ETV Bharat / business

ಪಿಎಂಸಿ ಬ್ಯಾಂಕ್ ಪ್ರಕರಣ : ಇಡಿ ವಶಕ್ಕೆ ವಿವಾ ಗ್ರೂಪ್‌ನ ಇಬ್ಬರು ಉನ್ನತ ಅಧಿಕಾರಿಗಳು - Mehul Thakur to ED custody

ಪಿಎಂಸಿ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇಡಿ ವಿವಾ ಗ್ರೂಪ್‌ನ ನಿರ್ದೇಶಕರ ಕಚೇರಿ ಆವರಣದ ಐದು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ..

PMC bank
PMC bank
author img

By

Published : Jan 23, 2021, 5:28 PM IST

ಮುಂಬೈ : ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ) ಮತ್ತು ವಸತಿ ಅಭಿವೃದ್ಧಿ ಮತ್ತು ಮೂಲಸೌಕರ್ಯ ಲಿಮಿಟೆಡ್ ಕಂಪನಿಯ ಹಗರಣ ಸಂಬಂಧ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ವಿವಾ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಠಾಕೂರ್ ಮತ್ತು ನಿರ್ದೇಶಕ ಮದನ್ ಗೋಪಾಲ್ ಚತುರ್ವೇದಿ ಅವರನ್ನು ಬಂಧಿಸಿದ್ದಾರೆ.

ಪಿಎಂಸಿ ಬ್ಯಾಂಕ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಇಡಿ ವಿವಾ ಗ್ರೂಪ್‌ನ ನಿರ್ದೇಶಕರ ಕಚೇರಿ ಆವರಣದ ಐದು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಈ ಆವರಣದಲ್ಲಿ ವಿರಾರ್‌ನಲ್ಲಿರುವ ವಿವಾ ಗ್ರೂಪ್‌ನ ನೋಂದಾಯಿತ ಕಚೇರಿಗಳು ಹಾಗೂ ವಸತಿಗಳಲ್ಲಿ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ. ದಾಳಿ ವೇಳೆ 73 ಲಕ್ಷ ರೂ. ಮೌಲ್ಯದ ನಗದು, ಡಿಜಿಟಲ್ ಮತ್ತು ಇತರೆ ದಾಖಲಾತೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಹಲ್ವಾ ಹಂಚಿ ಬಜೆಟ್​ ಪ್ರತಿ ಮುದ್ರಣಕ್ಕೆ ಚಾಲನೆ ನೀಡಿದ ನಿರ್ಮಲಾ ಸೀತಾರಾಮನ್

ಹೌಸಿಂಗ್ ಡೆವಲಪ್‌ಮೆಂಟ್ ಇನ್​ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಚ್‌ಡಿಐಎಲ್), ರಾಕೇಶ್ ಕುಮಾರ್ ವಾಧವನ್, ಸಾರಂಗ್ ವಾಧವನ್, ವಾರಿಯಮ್ ಸಿಂಗ್ ಮತ್ತು ಪಿಎಂಸಿ ಬ್ಯಾಂಕ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಮತ್ತು ಇತರರ ವಿರುದ್ಧ ಇಡಿ ಮನಿ ಲಾಂಡರಿಂಗ್ ತಡೆ ಕಾಯ್ದೆ 2002 (ಪಿಎಂಎಲ್‌ಎ) ಅಡಿ ತನಿಖೆ ಪ್ರಾರಂಭಿಸಿತು. ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗವು 409, 420, 465, 466, 471 ಸೆಕ್ಷನ್‌ಗಳ ಅಡಿಯಲ್ಲಿ 120 ಬಿ ಐಪಿಸಿ ಅಡಿ ಎಫ್‌ಐಆರ್ ದಾಖಲಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.