ETV Bharat / business

ಹಸ್ತಾಂತರದಿಂದ ಪಾರಾಗಲು ಇಂಗ್ಲೆಂಡ್​ ಹೈಕೋರ್ಟ್​​ನಲ್ಲಿ ನೀರವ್​ ಮೋದಿ ಮೇಲ್ಮನವಿ - ನೀರವ್ ಮೋದಿ ಭಾರತಕ್ಕೆ ಹಸ್ತಾಂತರ

ಪರಾರಿಯಾದ ವಜ್ರ ವ್ಯಾಪಾರಿಗಳ ಮನವಿಯು ವೆಸ್ಟ್​ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಫೆಬ್ರವರಿ 25ರ ಹಸ್ತಾಂತರ ಆದೇಶ ಮತ್ತು ಗೃಹ ಕಾರ್ಯದರ್ಶಿ ಪಟೇಲ್ ಅವರು ನೀಡಿದ ಅನುಮೋದನೆ ಆಕ್ಷೇಪಿಸಿ ಮೇಲ್ಮನವಿ ಸಲ್ಲಿಸಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ (ಪಿಎನ್​ಬಿ) ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ಮನಗಂಡಿದ್ದು, ಎರಡು ತಿಂಗಳ ನಂತರ ಅದನ್ನು ಅನುಮೋದಿಸಿತು..

Nirav Modi
Nirav Modi
author img

By

Published : May 1, 2021, 2:51 PM IST

ಲಂಡನ್ ​: ವಿದೇಶಕ್ಕೆ ಪರಾರಿಯಾದ ವಜ್ರೋದ್ಯಮಿ ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವುದರ ವಿರುದ್ಧ ಯುಕೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.

ಕೆಳ ನ್ಯಾಯಾಲಯ ನೀಡಿದ ಹಸ್ತಾಂತರ ಆದೇಶದ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ನೀರವ್​ ತಮ್ಮ ಅರ್ಜಿಯಲ್ಲಿ ಕೋರಿದ್ದಾರೆ. ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಹಸ್ತಾಂತರ ಆದೇಶಕ್ಕೂ ಅನುಮತಿ ನೀಡಿದ್ದಾರೆ.

ನೀರವ್ ಮೋದಿ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಆದೇಶಿಸಿ ಇಂಗ್ಲೆಂಡ್​ ಸರ್ಕಾರ ಏಪ್ರಿಲ್ 15ರಂದು ಸಹಿ ಹಾಕಿದೆ. ಪರಾರಿಯಾದ ವಜ್ರ ವ್ಯಾಪಾರಿಗಳ ಮನವಿಯು ವೆಸ್ಟ್​ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಫೆಬ್ರವರಿ 25ರ ಹಸ್ತಾಂತರ ಆದೇಶ ಮತ್ತು ಗೃಹ ಕಾರ್ಯದರ್ಶಿ ಪಟೇಲ್ ಅವರು ನೀಡಿದ ಅನುಮೋದನೆ ಆಕ್ಷೇಪಿಸಿ ಮೇಲ್ಮನವಿ ಸಲ್ಲಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ (ಪಿಎನ್​ಬಿ) ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ನ್ಯಾಯಾಲಯ ಮನಗಂಡಿದ್ದು, ಎರಡು ತಿಂಗಳ ನಂತರ ಅದನ್ನು ಅನುಮೋದಿಸಿತು.

ಇದನ್ನೂ ಓದಿ: ಟೊಯೋಟಾ ಕಿರ್ಲೋಸ್ಕರ್‌ ಕಂಪನಿ ಜತೆ ಡಿಸಿಎಂ ಅಶ್ವತ್ಥ ನಾರಾಯಣ ಸಭೆ.. ವೈದ್ಯಕೀಯ ಸೌಲಭ್ಯ ಕುರಿತು ಚರ್ಚೆ

ಫೆಬ್ರವರಿ 25ರಂದು ನೀರವ್ ಮೋದಿ ಅವರ ಹಸ್ತಾಂತರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಧೀಶರು ತೀರ್ಪು ನೀಡಿದರು. ಹಸ್ತಾಂತರ ಆದೇಶಕ್ಕೆ ಏಪ್ರಿಲ್ 15ರಂದು ಸಹಿ ಹಾಕಲಾಗಿದೆ ಎಂದು ಯುಕೆ ಗೃಹ ಕಚೇರಿ ವಕ್ತಾರರು ಎಎನ್‌ಐಗೆ ತಿಳಿಸಿದ್ದಾರೆ.

ನೀರವ್ ಮೋದಿ ಅವರು 2018ರ ಜನವರಿ 1ರಂದು ಭಾರತದಿಂದ ಪರಾರಿಯಾಗಿದ್ದರು. ಆತನ ವಿರುದ್ಧ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಿದೆ. 2018ರ ಜೂನ್​ನಲ್ಲಿ ಇಂಟರ್​ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ.

ಮಾರ್ಚ್ 2019ರಲ್ಲಿ ಲಂಡನ್‌ನಲ್ಲಿ ಯುಕೆ ಪೊಲೀಸರು ಆತನನ್ನು ಬಂಧಿಸಿದ್ದರು ಮತ್ತು 11,000 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಪಿಎನ್‌ಬಿಗೆ ಹಣ ವರ್ಗಾವಣೆ ಮತ್ತು ವಂಚಿಸಿದ ಆರೋಪ ಹೊರಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.