ಬೆಂಗಳೂರು: ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಣಕ್ಕೆ ದೇಶಾದ್ಯಂತ ಲಸಿಕೆ ವಿತರಣೆ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಈ ಬಗ್ಗೆ ಒಂದು ಟ್ವೀಟ್ ಮಾಡಿ ಬಳಿಕ ಅದನ್ನು ಡಿಲೀಟ್ ಮಾಡಿದ್ದಾರೆ.
ಕಿರಣ್ ಮಜುಂದಾರ್ ಶಾ ನಿನ್ನೆ, ಆದಾಯ ತೆರಿಗೆ ಕಟ್ಟುವರಿಗೆ ಮೊದಲು ಕೊರೊನಾ ಲಸಿಕೆ ನೀಡಿ. ನಾವು ಇರುವವರು ಕೇವಲ ಮೂರು ಕೋಟಿ ಮಾತ್ರ. ಅವರೆಲ್ಲಾ ಮರಣಹೊಂದಿದರೇ ದೇಶ ಉಳಿಯುವುದು ಹೇಗೆ ಎಂದು ಟ್ವೀಟ್ ಮಾಡಿದ್ದರು. ಕೆಲ ಹೊತ್ತಿನಲ್ಲಿ ಅದನ್ನು ಡಿಲೀಟ್ ಕೂಡ ಮಾಡಿದ್ದರು.
ನಾವು ನಮ್ಮ ಹಾಸ್ಯಪ್ರಜ್ಞೆ ಕಳೆದುಕೊಂಡಿರುವುದರಿಂದ ನಾನು ನನ್ನ ಟ್ವೀಟ್ ಅನ್ನು ಅಳಿಸುತ್ತಿದ್ದೇನೆ. ಎಲ್ಲರೂ ಏಕೆ ಗಂಭೀರವಾಗಿದ್ದಾರೆ? ತೆರಿಗೆ ಪಾವತಿದಾರರು ಇತರರಿಗಿಂತ ಹೆಚ್ಚು ಆದ್ಯತೆ ಪಡೆಯಬೇಕೆಂದು ನಾನು ಗಂಭೀರವಾಗಿ ಸೂಚಿಸುತ್ತಿದ್ದೇನೆ ಎಂದು ಜನ ಭಾವಿಸುತ್ತಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ!! ಎಂದು ಬರೆದುಕೊಂಡಿದ್ದಾರೆ.