ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರಿ ₹ 11,262 ಕೋಟಿ ರೂ. ಆದಾಯ ಗಳಿಸಿದೆ.
ರಿಲಯನ್ಸ್ನ ನಿವ್ವಳ ಲಾಭಾಂಶದಲ್ಲಿ ಶೇ. 18.3ರಷ್ಟು ಏರಿಕೆ ಕಂಡುಬಂದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ. 18.3ರಷ್ಟು ಬೆಳವಣಿಗೆ ಕಂಡಿದ್ದು, ಅಂದು ₹ 9,516 ಕೋಟಿ ಲಾಭ ಗಳಿಸಿತ್ತು ಎಂದು ರಿಲಯನ್ಸ್ ಇಂಡಸ್ಟ್ರಿ ತಿಳಿಸಿದೆ.
ಬಿಲಿಯನೇರ್ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹ 1.63 ಲಕ್ಷ ಕೋಟಿಯಷ್ಟು ಒಟ್ಟು ಆದಾಯ ಹೊಂದಿದೆ (ಕಳೆದ ವರ್ಷ ₹ 1.56 ಲಕ್ಷ ಕೋಟಿ). ಇಯರ್ ಆನ್ ಇಯರ್ (ಕಳೆದ ವರ್ಷಕ್ಕೆ ಹೋಲಿಸಿದರೆ) ಬೆಳವಣಿಗೆಯ ದರ ಶೇ. 4.8ರಷ್ಟು ಹೆಚ್ಚಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಟೆಲಿಕಾಂ ಆರ್ಮ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಈ ತ್ರೈಮಾಸಿಕದಲ್ಲಿ ಸುಮಾರು 33.8 ಮಿಲಿಯನ್ ಗ್ರಾಹಕರು ಸೇರ್ಪಡೆಗೊಂಡಿದ್ದಾರೆ. ಆದಾಯ ಮತ್ತು ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯ (ಇಬಿಐಟಿಡಿಎ) ಬೆಳವಣಿಗೆಯು ಕ್ರಮವಾಗಿ ಶೇ. 4.8 ಮತ್ತು ಶೇ. 15.5ರಷ್ಟಿದೆ. ರಿಲಯನ್ಸ್ ನಿವ್ವಳ ಲಾಭ ಶೇ. 18.3 ರಷ್ಟು ಏರಿಕೆಯಾಗಿ ₹ 11,262 ಕೋಟಿಗೆ ತಲುಪಿದೆ.