ನವದೆಹಲಿ: ಹೊಸದಾಗಿ ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ (ಡಿಬಿಐಎಲ್) ಜತೆ ವಿಲೀನಗೊಂಡ ಲಕ್ಷ್ಮಿ ವಿಲಾಸ್ ಬ್ಯಾಂಕಿನ ಗ್ರಾಹಕರು ಎಲ್ಲಾ ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಬಹುದು. ಉಳಿತಾಯ ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳು ಯಥಾವತ್ತಾಗಿ ಮುಂದುವರಿಯಲಿವೆ ಎಂದು ಡಿಬಿಎಸ್ ಬ್ಯಾಂಕ್ ಇಂಡಿಯಾ ತಿಳಿಸಿದೆ.
ಲಕ್ಷ್ಮಿ ವಿಲಾಸ್ ಬ್ಯಾಂಕ್ (ಎಲ್‌ವಿಬಿ) ಡಿಬಿಎಸ್ ಬ್ಯಾಂಕ್ ಇಂಡಿಯಾ ಲಿಮಿಟೆಡ್ (ಡಿಬಿಐಎಲ್) ಜೊತೆಗೆ ವಿಲೀನಗೊಳಿಸಲಾಗಿದೆ ಎಂದು ಡಿಬಿಎಸ್ ಗ್ರೂಪ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಂಗಸಂಸ್ಥೆ ಎಂದು ಡಿಬಿಎಸ್ ಬ್ಯಾಂಕ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.
1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 45ರ ಅಡಿಯಲ್ಲಿ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿಶೇಷ ಅಧಿಕಾರಗಳ ಅಡಿಯಲ್ಲಿ ಎಲ್‌ವಿಬಿ ಅನ್ನು ಡಿಬಿಎಸ್ ಬ್ಯಾಂಕ್ ಇಂಡಿಯಾದಲ್ಲಿ ವಿಲೀನಗೊಳಿಸಿ ನವೆಂಬರ್ 27ರಿಂದ ಜಾರಿಗೆ ಬಂದಿದೆ.
ಡಿ.1ರಿಂದ RTGS ಮನಿ ಟ್ರಾನ್ಸ್ಫರ್, LPG ದರ, PNB ಎಟಿಎಂ ವಿತ್ಡ್ರಾ ಸೇರಿ ಏನೆಲ್ಲ ಬದಲಾವಣೆ? ಇಲ್ಲಿದೆ ವಿವರ
ಎಲ್‌ವಿಬಿ ಗ್ರಾಹಕರು ಎಲ್ಲಾ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಮುಂದುವರಿಸಬಹುದು. ಉಳಿತಾಯ ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಮುಂದಿನ ಸೂಚನೆ ಬರುವವರೆಗೂ ಹಿಂದಿನ ಎಲ್‌ವಿಬಿ ನೀಡುವ ದರಗಳಿಂದಲೇ ನಿಯಂತ್ರಿಸಲಾಗುತ್ತದೆ ಎಂದು ಡಿಬಿಎಸ್ ಬ್ಯಾಂಕ್ ತಿಳಿಸಿದೆ.
ಎಲ್ಲಾ ಎಲ್‌ವಿಬಿ ಉದ್ಯೋಗಿಗಳು ಈಗಿನ ಸೇವೆಯಲ್ಲಿ ಮುಂದುವರಿಯುತ್ತಾರೆ. ಈಗ ಎಲ್ವಿಬಿಯಲ್ಲಿರುವ ನಿಯಮಗಳು ಮತ್ತು ಷರತ್ತುಗಳ ಮೇಲೆ ಡಿಬಿಐಎಲ್ ನೌಕರರಾಗಿದ್ದಾರೆ ಎಂದು ತಿಳಿಸಿದೆ. ಎಲ್ಲಾ ಶಖೆಗಳು, ಡಿಜಿಟಿಲ್ ವಹಿವಾಟುಗಳು ಮತ್ತು ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿವೆ ಎಂದು ಬ್ಯಾಂಕ್ ಹೇಳಿದೆ.