ETV Bharat / business

59 ನಿಮಿಷದಲ್ಲಿ ಸಾಲ.. 3 ವರ್ಷದಲ್ಲಿ 40 ಸಾವಿರ ಕೋಟಿ ವಿತರಣೆ: ಯಾರಿಗೆ ಸಿಕ್ಕಿದೆ ಈ ಲಾಭ? - ಅರ್ಜಿ ಸಲ್ಲಿಸಿದ ಕೇವಲ 59 ನಿಮಿಷಗಳಲ್ಲೇ ಸಾಲ

ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸೆಪ್ಟೆಂಬರ್ 2018ರಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧಿಕೃತ ಪೋರ್ಟಲ್ psbloansin59minutes.com ಅನ್ನು ಆರಂಭಿಸಿದ್ದರು.

PSB loans in 59 minutes
PSB loans in 59 minutes
author img

By

Published : Mar 16, 2022, 10:15 AM IST

ನವದೆಹಲಿ: ಸಣ್ಣ ಉದ್ಯಮಿಗಳು ಸಾಲಕ್ಕೆ ಅರ್ಜಿ ಸಲ್ಲಿಸಿದ ಒಂದು ಗಂಟೆಯೊಳಗೆ ಸರ್ಕಾರದ ಅಧಿಕೃತ ಪೋರ್ಟಲ್ ಮೂಲಕ ಸುಮಾರು 40,000 ಕೋಟಿ ರೂ. ಸಾಲವನ್ನು ವಿತರಣೆ ಮಾಡಲಾಗಿದೆಯಂತೆ. ಕಳೆದ ಮೂರು ವರ್ಷಗಳಲ್ಲಿ ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡುವ ಯೋಜನೆ ಅಡಿ ಈ ಸಾಲ ವಿತರಣೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್​ ಕರಾದ್​​​​​ ಹೇಳಿದ್ದಾರೆ.

ರಾಜ್ಯಸಭೆಗೆ ಈ ಮಾಹಿತಿ ನೀಡಿರುವ ಅವರು, ಈ ಮೂರು ವರ್ಷಗಳಲ್ಲಿ ಸಲ್ಲಿಕೆಯಾಗಿರುವ 2.01 ಲಕ್ಷ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿ 39,580 ಕೋಟಿ ರೂ.ಗಳ ಸಾಲ ನೀಡಲಾಗಿದೆ ಎಂದು ಸಚಿವರು ತಿಳಿಸಿದರು. ಚಿಲ್ಲರೆ ಸಾಲ ವಿಭಾಗದಲ್ಲಿ 1,689 ಕೋಟಿ ರೂಪಾಯಿ ಸಾಲ ನೀಡಲಾಗಿದ್ದು, 17,800 ಜನರಿಗೆ ಈ ಸಾಲವನ್ನು ಸರ್ಕಾರದ ಪೋರ್ಟಲ್ ಮೂಲಕ ವಿತರಿಸಲಾಗಿದೆ ಎಂದು ಕರಾದ್ ಮಾಹಿತಿ ನೀಡಿದ್ದಾರೆ.

ಅರ್ಜಿ ಸಲ್ಲಿಸಿದ ಕೇವಲ 59 ನಿಮಿಷಗಳಲ್ಲೇ ಸಾಲ: ಪ್ರಧಾನಿ ನರೇಂದ್ರ ಮೋದಿ ಅವರು ಸಣ್ಣ ಉದ್ಯಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸೆಪ್ಟೆಂಬರ್ 2018ರಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಅಧಿಕೃತ ಪೋರ್ಟಲ್ psbloansin59minutes.com ಅನ್ನು ಆರಂಭಿಸಿದ್ದರು. ಈ ಮೂಲಕ ಅರ್ಜಿ ಸಲ್ಲಿಸಿದ ಒಂದು ಗಂಟೆಗಳ ಒಳಗೆ ಸಾಲ ನೀಡುವ ಕೆಲಸ ಮಾಡಲಾಗುತ್ತಿದೆ.

ಪೋರ್ಟಲ್ ಮೂಲಕ ಪಡೆದ ಸಾಲದ ಅರ್ಜಿಗಳ ಮೇಲೆ ಎಷ್ಟು ಸಾಲ ನೀಡಬೇಕು ಎಂಬ ಬಗ್ಗೆ ಬ್ಯಾಂಕ್​ಗಳು ನಿರ್ಧರಿಸುತ್ತವೆ ಮತ್ತು ಮೇಲ್ವಿಚಾರಣೆ ಮಾಡುತ್ತವೆ. ಇದೇ ವೇಳೆ ಸಾಲದಾತ ಬ್ಯಾಂಕ್​ಗಳು ಅನುತ್ಪಾದಕ ಆಸ್ತಿಗಳು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿವೆ ಎಂದು ರಾಜ್ಯಸಭೆಗೆ ಸಚಿವರು ಮಾಹಿತಿ ನೀಡಿದರು.

psbloansin59minutes.com, paisabazaar.com, CredAvenue, Trade Receivables Discounting System (TReDS) ಪ್ಲಾಟ್‌ಫಾರ್ಮ್​ಗಳ ಮೂಲಕ ಗ್ರಾಹಕರನ್ನ ತಲುಪಲಾಗುತ್ತಿದ್ದು, ಇಲ್ಲಿಂದ ಬಂದ ಅರ್ಜಿಗಳನ್ನು ಸಂಸ್ಕರಣೆ ಮಾಡಿ ಅರ್ಹರಿಗೆ ಸಾಲ ನೀಡಲಾಗುತ್ತಿದೆ.

ತಮ್ಮ ವ್ಯಾಪಾರ ಅಗತ್ಯಗಳಿಗೆ ಅನುಗುಣವಾಗಿ ಚಿಲ್ಲರೆ ಸಾಲಗಾರರು ಮತ್ತು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ನಂತಹ ಹಲವಾರು ಗ್ರಾಹಕರನ್ನು ಈ ಯೋಜನೆ ಒಳಗೊಂಡಿರಲಿದ. ಆಯಾ ಬ್ಯಾಂಕ್‌ಗಳ ಆಂತರಿಕ ನಿಯಮಕ್ಕನುಸಾರವಾಗಿ ಸಣ್ಣ ಉದ್ಯಮಿಗಳಿಗೆ ಬ್ಯಾಂಕ್​ಗಳು ಸಾಲವನ್ನು ನೀಡುತ್ತವೆ ಎಂದು ಸಚಿವರು ಇದೇ ವೇಳೆ ಹೇಳಿದರು.

ರಾಜ್ಯವಾರು ವಿತರಣೆಯಾದ ಸಾಲ ಇಷ್ಟು: ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಸುಮಾರು 30,700 ಜನ ಸುಮಾರು 4433.98 ಕೋಟಿ ಸಾಲ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಸುಮಾರು 25800 ಮಂದಿ 5,220.59 ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ.

ಇದನ್ನು ಓದಿ:ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಹೊಸ ಗ್ರಾಹಕರಿಗೆ ಆರ್‌ಬಿಐ ನಿರ್ಬಂಧಕ್ಕೆ ಕಂಪನಿ ಸ್ಪಷ್ಟನೆ ಹೀಗಿದೆ...

ETV Bharat Logo

Copyright © 2025 Ushodaya Enterprises Pvt. Ltd., All Rights Reserved.