸ್ಟ್ 15, 2021 ರಿಂದ ಸೆಪ್ಟೆಂಬರ್ 14, 2021 ರವರೆಗೆ ಪಡೆಯಬಹುದು.

"ಈ ಕೊಡುಗೆಗಳು ಗ್ರಾಹಕರಿಗೆ ತಮ್ಮ ಸಾಲದಲ್ಲಿ ಹೆಚ್ಚಿನ ಉಳಿತಾಯ ಮಾಡಲು ಸಹಾಯ ಮಾಡುತ್ತವೆ ಮತ್ತು ಅದೇ ಸಮಯದಲ್ಲಿ ಅವರ ಹಬ್ಬದ ಆಚರಣೆಗಳಿಗೆ ಮೌಲ್ಯವನ್ನು ನೀಡುತ್ತದೆ ಅಂತ ನಾವು ನಂಬುತ್ತೇವೆ" ಎಂದು ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ (ರಿಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್) ಸಿ.ಎಸ್. ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು, ಬ್ಯಾಂಕ್ ಆಗಸ್ಟ್ 31, 2021 ರವರೆಗೆ ಗೃಹ ಸಾಲಗಳ ಮೇಲಿನ ಪ್ರಕ್ರಿಯೆ ಶುಲ್ಕದ ಮೇಲೆ ಶೇ 100 ರಷ್ಟನ್ನು ಮನ್ನಾ ಮಾಡಿತ್ತು. ಅದರ ಗೃಹ ಸಾಲದ ಬಡ್ಡಿ ದರವು ಶೇ 6.70 ರಿಂದ ಆರಂಭವಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.