ETV Bharat / business

ಮತ್ತೆ ಏಷ್ಯಾದ ಕುಬೇರ: ಫೇಸ್​ಬುಕ್ ಕೈಹಿಡಿದು ಚೀನಾದ ಜಾಕ್​ಮಾ ಹಿಂದಿಕ್ಕಿದ  ಅಂಬಾನಿ

ಫೇಸ್‌ಬುಕ್, ರಿಲಯನ್ಸ್ ಜಿಯೋ ಸಂಸ್ಥೆಯ ಶೇ 9.99ರಷ್ಟು ಷೇರು ಖರೀದಿಸಿ ಸುಮಾರು 43,574 ಕೋಟಿ ವಿನಿಯೋಗಿಸಿದೆ. ಈ ಬಂಡವಾಳ ಹೂಡಿಕೆ ಒಪ್ಪಂದದ ಬಳಿಕ ಮುಖೇಶ್ ಅಂಬಾನಿ ಆಸ್ತಿ ಮೌಲ್ಯ 49.2 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಮುಖೇಶ್ ಅಂಬಾನಿ ಇದೀಗ ಚೀನಾದ ಜಾಕ್​ಮಾ ಅವರಿಗಿಂತ ಸುಮಾರು 3.2 ಬಿಲಿಯನ್ ಡಾಲರ್ ಅಧಿಕ ಸಂಪತ್ತಿನ ಮೂಲಕ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದಾರೆ.

author img

By

Published : Apr 23, 2020, 4:09 PM IST

RIL CEO Mukesh Ambani
ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ

ಮುಂಬೈ: ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜೂಕರ್‌ಬರ್ಗ್‌ ಜೊತೆ ಒಪ್ಪಂದ ಮಾಡಿಕೊಂಡ ನಂತರ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ಉದ್ಯಮಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

ಫೇಸ್‌ಬುಕ್, ರಿಲಯನ್ಸ್ ಜಿಯೋ ಸಂಸ್ಥೆಯ ಶೇ 9.99ರಷ್ಟು ಷೇರು ಖರೀದಿಸಿ ಸುಮಾರು 43,574 ಕೋಟಿ ವಿನಿಯೋಗಿಸಿದೆ. ಈ ಬಂಡವಾಳ ಹೂಡಿಕೆ ಒಪ್ಪಂದದ ಬಳಿಕ ಮುಖೇಶ್ ಅಂಬಾನಿ ಆಸ್ತಿ ಮೌಲ್ಯ 49.2 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಮುಖೇಶ್ ಅಂಬಾನಿ ಇದೀಗ ಚೀನಾದ ಜಾಕ್​ಮಾ ಅವರಿಗಿಂತ ಸುಮಾರು 3.2 ಬಿಲಿಯನ್ ಡಾಲರ್ ಅಧಿಕ ಸಂಪತ್ತಿನ ಮೂಲಕ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್​ ಶೇ 10ರಷ್ಟು ಷೇರು ಖರೀದಿಗೆ ಡಿಜಿಟಲ್​ ಪ್ಲಾಟ್​ಫಾರ್ಮ್​ ದೈತ್ಯ ಫೇಸ್​ಬುಕ್​ 5.7 ಶತಕೋಟಿ ಡಾಲರ್​ ವಿನಿಯೋಗಿಸಿದೆ. ಸಾಮಾಜಿಕ ಜಾಲಾತಣ ಸಂಸ್ಥೆ, ತನ್ನ ಜನಪ್ರಿಯ ವಾಟ್ಸ್​ಆ್ಯಪ್​ ಮೆಸೆಂಜರ್ ಮೂಲಕ ಭಾರತದ ಸಣ್ಣ ದಿನಸಿ ಮಳಿಗೆಗಳಿಗೆ ಡಿಜಿಟಲ್ ಪಾವತಿ ಸೇವೆ ನೀಡಿ ತನ್ನ ಹತೋಟಿಗೆ ತಂದುಕೊಳ್ಳಲು ಹವಣಿಸುತ್ತಿದೆ.

ಈ ಒಪ್ಪಂದದಿಂದ ರಿಲಯನ್ಸ್ ಜಿಯೋಗೆ ಮತ್ತೊಂದು ರೀತಿಯಲ್ಲಿ ಅನುಕೂಲವಿದೆ. ಟಿಲಿಕಾಂ ಮಾರುಕಟ್ಟೆಯಲ್ಲಿ ಅಗ್ರ ಸ್ಥಾನ ಗಳಿಸಲು ಹಾಗೂ ಸಾಲದ ಹೊರೆ ತಗ್ಗಿಸಲು ಇದು ನೆರವಿಗೆ ಬರಲಿದೆ. ಜೊತೆಗೆ ಹೊಸ ಆನ್‌ಲೈನ್ ಕಿರಾಣಿ ಮಾರುಕಟ್ಟೆಯ 'ಜಿಯೋಮಾರ್ಟ್' ವೃದ್ಧಿಗೂ ಅನುಕೂಲವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.