ಗಾಂಧಿನಗರ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ' ನಿಜವಾದ ಕರ್ಮಯೋಗಿ ಮತ್ತು ಭಾರತದ ಉಕ್ಕಿನ ಮನಷ್ಯ' ಎಂದು ಪ್ರಶಂಸಿಸಿದ್ದಾರೆ.
ಭಾರತದಲ್ಲಿ ಉಕ್ಕನ ಮನಷ್ಯನೆಂದು ದೇಶದ ಪ್ರಥಮ ಗೃಹ ಸಚಿವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರನ್ನು ಕರೆಯುತ್ತಾರೆ.
ಪಂಡಿತ್ ದೀನ್ದಯಾಳ್ ಉಪಧ್ಯಾಯ ಪೆಟ್ರೋಲಿಯಂ ವಿಶ್ವವಿದ್ಯಾನಿಲಯದ 7ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಅಮಿತ್ ಭಾಯಿ ನೀವು ನಿಜವಾದ ಕರ್ಮಯೋಗಿ, ನೀವೇ ಭಾರತದ ನೈಜ್ಯ ಉಕ್ಕಿನ ಮನುಷ್ಯ. ನಿಮ್ಮಂತಹ ನಾಯಕ ಪಡೆದ ಗುಜರಾತ್ ಮತ್ತು ಭಾರತ ಹೆಮ್ಮೆ ಪಡುತ್ತದೆ ಎಂದು ಹೊಗಳಿದ್ದಾರೆ.
ಭಾರತ ಈಗ ಸುರಕ್ಷಿತವಾದವರ ಹಿಡತದಲ್ಲಿದೆ. ನಿಮ್ಮ ಮಹತ್ವಾಕಾಂಕ್ಷೆಗಳ ತಡೆಗೋಡೆಯನ್ನು ಎಂದಿಗೂ ಕಡಿಮೆ ಮಾಡಿಕೊಳ್ಳಬೇಡಿ. ದೊಡ್ಡ- ದೊಡ್ಡ ಕನಸುಗಳನ್ನು ಕಾಣಲು ಎಂದಿಗೂ ಹಿಂಜರಿಯಬೇಡಿ. ಭವಿಷ್ಯದ ಭಾರತವು ನಿಮ್ಮ ಮಹತ್ವಾಕಾಂಕ್ಷೆಯ ಕನಸುಗಳನ್ನು ಈಡೇರಿಸಲು ಸಾಕಷ್ಟು ಅವಕಾಶಗಳನ್ನು ನೀಡಲಿದೆ ಎಂದು ಆಶಿಸಿದರು.