ಜಮ್ಮು: ಜಮ್ಮು ಮತ್ತು ಕಾಶ್ಮೀರದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಜಮ್ಮು ಆ್ಯಂಡ್ ಕಾಶ್ಮೀರ ರಾಜ್ಯ ಸಹಕಾರಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಮೊಹಮ್ಮದ್ ಶಫಿ ದಾರ್ ಅವರನ್ನು ಬಹು ಕೋಟಿ ರೂ. ವಂಚನೆ ಪ್ರಕರಣದಲ್ಲಿ ಬಂಧಿಸಿದೆ.
ದಾರ್ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಿದ ಎಸಿಬಿ ನಿನ್ನೆ ನೋಟಿಸ್ ನೀಡಿತ್ತು. ನಕಲಿ ನಿರ್ಮಾಣ ಸಂಸ್ಥೆಗೆ ಸಹಕಾರಿ ಬ್ಯಾಂಕ್ನಿಂದ 223 ಕೋಟಿ ರೂ. ಸಾಲ ನೀಡಿ, ವಂಚನೆ ಎಸಗಿದ್ದಕ್ಕಾಗಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದರು.
ಶ್ರೀನಗರ ನಗರದ ಹೊರವಲಯದಲ್ಲಿನ ಸ್ಯಾಟ್ಲೈನ್ ಟೌನ್‌ಶಿಪ್ ನಿರ್ಮಿಸಲು ರಿವರ್ ಝೇಲಂ ಬಿಲ್ಡಿಂಗ್ ಸೊಸೈಟಿ ಎಂಬ ನಕಲಿ ನಿರ್ಮಾಣ ಕಂಪನಿಗೆ, ಸಹಕಾರಿ ಬ್ಯಾಂಕ್ನಿಂದ 223 ಕೋಟಿ ರೂ. ಸಾಲ ನೀಡಲಾಗಿತ್ತು.
ಬ್ಯಾಂಕ್ ಬ್ಯಾಲೆನ್ಸ್ ಶೀಟ್, ಆದಾಯ ತೆರಿಗೆ ರಿಟರ್ನ್, ಪ್ಯಾನ್ ಕಾರ್ಡ್ ಸಹ ಪಡೆಯದೆ ಕಂಪನಿಯ ಮಾಲೀಕ ಹಿಲಾಲ್ ಅಹ್ಮದ್ ಮಿರ್ ಅವರಿಗೆ ಸಾಲ ಮಂಜೂರು ಮಾಡಲಾಗಿತ್ತು.