ನವದೆಹಲಿ: ಆಯ್ದ ವಲಯಗಳಲ್ಲಿ ಮೇ 4ರಿಂದ ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಓಲಾ ಮತ್ತು ಉಬರ್, ಹಸಿರು ಹಾಗೂ ಕಿತ್ತಳೆ ವಲಯಗಳಲ್ಲಿ ತಮ್ಮ ಪ್ರಯಾಣಿಕ ಸೇವಾ ಪುನರಾರಂಭಿಸುವುದಾಗಿ ಪ್ರಕಟಿಸಿವೆ.
ಹಸಿರು ವಲಯಗಳಾದ ದಮನ್, ಕೊಚ್ಚಿ, ಗುವಾಹಟಿ ಹಾಗೂ ಕಿತ್ತಳೆ ವಲಯಗಳಾದ ಅಮೃತಸರ, ಉದಯಪುರ, ಮೊಹಾಲಿ ಮತ್ತು ಗುರುಗ್ರಾಮ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಪ್ರಯಾಣಿಕ ಸೇವೆ ಮರು ಆರಂಭವಾಗುತ್ತಿದೆ.
ಮೇ 4ರ ಸೋಮವಾರದಿಂದ ಈ ವಲಯಗಳಲ್ಲಿನ ನಿವಾಸಿಗಳಿಗೆ ಸೇವೆ ಸಲ್ಲಿಸಲು ಉಬರ್ ಸಿದ್ಧವಾಗಿದೆ. ಹೆಚ್ಚಿನ ಮಾಹಿತಿ ಮತ್ತು ನಿರ್ದಿಷ್ಟ ನಗರಗಳ ಸ್ಥಿತಿಯನ್ನು ರೈಡರ್‌ಗಳಿಗೆ ಆ್ಯಪ್ ಮೂಲಕ ನಿರಂತರವಾಗಿ ತಿಳಿಸಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ವಾಹನದಲ್ಲಿ ಇಬ್ಬರು ಪ್ರಯಾಣಿಕರಿಗಿಂತ ಹೆಚ್ಚಿನವರನ್ನು ಕಂಪನಿ ಶಿಫಾರಸು ಮಾಡುತ್ತದೆ. ಯಾರೂ ಚಾಲಕನ ಪಕ್ಕದಲ್ಲಿ ಕುಳಿತುಕೊಳ್ಳಬಾರದು. ಕೆಂಪು ವಲಯಗಳಲ್ಲಿ ಅತ್ಯವಶ್ಯಕ ವಸ್ತುಗಳು ಮತ್ತು ಮೆಡಿಕಲ್ ಸೇವೆಗಳನ್ನು ನೀಡುತ್ತಲೇ ಇರುತ್ತದೆ. ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ಸೇವೆಗಳನ್ನು ಪುನರಾರಂಭಿಸುತ್ತಿದೆ. ಈ ನಗರಗಳಲ್ಲಿ ಹಂತಹಂತವಾಗಿ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದೆ.