ETV Bharat / business

ಭಾರತಕ್ಕೆ 510 ಕೋಟಿ ರೂ. ಕೋವಿಡ್​ ಔಷಧ ಉಚಿತವಾಗಿ ಕೊಡುತ್ತಿರುವ ಫಿಜರ್​ ಫಾರ್ಮಾ! - ಭಾರತಕ್ಕೆ ಫಿಜರ್​ ಕೋವಿಡ್ ಚಿಕಿತ್ಸಾ ಔಷಧಿ

510 ಕೋಟಿ ರೂ. ಮೌಲ್ಯದ ಔಷಧಗಳನ್ನು ದೇಶಾದ್ಯಂತದ ಪ್ರತಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಪ್ರತಿ ಕೋವಿಡ್​-19 ರೋಗಿಗಳಿಗೆ ಉಚಿತವಾಗಿ ನೀಡಲಿದ್ದೇವೆ. 70 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಈ ಔಷಧಗಳನ್ನು ತಕ್ಷಣವೇ ಲಭ್ಯವಾಗಲಿದೆ, ನಾವು ಸರ್ಕಾರ ಮತ್ತು ನಮ್ಮ ಎನ್‌ಜಿಒ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ತಲುಪಿಸುತ್ತೇವೆ ಎಂದು ಫಿಜರ್ ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.

Pfizer
Pfizer
author img

By

Published : May 3, 2021, 3:36 PM IST

ನವದೆಹಲಿ: ಗ್ಲೋಬಲ್ ಫಾರ್ಮಾ ದೈತ್ಯ ಫಿಜರ್ ಅಮೆರಿಕ, ಯುರೋಪ್ ಮತ್ತು ಏಷ್ಯಾದ ವಿತರಣಾ ಕೇಂದ್ರಗಳಿಂದ 70 ಮಿಲಿಯನ್ ಡಾಲರ್ (510 ಕೋಟಿ ರೂ.) ಮೌಲ್ಯದ ಔಷಧಗಳನ್ನು ಭಾರತದ ಕೋವಿಡ್​​ -19 ಚಿಕಿತ್ಸೆಗಳಿಗೆ ಕಳುಹಿಸಲಾಗುತ್ತಿದೆ ಎಂದು ಅಧ್ಯಕ್ಷ ಮತ್ತು ಸಿಇಒ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.

ಭಾರತದ ನಿರ್ಣಾಯಕ ಕೋವಿಡ್​-19 ಪರಿಸ್ಥಿತಿಯಿಂದ ನಾವು ತೀವ್ರ ಕಳವಳಗೊಂಡಿದ್ದೇವೆ. ನಮ್ಮ ಹೃದಯದ ಕಳವಳ ನಿಮಗೆ, ನಿಮ್ಮ ಪ್ರೀತಿಪಾತ್ರರಿಗೆ ಮತ್ತು ಭಾರತದ ಎಲ್ಲ ಜನರಿಗೆ ತಲುಪುತ್ತವೆ ಎಂದು ಫಿಜರ್ ಇಂಡಿಯಾ ತನ್ನ ಉದ್ಯೋಗಿಗಳಿಗೆ ಕಳುಹಿಸಿದ ಮೇಲ್​​ ಅನ್ನು ಬೌರ್ಲಾ ಅವರು ತಮ್ಮ ಲಿಂಕ್ಡ್.ಇನ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ರೋಗದ ವಿರುದ್ಧ ಭಾರತದ ಹೋರಾಟದಲ್ಲಿ ಪಾಲುದಾರರಾಗಲು ನಾವು ಬದ್ಧರಾಗಿದ್ದೇವೆ. ನಮ್ಮ ಕಂಪನಿಯ ಇತಿಹಾಸದಲ್ಲಿ ಅತಿದೊಡ್ಡ ಮಾನವೀಯ ಪರಿಹಾರ ಪ್ರಯತ್ನವನ್ನು ಸಜ್ಜುಗೊಳಿಸಲು ಶೀಘ್ರವಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ಈಗ ಅಮೆರಿಕ, ಯುರೋಪ್ ಮತ್ತು ಏಷ್ಯಾದ ವಿತರಣಾ ಕೇಂದ್ರಗಳಲ್ಲಿನ ಫಿಜರ್ ಸಹೋದ್ಯೋಗಿಗಳು ಫಿಜರ್ ಔಷಧಗಳನ್ನು ತ್ವರಿತವಾಗಿ ಸಾಗಿಸಲು ಕಷ್ಟಪಡುತ್ತಿದ್ದಾರೆ. ಭಾರತ ಸರ್ಕಾರ ತನ್ನ ಕೋವಿಡ್​ -19 ಚಿಕಿತ್ಸಾ ಪ್ರೋಟೋಕಾಲ್​ನ ಭಾಗವಾಗಿ ಗುರುತಿಸಿದೆ ಎಂದು ಹೇಳಿದರು.

ನಾವು ಈ ಔಷಧಗಳನ್ನು ದೇಶಾದ್ಯಂತದ ಪ್ರತಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಪ್ರತಿ ಕೋವಿಡ್​-19 ರೋಗಿಗಳಿಗೆ ಉಚಿತವಾಗಿ ನೀಡಲಿದ್ದೇವೆ. 70 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಮೌಲ್ಯದ ಈ ಔಷಧಗಳನ್ನು ತಕ್ಷಣವೇ ಲಭ್ಯವಾಗಲಿದೆ, ನಾವು ಸರ್ಕಾರ ಮತ್ತು ನಮ್ಮ ಎನ್‌ಜಿಒ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೇವೆ. ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ತಲುಪಿಸುತ್ತೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.