ETV Bharat / business

ರಿಲಯನ್ಸ್​ಗೆ 1.62 ಲಕ್ಷ ಕೋಟಿ ರೂ. ಸಾಲದ ಹೊರೆ... ಡಿಸೆಂಬರ್​ ವೇಳೆಗೆ '0'ಕ್ಕಿಳಿಸುವ ಗುರಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ (ಆರ್​ಐಎಲ್) ಅಧ್ಯಕ್ಷ ಮಖೇಶ್ ಅಂಬಾನಿ ಕಳೆದ ವರ್ಷ ಆಗಸ್ಟ್​ನಲ್ಲಿ, 'ತೈಲದಿಂದ ದೂರಸಂಪರ್ಕ ಸಂಘಟನೆವರೆಗಿನ ವಹಿವಾಟನ್ನು ನಿವ್ವಳ ಸಾಲ ಮುಕ್ತವಾಗಿಸಲು 2021ರ ಮಾರ್ಚ್​ ತಿಂಗಳ ತನಕ ಗುರಿ ನಿಗದಿಪಡಿಸಿಕೊಂಡಿದ್ದಾಗಿ' ಹೇಳಿದ್ದರು. ಫೇಸ್​ಬುಕ್​ ಹಾಗೂ ಸೌದಿಯ ಆರಾಮ್​ಕೊ ನಡುವಿನ ಒಪ್ಪಂದ, ಉದ್ದೇಶಿತ ಮುಂಚಿನ ಸಮಯಕ್ಕೆ ಕಾರ್ಯ ಸಾಧುವಾಗಲಿದೆ.

author img

By

Published : May 1, 2020, 6:35 PM IST

Mukesh Ambani
ಮುಖೇಶ್ ಅಂಬಾನಿ

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್​ನಲ್ಲಿ 1.61 ಲಕ್ಷ ಕೋಟಿ ರೂ. ನಿವ್ವಳ ಸಾಲವಿದ್ದು, ತನ್ನ ಪ್ರಮುಖ ವ್ಯವಹಾರಗಳಲ್ಲಿ ಕಾರ್ಯತಂತ್ರದ ಹೂಡಿಕೆದಾರರನ್ನು ಕರೆತರುವ ಮೂಲಕ ಅದನ್ನು ಶೂನ್ಯಕ್ಕೆ ತಗ್ಗಿಸುವ ಗುರಿ ಇರಿಸಿಕೊಂಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ (ಆರ್​ಐಎಲ್) ಅಧ್ಯಕ್ಷ ಮಖೇಶ್ ಅಂಬಾನಿ ಕಳೆದ ವರ್ಷ ಆಗಸ್ಟ್​ನಲ್ಲಿ, 'ತೈಲದಿಂದ ದೂರಸಂಪರ್ಕ ಸಂಘಟನೆವರೆಗಿನ ವಹಿವಾಟನ್ನು ನಿವ್ವಳ ಸಾಲ ಮುಕ್ತವಾಗಿಸಲು 2021ರ ಮಾರ್ಚ್​ ತಿಂಗಳ ತನಕ ಗುರಿ ನಿಗದಿಪಡಿಸಿಕೊಂಡಿದ್ದಾಗಿ' ಹೇಳಿದ್ದರು.

ಫೇಸ್‌ಬುಕ್‌ನೊಂದಿಗಿನ 5.7 ಬಿಲಿಯನ್ ಡಾಲರ್ (43,547 ಕೋಟಿ ರೂ.) ಒಪ್ಪಂದ ಹಾಗೂ 53,125 ಕೋಟಿ ರೂ. ಹಕ್ಕುಗಳ ವಿತರಣೆ ಮತ್ತು ಸೌದಿ ಅರಾಮ್‌ಕೊ ಕಂಪನಿಗಳಿಗೆ ಹೆಚ್ಚಿನ ಪಾಲು ಮಾರಾಟದಿಂದ ಡಿಸೆಂಬರ್ ವೇಳೆಗೆ ಈ ಗುರಿ ಸಾಧಿಸುವ ಸಾಧ್ಯತೆಯಿದೆ.

2020ರ ಕ್ಯಾಲೆಂಡರ್ ವರ್ಷದೊಳಗೆ ಶೂನ್ಯ ನಿವ್ವಳ ಸಾಲ ಗುರಿಯನ್ನು ಸಾಧಿಸಲಾಗುವುದು. ಜೂನ್ ವೇಳೆಗೆ ಒಟ್ಟು 1.04 ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹಿಸುವ ಯೋಜನೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ಆರ್​ಐಎಲ್​ನ ಜಂಟಿ ಮುಖ್ಯ ಹಣಕಾಸು ಅಧಿಕಾರಿ ಶ್ರೀಕಾಂತ್ ವೆಂಕಟಾಚಾರಿ ಪ್ರಕಟಣೆಯಲ್ಲಿ ಹೇಳಿದರು.

ರಿಲಯನ್ಸ್ ತನ್ನ ತೈಲದಿಂದ ರಾಸಾಯನಿಕ ವ್ಯವಹಾರ ಮರು ಮೌಲ್ಯೀಕರಿಸುತ್ತದೆ. ಇದರಲ್ಲಿ ಗುಜರಾತ್‌ನ ಜಾಮ್​​ನಗರದಲ್ಲಿ ಸಂಸ್ಕರಣಾಗಾರಗಳು, ಪೆಟ್ರೋಕೆಮಿಕಲ್ ಆಸ್ತಿ, ವಾಹನ ಇಂಧನ ಮತ್ತು ಜೆಟ್​ ಇಂಧನದ ಚಿಲ್ಲರೆ ವ್ಯಾಪಾರದಲ್ಲಿ ಶೇ 51ರಷ್ಟು ಪಾಲಿನ 75 ಬಿಲಿಯನ್ ಡಾಲರ್ ಒಳಗೊಂಡಿದೆ. ಈ ಉದ್ಯಮದಲ್ಲಿ ಶೇ 20ರಷ್ಟು ಪಾಲು ಖರೀದಿಸಲು ಸೌದಿ ಅರಾಮ್ಕೊ ಮಾತುಕತೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.