ETV Bharat / business

ಬದ್ರಿನಾಥ್​ ದೇಗುಲಕ್ಕೆ 2 ಕೋಟಿ ರೂ. ಕಾಣಿಕೆ ನೀಡಿದ ಮುಕೇಶ್​ ಅಂಬಾನಿ

ಮುಕೇಶ್​ ಅಂಬಾನಿ ಕಾಣಿಕೆ ನೀಡಿದ ಮರು ದಿನವೇ ಮತ್ತೊಬ್ಬ ಅನಿವಾಸಿ ಭಾರತೀಯ ಅಜಯ್ ಶಾ ಎಂಬುವವರು ₹ 1.25 ಕೋಟಿ ಮೌಲ್ಯದ ಚಿನ್ನದ ಎರಡು ಕಿರೀಟಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

ಮುಕೇಶ್​ ಅಂಬಾನಿ
author img

By

Published : May 26, 2019, 7:55 PM IST

ಚಮೋಲಿ: ರಿಲಾಯನ್ಸ್​ ಇಂಡಸ್ಟ್ರಿಸ್​​ ಮುಖ್ಯಸ್ಥ ಮುಕೇಶ್​ ಅಂಬಾನಿ ಅವರು ಬದ್ರಿನಾಥ್​ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ 2 ಕೋಟಿ ರೂ. ಕಾಣಿಕೆ ನೀಡಿದ್ದಾರೆ.

ನಿನ್ನೆ ಬದ್ರಿನಾಥ್ ದರ್ಶನ ಪಡೆದ ಬಳಿಕ, ದೇವಸ್ಥಾನಕ್ಕೆ ಅಗತ್ಯವಾದ ಶ್ರೀಗಂಧ ಹಾಗೂ ಕೇಸರಿ ಖರೀದಿಗಾಗಿ ಕಾಣಿಕೆ ಅರ್ಪಿಸಿದ್ದಾರೆ.

ದೇವಸ್ಥಾನಕ್ಕೆ ಆಗಮಿಸಿದ ಅಂಬಾನಿ ಅವರನ್ನು ಬದ್ರಿನಾಥ್ ಕೇದಾರನಾಥ್ ದೇವಸ್ಥಾನ ಸಮಿತಿಯ (ಬಿಕೆಟಿಸಿ) ಕಾರ್ಯನಿರ್ವಾಹಕ ಅಧಿಕಾರಿ ಬಿ.ಡಿ. ಸಿಂಗ್​ ಬರಮಾಡಿಕೊಂಡರು.

ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಅಂಬಾನಿ, ದೇಶದ ಒಳಿತಿಗಾಗಿ ಪ್ರಾರ್ಥಿಸಿದರು. ದೇವಸ್ಥಾನದ ಪೂಜೆಗೆ ಬೇಕಾಗಿರುವ ಶ್ರೀಗಂಧ ಪೂರೈಸಲು ತಮ್ಮ ತಂದೆ ಧೀರೂಭಾಯಿ ಅಂಬಾನಿ ಹೆಸರಲ್ಲಿ ತಮಿಳುನಾಡಿನ ಶ್ರೀಗಂಧ ಅರಣ್ಯದಲ್ಲಿ ಭೂಮಿ ಖರೀದಿಸಿ ದೇವಸ್ಥಾನಕ್ಕೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಮುಕೇಶ್​ ಅಂಬಾನಿ ಕಾಣಿಕೆ ನೀಡಿದ ಮರು ದಿನವೇ ಮತ್ತೊಬ್ಬ ಅನಿವಾಸಿ ಭಾರತೀಯ ಅಜಯ್ ಶಾ ಎಂಬುವವರು ₹ 1.25 ಕೋಟಿ ಮೌಲ್ಯದ ಚಿನ್ನದ ಎರಡು ಕಿರೀಟಗಳನ್ನು ದೇಣಿಗೆ ನೀಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.