ಬೆಂಗಳೂರು: ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್ ಕಂಪನಿಯನ್ನು ಐಟಿ ರಫ್ತಿನ ವಹಿವಾಟಿನಲ್ಲಿನ ಪ್ರಗತಿಯನ್ನು ಗುರುತಿಸಿದ ಭಾರತದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್(ಎಸ್‌ಟಿಪಿಐ), ಬೆಂಗಳೂರು ಟೆಕ್ ಶೃಂಗಸಭೆ- 2019ರಲ್ಲಿ 'ಕರ್ನಾಟಕದ ಐಟಿ ರತ್ನ' ಎಂದು ಹೆಸರಿಸಿದೆ.
2018-19ನೇ ಹಣಕಾಸು ವರ್ಷದಲ್ಲಿ ಇನ್ಫೋಸಿಸ್ ಐಟಿ ರಫ್ತು ವಿಭಾಗದಲ್ಲಿ ₹10,000 ಕೋಟಿಗೂ ಅಧಿಕ ವಹಿವಾಟು ನಡೆಸಿತ್ತು. ಈ ವಿಭಾಗದಲ್ಲಿ ಎಸ್‌ಟಿಪಿಐನ ಕರ್ನಾಟಕದ ಐಟಿ ರತ್ನವೆಂದು ಹೆಸರಿಸಿದೆ.
2,000 ಕೋಟಿ ರೂ.ಗಿಂತ ಹೆಚ್ಚು/ಸಮನಾದ ಮತ್ತು 10,000 ಕೋಟಿ ರೂ.ಗಿಂತ ಕಡಿಮೆ ರಫ್ತು ಮಾಡುವ 15 ಜಾಗತಿಕ ಕಂಪನಿಗಳನ್ನು ಕರ್ನಾಟಕದ ಐಟಿ ಸ್ನೇಹಿ ಎಂದು ಗುರುತಿಸಲಾಗಿದೆ. ಐಟಿ ಸ್ನೇಹಿ ಪ್ರಶಸ್ತಿ ಪುರಸ್ಕೃತರಲ್ಲಿ ಒರಾಕಲ್, ಗೋಲ್ಡ್ಮನ್ ಸ್ಯಾಚ್ಸ್, ಎಸ್ಎಪಿ ಲ್ಯಾಬ್ಸ್ ಮತ್ತು ಇಂಟೆಲ್ ಸೇರಿವೆ.