ETV Bharat / business

ಟ್ರಂಪ್​ಗಿಂತ ಪ್ರಧಾನಿ ಮೋದಿ ಅತ್ಯಂತ ಜನಪ್ರಿಯ ನಾಯಕ..!

author img

By

Published : Apr 23, 2020, 6:38 PM IST

Updated : Apr 23, 2020, 7:01 PM IST

ಡೊನಾಲ್ಡ್​ ಟ್ರಂಪ್​ ಎರಡನೇ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದು, ಕಳೆದ 12 ತಿಂಗಳಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ 309 ಮಿಲಿಯನ್ ಕಾಮೆಂಟ್‌, ಲೈಕ್‌ ಮತ್ತು ಷೇರ್​ಗಳೊಂದಿಗೆ ಹೆಚ್ಚು ಸಂವಹನ ನಡೆಸಿದ್ದವರಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜೈರ್‌ ಬೋಲ್ಸನಾರೊ 205 ಮಿಲಿಯನ್ ಸಂವಹನ ನಡೆಸಿದ್ದಾರೆ. ಒಟ್ಟು 84 ಮಿಲಿಯನ್ ಸಂವಹನಗಳೊಂದಿಗೆ ಮೋದಿ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

Modi- Trump
ಮೋದಿ- ಟ್ರಂಪ್

ನ್ಯೂಯಾರ್ಕ್: ತಮ್ಮ ವೈಯಕ್ತಿಕ ಫೇಸ್​ಬುಕ್​ನಲ್ಲಿ ಸುಮಾರು 45 ಮಿಲಿಯನ್ ಅನುಯಾಯಿಗಳನ್ನು (ಲೈಕ್​) ಹೊಂದಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಫೇಸ್‌ಬುಕ್‌ನಲ್ಲಿ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿ ಮುಂದುವರೆದಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಇತರ ನಾಯಕರಗಿಂತ ತಮ್ಮ ಅನುಯಾಯಿಗಳೊಂದಿಗೆ ಹೆಚ್ಚಿನ ಸಂವಹನ ನಡೆಸಲು ಫೇಸ್​ಬುಕ್​ ಬಳಸಿಕೊಂಡವರಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಕೋವಿಡ್​-19 ಸಾಂಕ್ರಾಮಿಕದ ಮಧ್ಯೆಯೂ ಸಾಮಾಜಿಕ ನೆಟ್​ವರ್ಕಿಂಗ್ ಪ್ಲಾಟ್​ಫಾರ್ಮ್​ ಒಂದು ಈ ಬಗ್ಗೆ ಅಧ್ಯಯನ ನಡೆಸಿದೆ.

ಟ್ರಂಪ್ ಫೇಸ್‌ಬುಕ್‌ನಲ್ಲಿ ಎರಡನೇ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದು, ಸುಮಾರು 27 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಜೋರ್ಡಾನ್‌ನ ರಾಣಿ ರಾನಿಯಾ 16.8 ಮಿಲಿಯನ್ ಅನುಯಾಯಿಗಳ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಜಾಗತಿಕ ಸಂವಹನ ಸಂಸ್ಥೆ ಬಿಸಿಡಬ್ಲ್ಯೂ (ಬರ್ಸನ್) 'ಫೇಸ್‌ಬುಕ್‌ನಲ್ಲಿ ವಿಶ್ವ ನಾಯಕರು' ಶ್ರೇಯಾಂಕ ಹೆಸರಿನ ವರದಿಯಲ್ಲಿ ತಿಳಿಸಿದೆ.

ಈ ವರ್ಷದ ಫೆಬ್ರವರಿಯಲ್ಲಿ ಭಾರತ ಭೇಟಿಗೆ ಮುಂಚಿತವಾಗಿ, ಟ್ರಂಪ್ ಫೇಸ್‌ಬುಕ್‌ನಲ್ಲಿ ನಂ .1 ಸ್ಥಾನದಲ್ಲಿದ್ದಾರೆ ಎಂದು ಬೊಬ್ಬೆ ಹಾಕಿದ್ದರು.

ದೊಡ್ಡ ಗೌರವ, ನನ್ನ ಪ್ರಕಾರ? ಮಾರ್ಕ್ ಜೂಕರ್‌ಬರ್ಗ್ ಇತ್ತೀಚೆಗೆ ಡೊನಾಲ್ಡ್​ ಟ್ರಂಪ್ ಫೇಸ್‌ಬುಕ್‌ನಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ ಎಂದು ಹೇಳಿದ್ದರು. ನಂಬರ್ 2 ಭಾರತದ ಪ್ರಧಾನಿ ಮೋದಿ ಇದ್ದಾರೆ. ನಾನು ಎರಡು ವಾರಗಳಲ್ಲಿ ಭಾರತಕ್ಕೆ ಹೋಗುತ್ತಿದ್ದೇನೆ. ಅದನ್ನು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದರು.

ಟ್ರಂಪ್​ ಅವರು ಎರಡನೇ ಅತ್ಯಂತ ಜನಪ್ರಿಯ ವಿಶ್ವ ನಾಯಕರಾಗಿದ್ದು, ಕಳೆದ 12 ತಿಂಗಳಲ್ಲಿ ತಮ್ಮ ಫೇಸ್‌ಬುಕ್ ಪುಟದಲ್ಲಿ 309 ಮಿಲಿಯನ್ ಕಾಮೆಂಟ್‌, ಲೈಕ್‌ ಮತ್ತು ಷೇರ್​ಗಳೊಂದಿಗೆ ಹೆಚ್ಚು ಸಂವಹನ ನಡೆಸಿದ್ದವರಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಬ್ರೆಜಿಲ್ ಅಧ್ಯಕ್ಷ ಜೈರ್‌ ಬೋಲ್ಸನಾರೊ 205 ಮಿಲಿಯನ್ ಸಂವಹನ ನಡೆಸಿದ್ದಾರೆ. ಒಟ್ಟು 84 ಮಿಲಿಯನ್ ಸಂವಹನಗಳೊಂದಿಗೆ ಮೋದಿ ಮೂರನೇ ಸ್ಥಾನದಲ್ಲಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

Last Updated : Apr 23, 2020, 7:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.