ETV Bharat / business

ಕೋವಿಡ್ ಪೀಡಿತ ಉದ್ಯೋಗಿಯ ನಿರ್ಲಕ್ಷ್ಯಕ್ಕೆ 7 ಅಮಾಯಕರು ಬಲಿ, 300ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್​!

ಅಮೆರಿಕದ ದಕ್ಷಿಣ ಒರೆಗಾನ್​ನಲ್ಲಿ ಕೋವಿಡ್-19ನ ಹೊಸ ರೂಪಾಂತರವಾದ ಸೂಪರ್ ಸ್ಪ್ರೆಡರ್​ ಹಬ್ಬಿಲ್ಲ. ಅನಾರೋಗ್ಯದಿಂದ ಕೆಲಸಕ್ಕೆ ಹೋದ ಓರ್ವ ವ್ಯಕ್ತಿಯ 'ಸೂಪರ್ ಸ್ಪ್ರೆಡರ್' ಚಟುವಟಿಕೆಗಳಿಂದಾಗಿ ಈ ಭಾಗದಲ್ಲಿ ಪೀಡಿತರ ಸಂಖ್ಯೆ ಹೆಚ್ಚಳವಾಗಿದೆ. ಆತನ ಸಂಪರ್ಕಕ್ಕೆ ಬಂದಿದ್ದ ಏಳು ಜನರು ಮೃತಪಟ್ಟಿದ್ದಾರೆ. 300ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

Covid
ಕೋವಿಡ್
author img

By

Published : Dec 24, 2020, 5:32 PM IST

ನ್ಯೂಯಾರ್ಕ್​: ದಕ್ಷಿಣ ಒರೆಗಾನ್ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹಬ್ಬುತ್ತಿದ್ದು, ಓರ್ವ ಸೋಂಕಿತ ಉದ್ಯೋಗಿಯ ನಿರ್ಲಕ್ಷ್ಯದಿಂದಾಗಿ ಏಳು ಜನರು ಬಲಿಯಾಗಿ ಆತನ ಸಂಪರ್ಕಕ್ಕೆ ಬಂದಿದ್ದ ನೂರಾರು ಜನರು ಕ್ವಾರಂಟೈನ್​ಗೆ ಒಳಗಾಗಿದ್ದಾರೆ.

ಅಮೆರಿಕ ದಕ್ಷಿಣ ಒರೆಗಾನ್​ನಲ್ಲಿ ಕೋವಿಡ್ -19ನ ಹೊಸ ರೂಪಾಂತರವಾದ ಸೂಪರ್ ಸ್ಪ್ರೆಡರ್​ ಹಬ್ಬಿಲ್ಲ. ಅನಾರೋಗ್ಯದಿಂದ ಕೆಲಸಕ್ಕೆ ಹೋದ ಓರ್ವ ವ್ಯಕ್ತಿಯ ಸೂಪರ್ ಸ್ಪ್ರೆಡರ್ ಚಟುವಟಿಕೆಗಳಿಂದಾಗಿ ಈ ಭಾಗದಲ್ಲಿ ಪೀಡಿತರ ಸಂಖ್ಯೆ ಹೆಚ್ಚಳವಾಗಿದೆ. ಆತನ ಸಂಪರ್ಕಕ್ಕೆ ಬಂದಿದ್ದ ಏಳು ಜನರು ಮೃತಪಟ್ಟಿದ್ದಾರೆ. 300ಕ್ಕೂ ಅಧಿಕ ಮಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ ಎಂದು ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ರೋಗ ಲಕ್ಷಣಗಳಿಂದ ಬಳಲುತ್ತಿರುವಾಗ ಒಬ್ಬ ವ್ಯಕ್ತಿಯು ಉದ್ದೇಶಪೂರ್ವಕವಾಗಿ ಕೆಲಸಕ್ಕೆ ಹೋಗಿದ್ದಾನೆ. ಕೆಲ ದಿನಗಳ ಬಳಿಕ ಕೊರೊನಾ ಟೆಸ್ಟ್​ ಮಾಡಿಸಿದಾಗ ಪಾಸಿಟಿವ್ ಇರುವುದಾಗಿ ದೃಢಪಟ್ಟಿತ್ತು ಎಂದು ಡೌಗ್ಲಾಸ್ ಕೌಂಟಿ ಅಧಿಕಾರಿಗಳು ಕಳೆದ ವಾರ ಹೇಳಿದ್ದಾರೆ ಎಂಬುದು ವರದಿ ಆಗಿದೆ.

ಓದಿ: ವಂದೇ ಭಾರತ್ ರೈಲುಗಳ ಯೋಜನೆಗೆ ಚೀನಾದ ಕಂಪನಿ ಅನರ್ಹ: ಭಾರತೀಯ ರೈಲ್ವೆ ಘೋಷಣೆ

ಕೌಂಟಿಯಲ್ಲಿ ಇತ್ತೀಚಿಗೆ ಎರಡು ಪ್ರಕರಣಗಳ ಮೂಲದಿಂದಾಗಿ ಸೋಂಕಿತರ ಪ್ರಮಾಣ ಹೆಚ್ಚಳವಾಗಿದ್ದಾಗಿ ಒರೆಗಾನಿಯನ್ ಮಂಗಳವಾರ ವರದಿ ಮಾಡಿತ್ತು. ಓರ್ವ ವ್ಯಕ್ತಿಯ ಮೂಲ ಪತ್ತೆಯಾಗಿದ್ದು, ಆತನಿಂದಲೇ ನೂರಾರು ಕೌಂಟಿ ನಿವಾಸಿಗಳಿಗೆ ಸೋಂಕು ತಗಲಿದೆ. ಅವರೆಲ್ಲರನ್ನೂ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಏಳು ಜನರ ಸಾವಿಗೆ ಕಾರಣವಾಗಿ, 300ಕ್ಕೂ ಹೆಚ್ಚು ಜನರು ಮತ್ತು ಕುಟುಂಬಗಳನ್ನು ಕ್ವಾರಂಟೈನ್​ನಲ್ಲಿ ಇರುವಂತೆ ಮಾಡಿದ ವ್ಯಕ್ತಿ ಹಾಗೂ ಕಂಪನಿಯ ಹೆಸರನ್ನು ಗೌಪ್ಯವಾಗಿ ಇಡಲಾಗಿದೆ.

ಈ ಜನರು ಈಗ ಅನುಭವಿಸುತ್ತಿರುವ ಪಶ್ಚಾತ್ತಾಪವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.