ETV Bharat / business

ದಿವಾಳಿ ಕೂಪದಿಂದ 'ಜೆಟ್'​ ಮೇಲೆತ್ತಲು 5 ಕಂಪನಿಗಳು ಆಸಕ್ತಿ..!

ಯುನೈಟೆಡ್ ಅರಬ್‌ ಎಮಿರೇಟ್ಸ್‌ ಮೂಲದ ಎತಿಹಾದ್ ಏರ್‌ವೇಸ್ ವಿಮಾನಯಾನ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿರುವ ಜೆಟ್‌ಏರ್ ವೇಸ್‌ನಲ್ಲಿ ಶೇ 24ರಷ್ಟು ಷೇರು ಹೊಂದಿದೆ. ಜೆಟ್‌ಗೆ ಸಾಲ ನೀಡಿದ ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಏಪ್ರಿಲ್​ 30ರಂದು ಸೂಕ್ತ ಬಿಡ್‌ದಾರರನ್ನು ನಿರ್ಧರಿಸಲಿದ್ದಾರೆ. ಏ. 8ರಂದು ಸಾಲ ನೀಡಿದವರು ಶೇ 75ರಷ್ಟು ಷೇರು ಖರೀದಿಗೆ ಇಒಐ ಕೋರಿದ್ದರು.

author img

By

Published : Apr 12, 2019, 11:31 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ಆರ್ಥಿಕ ಸಂಕಷ್ಟದಿಂದ ದಿನದಿಂದ ದಿನಕ್ಕೆ ದಿವಾಳಿಯಂಚಿಗೆ ತಲುಪುತ್ತಿರುವ ಜೆಟ್​ಏರ್​ವೇಸ್​ ಸಂಸ್ಥೆಯನ್ನು ನಷ್ಟದ ಕೂಪದಿಂದ ಮೇಲೆತ್ತಲು ಐದು ಕಂಪನಿಗಳು ಮುಂದೆ ಬಂದಿವೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಜೆಟ್‌ ಏರ್​ವೇಸ್‌ ಸಂಸ್ಥೆಯ ಷೇರು ಖರೀದಿಗೆ 5 ಕಂಪನಿಗಳು ಆಸಕ್ತಿ ತೋರಿಸುತ್ತಿವೆ ಎಂಬ ಮಾತುಗಳು ಕಾರ್ಪೊರೇಟ್‌ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

ಮೂಲಗಳ ಪ್ರಕಾರ, ಜೆಟ್ ಏರ್​ವೇಸ್ ಸಂಸ್ಥೆಯ ಷೇರು ಖರೀದಿಗೆ ಆಸಕ್ತಿ ವ್ಯಕ್ತಪಡಿಸಲು (ಇಒಐ) ಇಂದೇ ಕೊನೆಯ ದಿನವಾಗಿತ್ತು. ಹೀಗಾಗಿ, ಐದು ಪ್ರಮುಖ ಕಂಪನಿಗಳು ಶುಕ್ರವಾರ ಷೇರು ಖರೀದಿಗೆ ಒಲವು ತೋರಿವೆ. ಅಬುಧಾಬಿಯ ಎತಿಯಾದ್‌ ಏರ್ ವೇಸ್‌, ಸ್ಯಾನ್ ಫ್ರಾನ್ಸಿಸ್ಕೊದ ಖಾಸಗಿ ಹೂಡಿಕೆ ಕಂಪನಿ ಟಿಪಿಜಿ ಕ್ಯಾಪಿಟಲ್‌, ನ್ಯಾಷನಲ್‌ ಇನ್ವೆಸ್ಟ್ ಮೆಂಟ್‌ ಆ್ಯಂಡ್‌ ಇನ್ಫ್ರಾಸ್ಟ್ರಕ್ಚರ್‌ ಫಂಡ್‌ (ಎನ್‌ಐಐಎಫ್‌), ಇಂಡಿಗೊ ಪಾಲುದಾರ ಮತ್ತು ಥಿಂಕ್‌ ಈಕ್ವಿಟಿ ರೆಡಿಕ್ಲಿಫ್ ಕ್ಯಾಪಿಟಲ್‌ ಕಂಪನಿಗಳು ಈ ಸಾಲಿನಲ್ಲಿವೆ.

ಎತಿಹಾದ್‌ ಏರ್‌ವೇಸ್, ಜೆಟ್‌ಏರ್‌ವೇಸ್‌ನಲ್ಲಿ ಈಗಾಗಲೇ ಶೇ 24ರಷ್ಟು ಷೇರು ಹೊಂದಿದ್ದು, ಎಸ್‌ಬಿಐ ನೇತೃತ್ವದಲ್ಲಿ ಸಾಲ ನೀಡಿದವರು ಏಪ್ರಿಲ್​ 30ರಂದು ಸೂಕ್ತ ಬಿಡ್ ದಾರರನ್ನು ನಿರ್ಧರಿಸಲಿದ್ದಾರೆ. ಏ. 8ರಂದು ಸಾಲ ನೀಡಿದವರು ಶೇ 75ರಷ್ಟು ಷೇರು ಖರೀದಿಗೆ ಇಒಐ ಕೋರಿದ್ದರು.

ಜೆಟ್​ನಲ್ಲಿರುವ 58.95 ಲಕ್ಷ ಷೇರುಗಳನ್ನು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟದ ಮೂಲಕ ಸಾಲ ನೀಡಿದವರಿಗೆ ಮಾರಾಟ ಮಾಡಿದೆ. ವಿಮಾನಯಾನ ಸಂಸ್ಥೆಯ ಷೇರು ಮಾರಾಟಕ್ಕೆ ಎಸ್​ಬಿಐ ಕ್ಯಾಪ್‌ ಅನ್ನು ಸಲಹೆಗಾರರನ್ನಾಗಿ ನೇಮಿಸಿದೆ. ನಾಗರಿಕ ವಿಮಾನಯಾನ ಸಚಿವ ಸುರೇಶ್‌ ಪ್ರಭು ಆರ್ಥಿಕ ಮುಗಟ್ಟು ಶಮನಗೊಳಿಸುವ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್‌ ಸಿಂಗ್​ ಖರೋಲ್​ ಅವರಿಗೆ ಸೂಚಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.