ನವದೆಹಲಿ: ಈ ವರ್ಷದ ಜುಲೈನಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಭಾರತೀಯ ಮಾರುಕಟ್ಟೆಗೆ ತರುವುದಾಗಿ ಓಲಾ ಎಲೆಕ್ಟ್ರಿಕ್ ತಿಳಿಸಿದ್ದು, 400 ನಗರಗಳಲ್ಲಿ ಒಂದು ಲಕ್ಷ ಚಾರ್ಜಿಂಗ್ ಪಾಯಿಂಟ್ ತೆರೆದು 'ಹೈಪರ್‌ಚಾರ್ಜರ್ ನೆಟ್‌ವರ್ಕ್' ಸ್ಥಾಪಿಸುವುದಾಗಿ ಘೋಷಿಸಿದೆ.
ಕಳೆದ ವರ್ಷ ಓಲಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸಲು 2,400 ಕೋಟಿ ರೂ. ಹೂಡಿಕೆ ಮಾಡಿ, ಸುಮಾರು 10,000 ಉದ್ಯೋಗಗಳನ್ನು ಸೃಷ್ಟಿಸಲಿದೆ. ಇದು ವಿಶ್ವದ ಅತಿದೊಡ್ಡ ಸ್ಕೂಟರ್ ಉತ್ಪಾದನಾ ಸೌಲಭ್ಯವಾಗಲಿದ್ದು, ಆರಂಭದಲ್ಲಿ ವಾರ್ಷಿಕ 20 ಲಕ್ಷ ಯುನಿಟ್ ಹೊಂದಿರಲಿದೆ ಎಂದಿತ್ತು.
ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲು ಸದೃಢವಾದ ಚಾರ್ಜಿಂಗ್ ನೆಟ್‌ವರ್ಕ್ ಅಗತ್ಯವಿದೆ. ಇಂದು ನಮ್ಮ ದೇಶದ ಪ್ರಮುಖ ಮೂಲಸೌಕರ್ಯದ ಅಂತರವೆಂದರೆ ಚಾರ್ಜರ್ ನೆಟ್‌ವರ್ಕ್. ನಮ್ಮ ಹೈಪರ್‌ಚಾರ್ಜರ್ ನೆಟ್‌ವರ್ಕ್ ದ್ವಿಚಕ್ರ ವಾಹನಗಳಿಗೆ ಅತಿದೊಡ್ಡ ವ್ಯಾಪ್ತಿಯಲ್ಲಿ ವೇಗದ ಚಾರ್ಜಿಂಗ್ ನೆಟ್‌ವರ್ಕ್ ಒದಗಿಸಲಿದೆ. 400 ನಗರ ಮತ್ತು ಪಟ್ಟಣಗಳು ಈ ನೆಟ್‌ವರ್ಕ್‌ನ ಭಾಗವಾಗಿ 1,00,000ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸುತ್ತೇವೆ ಎಂದು ಓಲಾ ಮುಖ್ಯಸ್ಥ ಮತ್ತು ಸಿಇಒ ಭವಿಷ್ ಅಗರ್ವಾಲ್ ಹೇಳಿದ್ದಾರೆ.
ಓಲಾ ಹೈಪರ್‌ಚಾರ್ಜರ್ ನೆಟ್‌ವರ್ಕ್ ಮೊದಲ ವರ್ಷದಲ್ಲಿ, 100 ನಗರಗಳಲ್ಲಿ 5,000 ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುತ್ತಿದೆ. 75 ಕಿಲೋಮೀಟರ್ ವ್ಯಾಪ್ತಿಗೆ 18 ನಿಮಿಷಗಳಲ್ಲಿ ನೆಟ್‌ವರ್ಕ್ ಶೇ 50ರಷ್ಟು ಓಲಾ ಸ್ಕೂಟರ್ ಬ್ಯಾಟರಿ ಚಾರ್ಜ್ ಮಾಡುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‌ನ ಚಾಲನೆಯು ಓಲಾ ಚಲನಶೀಲತೆ ಹೆಚ್ಚು ಸುಸ್ಥಿರ ಮತ್ತು ಭವಿಷ್ಯದ ಜಾಗತಿಕ ದೃಷ್ಟಿಗೆ ಅನುಗುಣವಾಗಿರುತ್ತದೆ ಎಂದಿದ್ದಾರೆ. ಇ-ಸ್ಕೂಟರ್‌ನ ಬೆಲೆಯ ವಿವರಗಳನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ.
ಈ ಚಾರ್ಜಿಂಗ್ ಕೇಂದ್ರಗಳನ್ನು ಸ್ಟ್ಯಾಂಡ್ ಅಲೋನ್ ಟವರ್‌ಗಳಂತೆ ತಲೆ ಎತ್ತಲಿವೆ. ಓಲಾ ಎಲೆಕ್ಟ್ರಿಕ್ ಗ್ರಾಹಕರಿಗೆ ಹತ್ತಿರವಾಗಲು ಚಾರ್ಜಿಂಗ್ ಪಾಯಿಂಟ್‌ಗಳು ಮಾಲ್‌ಗಳು, ಐಟಿ ಪಾರ್ಕ್‌ಗಳು, ಕಚೇರಿ ಸಂಕೀರ್ಣಗಳು ಮತ್ತು ಕೆಫೆಗಳಂತಹ ಜನಪ್ರಿಯ ಸ್ಥಳಗಳಲ್ಲಿ ಸ್ಥಾಪನೆ ಆಗಲಿವೆ.