ETV Bharat / business

ಕೊರೊನಾ ವೈರಸ್​ ಜತೆ ಸಹಬಾಳ್ವೆ ನಡೆಸಲು ಸಿದ್ಧರಾಗಿ: ನಂದನ್ ನಿಲೇಕಣಿ - ಇನ್ಫೋಸ್​ ಅಧ್ಯಕ್ಷ ನಂದನ್ ನಿಲೇಕಣಿ

ಚಂಡಮಾರುತದ ಪ್ರಭಾವವನ್ನು ಸರಿಪಡಿಸಬಹುದು, ಸುನಾಮಿಯಿಂದಾದ ಹಾನಿಯನ್ನು ಸರಿಪಡಿಸಬಹುದು. ಆದರೆ, ಕೊರೊನಾ ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂದು ನಮಗೆ ತಿಳಿದಿಲ್ಲ. ನಾವು ಇದರೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧರಾಗಿರಬೇಕು, ಇದು ಕೆಟ್ಟ ಕನಸಲ್ಲ, ಇದರಿಂದ ನಾವು ಕೆಲವೇ ದಿನಗಳಲ್ಲಿ ಎಚ್ಚರಗೊಳ್ಳುತ್ತೇವೆ ಎಂದು ನಿಲೇಕಣಿ ಹೇಳಿದರು.

Online classes
ಆನ್​ಲೈನ್ ತರಗತಿ
author img

By

Published : Jun 7, 2020, 1:01 AM IST

ನವದೆಹಲಿ: ಕೋವಿಡ್​-19 ಸಾಂಕ್ರಾಮಿಕ ರೋಗದಿಂದ ಶಾಲೆಗಳು ಮುಚ್ಚಿದ್ದು, ಆನ್‌ಲೈನ್‌ ಬೋಧನೆ ಮತ್ತು ಕಲಿಕೆಯ ಚಟುವಟಿಕೆಗಳ ತ್ವರಿತ ಬದಲಾವಣೆಯು ಕೇವಲ ಅಲ್ಪಾವಧಿಯ ಪ್ರತಿಕ್ರಿಯೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ ಎಂದು ಹೇಳಿದರು.

ನಾವು ಮೂಲಭೂತವಾಗಿ ಶಾಲೆಗಳನ್ನು ಸ್ಥಿತಿಸ್ಥಾಪಕ ವ್ಯವಸ್ಥೆಯಾಗಿ ಮರುರೂಪಿಸಬೇಕಾಗಿದೆ. ನಿರಂತರ ಪ್ರಕ್ಷುಬ್ಧತೆಯ ಅಡಿಯಲ್ಲಿ ಕಾರ್ಯನಿರ್ವಹಿಸಬಲ್ಲದಾಗಿದೆ ಎಂದರು.

ತರಗತಿ ಏಕೈಕ ಸ್ಥಳ ಆಗಿರಬಾರದು. ಶಿಕ್ಷಕ ಓರ್ವ ತರಬೇತುದಾರ ಮತ್ತು ಪಠ್ಯ ಪುಸ್ತಕವೇ ಏಕೈಕ ಮಾಧ್ಯಮವಲ್ಲ. ಇಂದಿನ ಸ್ಥಿತಿಸ್ಥಾಪಕವು ಶಾಲಾ ವ್ಯವಸ್ಥೆಗೆ ಮಾರ್ಗಸೂಚಿ ಹಾಕಬೇಕಿದೆ ಎಂದು 'ಕೋವಿಡ್​ 19 ಸವಾಲು ಮೀರಿದ ಶಾಲೆಗಳ ಭವಿಷ್ಯ' ಕುರಿತು ಅಶೋಕ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.

ಆನ್‌ಲೈನ್‌ ಮೂಲಕ ತ್ವರಿತ ಬದಲಾವಣೆಯಾದ ಜೂಮ್ ತರಗತಿಗಳು, ಸ್ಮಾರ್ಟ್ ಫೋನ್‌ಗಳ ಬೋಧನೆಗಳು ಅಲ್ಪಾವಧಿಯ ಪ್ರತಿಕ್ರಿಯೆಯ ಭಾಗವಾಗಿವೆ. ಇವು ಇಂದಿಗೆ ಅಗತ್ಯವಾಗಿತ್ತು. ಆದರೆ, ಇಷ್ಟಕ್ಕೆ ಸಾಕಾಗುವುದಿಲ್ಲ. ನಾವು ಶಾಲೆಗಳನ್ನು ಮೂಲಭೂತವಾಗಿ ಮರುರೂಪಿಸಬೇಕಾಗಿದೆ. ಮುಂದಿನ ಕೆಲವು ವರ್ಷಗಳವರೆಗೆ ಪ್ರಕ್ಷುಬ್ಧತೆಯನ್ನು ನಿಭಾಯಿಸಲಿದ್ದೇವೆ ಎಂದು ನಿಲೇಕಣಿ ಹೇಳಿದರು.

ಈ ಪ್ರಮಾಣದ ಬಿಕ್ಕಟ್ಟನ್ನು ನಾವು ಊಹಿಸಿರಲಿಲ್ಲ. ಸಾಂಕ್ರಾಮಿಕ ರೋಗವನ್ನು ಎದುರಿಸಲು ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳನ್ನು ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ನಿರ್ವಹಿಸಲಾಗುತ್ತಿದೆ. ಇದನ್ನು ಸುನಾಮಿ ಸಂಭವಿಸಿದ ಒಂದು ವರ್ಷದ ಬಳಿಕ ಜಾರಿಗೆ ತರಲಾಯಿತು ಎಂದರು.

ಒಂದು ನಿರ್ದಿಷ್ಟ ಸಮಯದ ಚೌಕಟ್ಟನ್ನು ಹೊಂದಿರುವ ವಿಪತ್ತುಗಳಂತಲ್ಲದೆ, ಚಂಡಮಾರುತದ ಪ್ರಭಾವವನ್ನು ಸರಿಪಡಿಸಬಹುದು. ಸುನಾಮಿ ಪರಿಣಾಮ ಸರಿಪಡಿಸಬಹುದು. ಆದರೆ, ಇದು ಎಷ್ಟು ಸಮಯದವರೆಗೆ ಮುಂದುವರಿಯುತ್ತದೆ ಎಂದು ನಮಗೆ ತಿಳಿದಿಲ್ಲ. ನಾವು ಇದರೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧರಾಗಿರಬೇಕು. ಇದು ಕೆಟ್ಟ ಕನಸಲ್ಲ. ಇದರಿಂದ ನಾವು ಕೆಲವೇ ದಿನಗಳಲ್ಲಿ ಎಚ್ಚರಗೊಳ್ಳುತ್ತೇವೆ ಎಂದು ನಿಲೇಕಣಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.